-->
Mangalore: ನಾನು ಅಮಿತ್ ಜೊತೆ ಹೋಗುತ್ತಿದ್ದೇನೆ, ತಾಯಿ, ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ: ಪತಿಗೆ ಮೆಸೇಜ್ ಮಾಡಿ ಪತ್ನಿ ನಾಪತ್ತೆ

Mangalore: ನಾನು ಅಮಿತ್ ಜೊತೆ ಹೋಗುತ್ತಿದ್ದೇನೆ, ತಾಯಿ, ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ: ಪತಿಗೆ ಮೆಸೇಜ್ ಮಾಡಿ ಪತ್ನಿ ನಾಪತ್ತೆ

ಮಂಗಳೂರು: ನಗರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಗಳಾದೇವಿ ನಿವಾಸಿ ಮಹಿಳೆಯೋರ್ವಳು ತನ್ನ ಪತಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಬಳಿಕ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 

ಪ್ರಿಯಾ ರಂಜಿತ್ (25) ನಾಪತ್ತೆಯಾದವರು.ಅವರು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಜು. 17ರಂದು ಬೆಳಗ್ಗೆ 7.45ಕ್ಕೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಸಂಜೆ 5ಕ್ಕೆ ಪತಿಗೆ ವಾಟ್ ಆ್ಯಪ್ ಮೂಲಕ ಮೆಸೇಜ್ ಮಾಡಿ 'ತಾನು ಅಮಿತ್ ಎಂಬವನೊಂದಿಗೆ ಹೋಗುತ್ತಿದ್ದು, ತಾಯಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ತಿಳಿಸಿದ್ದಾರೆ. ಆ ಬಳಿಕ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿದೆ.

5.1 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದು, ಮಲಯಾಳಂ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸುರು ಬಣ್ಣದ ಚೂಡಿದಾರ ಧರಿಸಿದ್ದರು. ಎಡಕೈಯಲ್ಲಿ ರಂಜಿತ್ ಎಂಬ ಹೆಸರಿನ ಟ್ಯಾಟೋ, ಬಲಕೈಯಲ್ಲಿ ಬಟರ್ ಫೈ ಟ್ಯಾಟೋ, ಮೂಗಿನ ಕೆಳಗೆ ಕಪ್ಪು ಮಚ್ಚೆ ಇದೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article