ದೇವರ ಚಿತ್ರದ 2 ನೇ ಹಾಡು ಬಿಡುಗಡೆ- ಗ್ಲಾಮರಸ್ ಲುಕ್ ನಲ್ಲಿ ಜಾಹ್ನವಿ ಕಪೂರ್
Wednesday, August 7, 2024
ಮುಂಬಯಿ: ಬಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ನಟನೆಯ 'ದೇವರ' ಚಿತ್ರದ 'ಎರಡನೇ ಹಾಡು ಬಿಡುಗಡೆಯಾಗಿದೆ. ಅನಿರುದ್ಧ ರವಿಚಂದರ್ ಸಂಗೀತ ನೀಡಿರುವ ಈ ಹಾಡು ಶಿಲ್ಪಾ ರಾವ್ ಕಂಠಸಿರಿಯಲ್ಲಿ ಮಧುರವಾಗಿ ಮೂಡಿಬಂದಿದೆ.
"ಸ್ವಾತಿಮುತ್ತೇ ಸಿಕ್ಕಂಗೈತೆ' ಎಂಬ ಸಾಹಿತ್ಯವಿರುವ ಈ ರೊಮ್ಯಾಂಟಿಕ್ ಹಾಡು ಎಲ್ಲರ ಗಮನ ಸೆಳೆಯುತ್ತಿದ್ದು, ಇದರಲ್ಲಿ ನಟಿ ಜಾಹ್ನವಿ ಕಪೂರ್ ಗ್ಲಾಮರಸ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.
ಈ ಹಾಡಿನಲ್ಲಿ ಜೂ. ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಜೋಡಿಯ ಆನ್‌ಸ್ಟೀನ್ ಕೆಮಿಸ್ಟ್ರಿಯೂ ನೋಡುಗರ ಕಣ್ಣರಳಿಸಿದೆ. ವರದರಾಜ್ ಚಿಕ್ಕಬಳ್ಳಾಪುರ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದಾರೆ. 'ದೇವರ' ಸಿನಿಮಾ ಮೂಲಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ದಕ್ಷಿಣ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಇದರಲ್ಲಿ ಖಳನಟರಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಈ ಹೈ ಆಕ್ಟೇನ್ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದ್ದು, ಮೊದಲ ಭಾಗ ಸೆಪ್ಟೆಂಬರ್ 27ರಂದು ತೆರೆಕಾಣಲಿದೆ.