440 ಕೆ.ವ್ಯಾ. ವಿದ್ಯುತ್ ಲೈನ್ ಯೋಜನೆ: ಮಹಾ ಹೋರಾಟಕ್ಕೆ ರೈತ ಸಂಘಗಳು ಸಜ್ಜು
440 ಕೆ.ವ್ಯಾ. ವಿದ್ಯುತ್ ಲೈನ್ ಯೋಜನೆ: ಮಹಾ ಹೋರಾಟಕ್ಕೆ ರೈತ ಸಂಘಗಳು ಸಜ್ಜು
ಉಡುಪಿ-ಕಾಸರಗೋಡು ನಡುವಿನ 440 ಕಿ.ವ್ಯಾ ಎಂಬ ಮಹಾಮಾರಿ ಯೋಜನೆಗೆ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಹಾ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
ಪಡುಬಿದ್ರೆಯಿಂದ ಬಂಟ್ವಾಳ ಎಲ್ಲೂರು, ಇನ್ನಾ, ಎಳಿಂಜೆ, ಐಕಳ, ನಿಡ್ಡೋಡಿ, ಕಲ್ಲಮುಂಡ್ಕೂರು, ಅಶ್ವಥಪುರ, ಬಡಗ ಎಡಪದವು, ಕಿಲೆಂಜಾರು, ಕುಳವೂರು, ಅರಳ ಮಾರ್ಗವಾಗಿ ಮುಂದಕ್ಕೆ ಪಂಜಿಕಲ್ಲು,ವೀರಕಂಭ,ಕಲ್ಲಡ್ಕ,ವಿಟ್ಲ,ಕೇಪು,ಪುಣಚ್ಚ ಮಾರ್ಗವಾಗಿ ಹೋಗುವ ದರಿದ್ರ ಯೋಜನೆ ಇದಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
4 ವರ್ಷಗಳ ಹಿಂದೆ ನೊಂದ ರೈತಾಪಿ ವರ್ಗ ವಿಟ್ಲದ ಪರಿಸರದಲ್ಲಿ ಸಭೆ ಸೇರಿ ರಾಜೀವ ಗೌಡ ಇವರ ನೇತೃತ್ವದಲ್ಲಿ ವಿಟ್ಲ 440ಕಿ.ವೆ ಹೋರಾಟ ಸಮಿತಿಯನ್ನು ರಚಿಸಿದ್ದು ಇತಿಹಾಸವಾಗಿದೆ.
ಬಳಿಕ ಕ.ರಾ.ರೈತ ಸಂಘದ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಬೈಲುಗುತ್ತು ಇವರ ನೇತೃತ್ವದಲ್ಲಿ ಕಂದಾಯ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆದು ಹೋರಾಟದ ಹಾದಿ ಪ್ರಾರಂಭವಾಯಿತು.
ಅದಾಗಿಯೂ ಅದಾನಿ ಕಂಪೆನಿಯ ಈ ಖಾಸಗಿ ಯೋಜನೆಯನ್ನು ಜಾರಿಗೋಳಿಸಲು ಸ್ಟೆರ್ಲೈಟ್ ಕಂಪೆನಿಯು ಕಳ್ಳಕಾಕರಂತೆ ರೈತರ ಸ್ವಂತ ಜಮೀನಿಗೆ ಯಾವುದೇ ಅಪ್ಪಣೆಯಿಲ್ಲದೆ ಪ್ರವೇಶ ಮಾಡಿ ವಿದ್ಯುತ್ ಗೋಪುರ ಸ್ಥಾಪಿಸಲು ಅವಣಿಸುತ್ತಿದ್ದರು.ಆದರೆ ಆ ಪ್ರದೇಶದ ರೈತರು ಪ್ರತಿಭಟನೆ ಮಾಡಿ ಅವರನ್ನು ಅಲ್ಲಿಂದ ಒದ್ದೋಡಿಸುತ್ತಿದ್ದರು.
ಆ ಬಳಿಕ ಮುಂದಿನ ಹೆಜ್ಜೆಯಾಗಿ ಕ.ರಾ.ರೈತ ಸಂಘದ ರಾಜ್ಯಾಧ್ಯಕ್ಷರಾದ ಕೊಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆದಿತ್ತು.ಅ ಸಂದರ್ಭದಲ್ಲಿ ಮಂಗಳೂರಿನ ವಕೀಲರಾದ ಎಸ್.ಪಿ.ಚಂಗಪ್ಪ ಅವರು ಭಾಗವಹಿಸಿ ಬಳಿಕ ಮಾಜಿ ಸಚಿವರಾದ ರಮನಾಥ ರೈಯವರು ಬೆಂಬಲ ಸೂಚಿಸಿದ್ದರು.
ಈ ಮಧ್ಯೆ ಈ ಮಹಾಮಾರಿಯು ಪಡುಬಿದ್ರೆಯಿಂದ ಎಲ್ಲೂರು ಪ್ರವೇಶಿಸುವಾಗ ಜಯಂತ ಭಟ್ ಇವರ ನೇತೃತ್ವದಲ್ಲಿ ಹೋರಾಟದ ಕಿಚ್ಚು ಭುಗಿಲೆದ್ದಿತ್ತು.ಬಳಿಕ ಜಯಂತ ಭಟ್ ಇವರು ವಾಹನ ಅಫಘಾತದಲ್ಲಿ ಗಾಯಗೊಂಡು ದುರಾದೃಷ್ಟವಶಾತ್ ಮನೆ ಸೇರಬೇಕಾಯಿತು.
