-->
ಐಟಿಐ ತೇರ್ಗಡೆಯಾದವರಿಗೆ ದುಬೈ ಶಿಪ್ ಯಾರ್ಡ್ ನಲ್ಲಿ ತರಬೇತಿ: ಅರ್ಜಿ ಆಹ್ವಾನ| 27500 ರೂ ಸಂಬಳ

ಐಟಿಐ ತೇರ್ಗಡೆಯಾದವರಿಗೆ ದುಬೈ ಶಿಪ್ ಯಾರ್ಡ್ ನಲ್ಲಿ ತರಬೇತಿ: ಅರ್ಜಿ ಆಹ್ವಾನ| 27500 ರೂ ಸಂಬಳ

 



ಮಂಗಳೂರು,: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (KSDC) ಅಧೀನದಲ್ಲಿರುವ ಅಂತರಾಷ್ಟ್ರೀಯ ವಲಸಿಗರ ಕೇಂದ್ರದ ಮೂಲಕ ಹೊಸದಾಗಿ ITI ತೇರ್ಗಡೆಯಾದ ಅಭ್ಯರ್ಥಿಗಳಿಗೆ ದುಬೈ ಶಿಪ್ ಯಾರ್ಡ್ ನಲ್ಲಿ ತರಬೇತಿ, ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.


     ಪ್ರಾಯೋಗಿಕ ಕೌಶಲ್ಯಾಭಿವೃದ್ಧಿ ಮತ್ತು ಬಹು-ವಿಭಾಗೀಯ ಔದ್ಯೋಗಿಕ ತರಬೇತಿ ಒಳಗೊಂಡ ವೃತ್ತಿ ಜೀವನ ನಿರ್ಮಾಣದ ವಿಶಿಷ್ಟ ಅಪ್ರೆಂಟಿಸ್ ಕಾರ್ಯಕ್ರಮ ಇದಾಗಿದೆ. 18 ರಿಂದ 23 ವರ್ಷಗಳ ಒಳಗಿನ, ಸರಳ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ಸಂಬಳ/ಸ್ಟೆಫಂಡ್  ಪ್ರತಿ ತಿಂಗಳಿಗೆ 27,500 ವರೆಗೆ ನೀಡಲಾಗುತ್ತದೆ.


ಹೆಚ್ಚುವರಿ ಪ್ರಯೋಜನಗಳು: ಉಚಿತ ವಿಮಾನ ಟಿಕೆಟ್, ವೈದ್ಯಕೀಯ ವಿಮೆ, ವಾರ್ಷಿಕ ರಜೆಗಳು, ವಸತಿ, ಉಚಿತ ಆಹಾರ, ಉಚಿತ ಸಾರಿಗೆ ವ್ಯವಸ್ಥೆ ನೀಡಲಾಗುತ್ತದೆ.

ವಿದ್ಯಾರ್ಹತೆ: ಐಟಿಐ, ಮಲ್ಟಿಪಲ್ ಟ್ರೇಡ್ ಗಳು - ಫಿಟ್ಟರ್, ಫ್ಯಾಬ್ರಿಕೇಟರ್, ವೆಲ್ಡರ್.    2020-21 ರಲ್ಲಿ ಅಥವಾ ನಂತರ ಮಾತ್ರ ಉತ್ತೀರ್ಣರಾಗಿರಬೇಕು. 2 ವರ್ಷಗಳ ತರಬೇತಿ ಮತ್ತು 3 ವರ್ಷಗಳ ನಂತರ ಟ್ರೇಡ್/ಟೆಕ್ನಿಷಿಯನ್ ಹುದ್ದೆಯಾಗಿ ಕೆಲಸ ನಿರ್ವಹಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನ.


ಆಸಕ್ತ ಅಭ್ಯರ್ಥಿಗಳು http://imck.kaushalkar.com/

ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ತಮ್ಮ ಬಯೋಡೆಟಾವನ್ನು hr.imck@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸಿಗರ ಕೇಂದ್ರದ (IMC-K) ದೂರವಾಣಿ ಸಂಖ್ಯೆ: 9606492213 / 9606492214 ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article