18 ಸಾವಿರ ಸಿಬ್ಬಂದಿಯನ್ನು ವಜಾಗೊಳಿಸಲು ಇಂಟೆಲ್ ನಿರ್ಧಾರ
Saturday, August 3, 2024
ಸ್ಯಾನ್‌ಫ್ರಾನ್ಸಿಸ್ಕೊ (ಎಎಫ್‌ಪಿ): ವೆಚ್ಚ ಕಡಿತಗೊಳಿಸು ಲವ ಉದ್ದೇಶವನ್ನು ಮುಂದಿಟ್ಟುಕೊಂಡು 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಅಮೆರಿಕದ ಇಲೆಕ್ಟ್ರಾನಿಕ್ ಚಿಪ್ ತಯಾರಿಕಾ ಕಂಪೆನಿ ಇಂಟೆಲ್ ನಿರ್ಧರಿಸಿದೆ.
ಜೂನ್ ತ್ರೈಮಾಸಿಕದಲ್ಲಿ ಕಂಪೆನಿಯು 13,401 ಕೋಟಿ ರೂ. ನಷ್ಟ ಅನುಭವಿಸಿದೆ. ಆದ್ದರಿಂದ, ಈ ವರ್ಷದಲ್ಲಿ ವೆಚ್ಚವನ್ನು 1.67 ಲಕ್ಷ ಕೋಟಿ ರೂಪಾಯಿಗೆ ತಗ್ಗಿಸಲು ಕಂಪೆನಿ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದೆ.
ಕಳೆದ ವರ್ಷ ಕಂಪೆನಿಯಲ್ಲಿ 1.24 ಲಕ್ಷ ಉದ್ಯೋಗಿಗಳಿದ್ದರು. ಈ ಪೈಕಿ ಶೇ 15ರಷ್ಟು ಉದ್ಯೋಗಿ ಗಳನ್ನು ವಜಾಗೊಳಿಸಲಿತ್ತು. ಉತ್ಪಾದನೆ ಮತ್ತು ತಂತ್ರಜ್ಞಾನದ ಪ್ರಕ್ರಿಯೆಯಲ್ಲಿ ಮೈಲಿಗಲ್ಲು ಸಾಧಿಸಿದ್ದರೂ ಜೂನ್ ತ್ರೈಮಾಸಿಕದಲ್ಲಿ ಕಂಪೆನಿಯ ಕಾರ್ಯಾಚರಣೆಯು ತೃಪ್ತಿಕರವಾಗಿಲ್ಲ ಎಂದು ಇಂಟೆಲ್‌ನ ಸಿಇಒ ಪ್ಯಾಟ್ ಗೆಲ್ಲಿಂಗರ್ ಹೇಳಿದ್ದಾರೆ.
ಆದ್ದರಿಂದ ಲಾಭ ಹೆಚ್ಚಿಸಲು ಮತ್ತು ಬ್ಯಾಲೆನ್ಸ್ ಶೀಟ್ ಬಲಪಡಿಸಲು ವೆಚ್ಚ ಕಡಿತಕ್ಕೆ ಮುಂದಾಗಿದ್ದೇವೆ' ಎಂದು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಡೇವಿಡ್ ಜಿನ್ನರ್ ಹೇಳಿದ್ದಾರೆ.