-->
ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಭಾರೀ ಬೇಡಿಕೆ: 10ಲಕ್ಷ ಕೊಡುವೆನೆಂದರೂ ಮಾರಾಟಕ್ಕೆ ನಿರಾಕರಿಸಿದ ಚಮ್ಮಾರ

ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಭಾರೀ ಬೇಡಿಕೆ: 10ಲಕ್ಷ ಕೊಡುವೆನೆಂದರೂ ಮಾರಾಟಕ್ಕೆ ನಿರಾಕರಿಸಿದ ಚಮ್ಮಾರ



ಸುಲ್ತಾನಪುರ(ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಅಂಗಡಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಹೊಲಿದಿರಿವ ಚಪ್ಪಲಿಗಳನ್ನು 10 ಲಕ್ಷ ರೂ. ನೀಡಿ ಖರೀದಿಸಲು ಮುಂದೆ ಬಂದರೂ, ಅವುಗಳನ್ನು ಮಾರಾಟ ಮಾಡುವುದಕ್ಕೆ ಸುಲ್ತಾನಪುರದ ಹೊರವಲಯದ ವಿಧಾಯಕನಗರದ ಚಮ್ಮಾರ ರಾಮ್ ಚೇತ್ ನಿರಾಕರಿಸಿದ್ದಾರೆ.

ರಾಹುಲ್ ಗಾಂಧಿಯವರು ಹೊಲಿದಿರುವ ಚಪ್ಪಲಿಗಳನ್ನು ನನ್ನ ಅದೃಷ್ಟದ ಪಾದರಕ್ಷೆಗಳೆಂದು ಭಾವಿಸಿ, ಅವುಗಳಿಗೆ ಗಾಜಿನ ಚೌಕಟ್ಟು ಹಾಕಿಸಿ, ಜೋಪಾನವಾಗಿಡುತ್ತೇನೆ. ರಾಮ್ ಚೇತ್ ಈಗ ತಮ್ಮೂರಿನಲ್ಲಿ 'ಸಲೆಬ್ರಿಟ' ಆಗಿದ್ದಾರೆ. ಅವರ ಅಂಗಡಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದೇ ಇದಕ್ಕೆ ಕಾರಣ.

ರಾಮ್ ಚೇತ್ ವಿಧಾಯಕನಗರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ಜುಲೈ 26ರಂದು ಆ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರ ಅಂಗಡಿಗೆ ಭೇಟಿ ನೀಡಿ, ಅವರ ಕುಟುಂಬ ಹಾಗೂ ಕಷ್ಟಗಳ ಕುರಿತು ಮಾತನಾಡಿದ್ದರು. ಅದೇ ವೇಳೆ, ಚಪ್ಪಲಿಯನ್ನು ಹೊಲಿದಿದ್ದ ರಾಹುಲ್ ಗಾಂಧಿ, ಶೂ ಕೂಡ ಸಿದ್ಧಪಡಿಸಿದ್ದರು.

'ರಾಹುಲ್ ಗಾಂಧಿ ಅವರು ಭೇಟಿ ಬಳಿಕ ನನ್ನ ಅದೃಷ್ಟವೇ ಖುಲಾಯಿಸಿದೆ. ಈ ಮೊದಲು ನಾನು ಯಾರು ಎಂಬುದೇ ಜನರಿಗೆ ತಿಳಿದಿರಲಿಲ್ಲ. ಈಗ ಜನರು ನನ್ನನ್ನು ಗುರುತಿಸು- ತ್ತಿದ್ದಾರೆ. ಅಂಗಡಿಗೆ ಬಂದು, ನನ್ನ ಜೊತೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ' ಎಂದು ರಾಮ್ ಚೇತ್ ಹೇಳುತ್ತಾರೆ.

'ಇನ್ನೊಂದೆಡೆ, ರಾಮ್ ಚೇತ್ ಎದುರಿಸುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಅವರನ್ನು ಭೇಟಿ ಮಾಡುತ್ತಿದ್ದಾರೆ.ಬನನ್ನೊಂದಿಗೆ ಕುಳಿತು, ಚಪ್ಪಲಿ ಹೊಲಿಯುವ ಮೂಲಕ ರಾಹುಲ್ ಗಾಂಧಿ ನನ್ನ ಪಾಲುದಾರರಾಗಿದ್ದಾರೆ ಎಂದು ಅಭಿಮಾನದ ನಗೆ ಬೀರುತ್ತಾರೆ.

Ads on article

Advertise in articles 1

advertising articles 2

Advertise under the article