-->
ಕುರಿ ಮಾಂಸದೊಂದಿಗೆ ನಾಯಿ ಮಾಂಸ ಬೆರೆಸಿ ಹೊಟೇಲ್‌ಗಳಿಗೆ ಸಪ್ಲೈ: ಅಡ್ಡಗಟ್ಟಿ ತಡೆದ ಪುನೀತ್ ಕೆರೆಹಳ್ಳಿ

ಕುರಿ ಮಾಂಸದೊಂದಿಗೆ ನಾಯಿ ಮಾಂಸ ಬೆರೆಸಿ ಹೊಟೇಲ್‌ಗಳಿಗೆ ಸಪ್ಲೈ: ಅಡ್ಡಗಟ್ಟಿ ತಡೆದ ಪುನೀತ್ ಕೆರೆಹಳ್ಳಿ


ಬೆಂಗಳೂರು: ಹೊರರಾಜ್ಯದಿಂದ ರೈಲಿನಲ್ಲಿ ಪ್ರತಿದಿನ ಸರಬರಾಜು ಆಗುತ್ತಿರುವ ಸಾವಿರಾರು ಕೆಜಿ ಕುರಿ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೀಗ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಲ್ಲಿ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿ ಮಾಂಸ ತುಂಬಿದ್ದ ಚೀಲಗಳನ್ನು ತಡೆದು ಆಕ್ರೋಶ ಹೊರಹಾಕಿದರು.

ಈ ನಾಯಿಮಾಂಸ ಬೆರೆತ ಕುರಿಮಾಂಸವನ್ನು ನಗರದಲ್ಲಿರುವ ಬಹುತೇಕ ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಸಂಬಂಧ ಕೆಲ ತಿಂಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್, ಸಾಕ್ಷಿ ಸಮೇತ ಬಿಬಿಎಂಪಿ, ಪೊಲೀಸರಿಗೆ ಮತ್ತು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ.

ಇದೀಗ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಸಂಜೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಲ್ಲಿ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿ ಮಾಂಸ ತುಂಬಿದ್ದ ಚೀಲಗಳನ್ನು ತೆಗೆದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಇದು ನಾಯಿ ಮಂಸವಲ್ಲ, ಕುರಿ ಮಾಂಸ ಎಂದು ಹೇಳಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮಾಂಸದ ಚೀಲಗಳು ಹಾಗೂ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಾತನಾಡಿರುವ ಪುನೀತ್ ಕೆರೆಹಳ್ಳಿ, ಜೈಪುರದಿಂದ ಕಮಟನ್ ಅಂತ ಹೇಳಿ ಬೇರೆ ಮಾಂಸ ತಂದಿದ್ದಾರೆ. ಬೇರೆ ಮಾಂಸದ ಜೊತೆ ನಾಯಿ ಮಾಂಸವನ್ನೂ ತಂದಿದ್ದಾರೆ. ಇದು ರಸಲ್ ಮಾರ್ಕೆಟ್‌ಗೆ ಹೋಗುತ್ತದೆ. ಮಾಂಸ ತಂದು ಅದಕ್ಕೆ ಮೀನು ಎಂದು ಏಕೆ ಬೋರ್ಡ್ ಹಾಕಿದ್ದಾರೆ. ನಾಯಿ ಮಾಂಸವೇ ಇರಬೇಕು ಅನ್ನೋ ಅನುಮಾನವಿದೆ. ಬಿಬಿಎಂಪಿ ಅಧಿಕಾರಿಗಳು ಬರಬೇಕು. ಇಲ್ಲೇ ಮಾಂಸ ಸೀಜ್ ಮಾಡಬೇಕು. ಯಾವ ಮಾಂಸ ಅಂತಾ ಗೊತ್ತಾಗಬೇಕು. ಕನಿಷ್ಠ 4 ದಿನದ ಹಿಂದೆ ಕಟ್ ಮಾಡಿರುವ ಮಾಂಸವಿದು. ಇದನ್ನ ಐಸ್ ಬಾಕ್ಸ್‌ನಲ್ಲಿ ತಂದಿರುವುದಕ್ಕೆ ಅನುಮತಿ ಇದೆಯಾ ಇದರ ಬಗ್ಗೆ ಅನುಮಾನ ಇದೆ ಎಂದು ಆರೋಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article