440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತರ ಪ್ರಬಲ ವಿರೋಧ: ಪ್ರತಿಭಟನೆಗೆ ರೈತ ಸಂಘಟನೆ ಎಚ್ಚರಿಕೆ
440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತರ ಪ್ರಬಲ ವಿರೋಧ: ಪ್ರತಿಭಟನೆಗೆ ರೈತ ಸಂಘಟನೆ ಎಚ್ಚರಿಕೆ
ಉಡುಪಿ ಜಿಲ್ಲೆಯ ಪಡುಬಿದ್ರಿಯಿಂದ ಮೂಲ್ಕಿ, ಏಳಿಂಜೆ, ನಿಡ್ಡೋಡಿ, ಮುಚ್ಚೂರು, ಎಡಪದವು, ಮೂಡಬಿದಿರೆ, ಬಂಟ್ವಾಳ, ಪುತ್ತೂರು ಮೂಲಕ ಕೇರಳಕ್ಕೆ ಹಾದು ಹೋಗಲಿರುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕಾಮಗಾರಿಯಿಂದ ಬೃಹತ್ ಪ್ರಮಾಣದಲ್ಲಿ ಕೃಷಿ ಭೂಮಿ ನಾಶವಾಗಲಿದ್ದು, ಈ ಕಾಮಗಾರಿಯನ್ನು ವಿರೋಧಿಸಿ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ ಘೋಷಿಸಿದೆ.
ಸಂಘದ ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಈ ವಿಷಯವನ್ನು ಪ್ರಕಟಿಸಿದ್ದಾರೆ.
ಪಡುಬಿದ್ರಿಯೆ ಕಂಪನಿ ಗುತ್ತಿಗೆದಾರರು, ರೈತರ ಕೃಷಿ ಭೂಮಿಯನ್ನು ಪೊಲೀಸ್ ಬಲ ಬಳಸಿಕೊಂಡು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಕೃಷಿ ಭೂಮಿಗೆ ತೊಂದರೆಯಾಗುವ ರೀತಿ ವಿದ್ಯುತ್ ಟವರ್‌ಗಳನ್ನು ಅಳವಡಿಸಿ ತೊಂದರೆಯಾಗುವ ರೀತಿ ಕಾಮಗಾರಿ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಬಲವಂತವಾಗಿ ಟವರ್ ಅಳವಡಿಸಲು ಮುಂದಾದರೆ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಘೋಷಣೆ ಮಾಡಿದ್ದಾರೆ.