ಅಲ್ಲಿಂದ ಹೊರಟ ಈ ಅನಿಷ್ಟ ಯೋಜನೆಯು ಇನ್ನಾ ಗ್ರಾಮವನ್ನು ಪ್ರವೇಶಿಸುವ ಯೋಜನೆ ನಡೆಯಿತು.ಸಂಪತ್ಭರಿತವಾದ ಭತ್ತ ಗದ್ದೆಯ ಮಧ್ಯ ವಿದ್ಯುತ್ ಗೋಪುರ ನಿರ್ಮಿಸುವ ಕಾರ್ಯಕ್ಕೆ ಕೈಹಾಕಿದಾಗ ಅಲ್ಲಿನ ರೈತರು ಶ್ರೀ ಅಮರನಾಥ ಶೆಟ್ಟಿ ಎಂಬ ರೈತ ಹೋರಾಟಗಾರರ ನೇತೃತ್ವದಲ್ಲಿ ಪ್ರತಿಭಟಿಸಿದರು.
ಅಲ್ಲಿಯು ಪೋಲಿಸರ ದಬ್ಬಾಳಿಕೆ,ತಹಸಿಲ್ದಾರರ ಸರ್ವಧಿಕಾರಕ್ಕೆ,ಜಿಲ್ಲಾಧಿಕಾರಿಗಳ ಹಠಮಾರಿತನಕ್ಕೆ ಬಗ್ಗದ ರೈತಾಪಿ ವರ್ಗ ಪ್ರತಿಭಟನೆ ನಡೆಸಿದರು.ಆ ಪ್ರತಿಭಟನೆಯಲ್ಲಿ ಮಾಜಿ ಸಂಸದರಾದ ವಿನಯ ಕುಮಾರ್ ಸೊರಕೆ, ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಘಟಾನುಘಟಿ ನಾಯಕರು ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದ್ದರು.
ಆ ದಿನ ನಿಲ್ಲದ ಪ್ರತಿಭಟನೆಯ ಫಲವಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಎಬ್ಬಾಳ್ಕಾರ್ ಅವರು ಜಿಲ್ಲಾಧೀಕಾರಿಯೊಡನೆ ಬಂದು ಕಾಮಗಾರಿಯನ್ನು ನಿಲ್ಲಿಸಲು ಆದೇಶ ನೀಡಿರುತ್ತಾರೆ.ಆದರೂ ಸ್ಟೆರ್ಲೈಟ್ ಕಂಪೆನಿಯ ಅಧಿಕಾರಿಗಳ ತಂಡ ಎಳಿಂಜೆ ಗ್ರಾಮವನ್ನು ಪ್ರವೇಶ ಮಾಡಿತು.ಇದರಿಂದ ರೊಚ್ಚಿಗೆದ್ದ ರೈತರು ಎಳಿಂಜೆ ಹೊರಾಟ ಸಮಿತಿಯ ಮುಖ್ಯಸ್ಥರಾದ ಸುಖೀಶ್ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿಭಟನೆ ತಾರಕಕ್ಕೆರಿತು.ಭಯಗೊಂಡ ಅಧಿಕಾರಿಗಳು ಮುಲ್ಕಿ ಪೋಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ದಾಖಲಿಸಿದ್ದರೂ ನ್ಯಾಯ ಸಂದರಾದ ಪೋಲಿಸ್ ಅಧಿಕಾರಿಗಳು ಅತ್ಯಂತ ಸಹನೆಯಿಂದ ಎರಡು ಪಕ್ಷಗಳ ಅಭಿಪ್ರಾಯ ತಿಳಿದುಕೊಂಡು ರೈತರ ಹಿತರಕ್ಷಣೆ ಮಾಡಿ ಕಂಪೆನಿಯವರಿಗೆ ಎಚ್ಚರಿಕೆ ನೀಡಿದರು.
ಇದಕ್ಕಿಂತ ಮೊದಲು ನಿಡ್ಡೋಡಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಫೋನ್ಸ್ ಡಿಸೋಜಾ ಎಂಬ ಕೆಚ್ಚೇದೆಯ ರೈತ ಮಾತೃಭೂಮಿ ಸಂರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಕಂಪೆನಿಯ ಅಧಿಕಾರಿಗಳನ್ನು ಹಿಂದಕ್ಕೆ ಹೋಗುವಂತೆ ಮಾಡುವಲ್ಲಿ ಸಫಳರಾಗಿರುತ್ತಾರೆ.
ಇದನ್ನು ಮನಗೊಂಡ ವಿವಿಧ ಸಂಘಟನೆಗಳ ರೈತ ನಾಯಕರು ಕ.ರಾ.ರೈತ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿ ಇವರ ನೇತೃತ್ವದಲ್ಲಿ ತಾ.17/7/240ರಂದು ಮೂಡಬಿದ್ರೆಯಲ್ಲಿ ನಡೆದ ಸಭೆಯಲ್ಲಿ ಬರುವ ತಾ. 30/7/24 ನೆ ಮಂಗಳವಾರದಂದು ಬಡಗ ಎಡಪದವಿನ ಬೈತರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಭಟನೆಯನ್ನು ಏರ್ಪಡಿಸಿ 440 ಕಿ.ವೆ ವಿದ್ಯುತ್ ಯೋಜನೆಯನ್ನು ಉಭಯ ಜಿಲ್ಲೆಯಿಂದ ಹಿಮ್ಮೆಟ್ಟಿಸುನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರವಿತ್ರವಾದ ಕೃಷಿ ಭೂಮಿಯನ್ನು ಉಳಿಸಲು ಹಾಗೂ ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಸಾರ್ವಜನಿಕರ ಬೆಂಬಲವನ್ನು ರೈತ ಸಂಘಟನೆಗಳು ಕೋರಿಕೊಂಡಿವೆ.