-->
ಮಂಗಳೂರು: 2025ರಲ್ಲಿ ಲಾಂಚ್ ಆಗುವ ಸ್ಕೋಡಾ ಕಂಪೆನಿ ಕಾರಿಗೆ ಹೆಸರು ಸೂಚಿಸಿ ಕಾರು ಗೆದ್ದ ಮದ್ರಸಾ ಶಿಕ್ಷಕ

ಮಂಗಳೂರು: 2025ರಲ್ಲಿ ಲಾಂಚ್ ಆಗುವ ಸ್ಕೋಡಾ ಕಂಪೆನಿ ಕಾರಿಗೆ ಹೆಸರು ಸೂಚಿಸಿ ಕಾರು ಗೆದ್ದ ಮದ್ರಸಾ ಶಿಕ್ಷಕ



ಮಂಗಳೂರು: ಅದೃಷ್ಟ ಯಾರಿಗೆ ಯಾವಾಗ ಖುಲಾಯಿಸುತ್ತದೆಂದು ಹೇಳುವುದಕ್ಕೆ ಆಗುವುದಿಲ್ಲ. ಇದೀಗ ಈ ಅದೃಷ್ಟ ಮದ್ರಸಾ ಶಿಕ್ಷಕರೊಬ್ಬರ ಬಾಗಿಲು ತಟ್ಟಿದೆ‌. ಇವರು 2025ರಲ್ಲಿ ಲಾಂಚ್ ಆಗುವ ಸ್ಕೋಡಾ ಯುಎಸ್‌ವಿ ಕಾರಿಗೆ ಹೆಸರು ಸೂಚಿಸುವ ಮೂಲಕ ಕಾರನ್ನು ಬಹುಮಾನವಾಗಿ ಪಡೆದಿದ್ದಾರೆ.

ಸ್ಕೋಡಾ ಕಂಪೆನಿಯು 2025ರಲ್ಲಿ ಲಾಂಚ್ ಆಗುವ ಹೊಸ ಕಾರಿಗೆ ಸೂಕ್ತ ಹೆಸರು ಸೂಚಿಸುವಂತೆ ಹೇಳಿತ್ತು. ಇದಕ್ಕಿದ್ದ ಷರತ್ತು ಹೆಸರಿನ ಮೊದಲ ಅಕ್ಷರ 'K'ಯಿಂದ ಆರಂಭವಾಗಬೇಕು. ಕೊನೆಯ ಅಕ್ಷರ 'Q'ನಿಂದ ಅಂತ್ಯಗೊಳ್ಳಬೇಕು. ಯಾರ ಹೆಸರು ಸೂಕ್ತವಾಗುತ್ತದೋ ಅವರಿಗೆ ಲಾಂಚ್ ಆಗುವ ಮೊದಲ ಕಾರನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿತ್ತು. ಇದೀಗ ಕಾಸರಗೋಡು ಮೂಲದ 24ವರ್ಷದ ಮೊಹಮ್ಮದ್ ಜಿಯಾದ್ ಸೂಚಿಸಿರುವ ಹೆಸರು ಕೈಲಾಕ್ ಆಯ್ಕೆಯಾಗಿದೆ. 

ಸ್ಕೋಡಾ ಕಂಪೆನಿಯ ಹೊಚ್ಚಹೊಸ ಕಾರಿಗೆ ವಿಶ್ವದಾದ್ಯಂತ 2ಲಕ್ಷ ಮಂದಿ ಹೆಸರು ಸೂಚಿಸಿದ್ದರು. ಅಂತಿಮವಾಗಿ ಸ್ಕೋಡಾ ಕಂಪೆನಿಯು ಕ್ವಿಕ್, ಕೈಲಾಕ್, ಕೋಸ್ಮಿಕ್, ಕೈರೋಕ್, ಕಾರಿಕ್, ಕಾರ್ಮಿಕ್, ಕ್ಲಿಕ್, ಮತ್ತು ಕಯಾಕ್ ಎಂಬ 8ಹೆಸರುಗಳನ್ನು ವೋಟ್‌ ಮಾಡಲು ಅನೌನ್ಸ್ ಮಾಡಿತ್ತು. ಇದರಲ್ಲಿ ಕ್ವಿಕ್, ಕೈಲಾಕ್, ಕೋಸ್ಮಿಕ್, ಕ್ಲಿಕ್, ಮತ್ತು ಕಯಾಕ್ ಎಂಬ 5ಹೆಸರುಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ  ಜಿಯಾದ್ ಸೂಚಿಸಿರುವ ‘ಕೈಲಾಕ್’ ಹೆಸರು ಅಂತಿಮವಾಗಿ ಆಯ್ಕೆಯಾಗಿದೆ. ಕೈಲಾಕ್ ಅಂದರೆ ಸಂಸ್ಕೃತದಲ್ಲಿ ಸ್ಪಟಿಕ ಎಂಬ ಅರ್ಥ ಬರುತ್ತದೆಯಂತೆ.

ಸ್ಕೋಡಾ ಕಂಪೆನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಿಯಾದ್ ಕಾಸರಗೋಡು ಈ ಸ್ಪರ್ಧೆಯಲ್ಲಿ ವಿಜೇತರಾಗಿ ಹೊಸ ಸ್ಕೋಡಾ ಕೈಲಾಕ್ ಕಾರು ಗೆದ್ದಿದ್ದಾರೆ ಎಂದು ಅನೌನ್ಸ್ ಮಾಡಿತ್ತು. ಜಿಯಾದ್ ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಕುರಾನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article