-->
ಆ. 6: ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ನಿಲುಗಡೆ

ಆ. 6: ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ನಿಲುಗಡೆ

 


 

ಮಂಗಳೂರು: ಉಡುಪಿ ಜಿಲ್ಲೆಯ ವಿವಿಧೆಡೆ ಆ.6 ರಂದು ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

 

ಕಾರ್ಕಳ ತಾಲೂಕು: ಆ. 6ರಂದು ವಿದ್ಯುತ್‌ ನಿಲುಗಡೆ

 

ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ 110/11 ಕೆ.ವಿ. ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರ್‌ಗಳಾದ ಬೆಳ್ಮಣ್, ನಂದಳಿಕೆ, ಸೂಡ ಹಾಗೂ 33/11 ಕೆ.ವಿ. ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ. ಹೆಬ್ರಿ ಫೀಡರ್‌ಗಳ ವ್ಯಾಪ್ತಿಗಳಲ್ಲಿ ಆ.6ರಂದು ವಿದ್ಯುತ್ ಪೂರೈಕೆ ನಿಲುಗಡೆಗೊಳ್ಳಲಿದೆ.

 

ಅಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಕಳ ತಾಲೂಕಿನ  ಬೆಳ್ಮಣ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಮಣ್ ದೇವಸ್ಥಾನ, ನಂದಳಿಕೆ, ಕೆದಿಂಜೆ, ಇಟ್ಟಮೇರಿ ಮಾವಿನಕಟ್ಟೆ, ದೇಂದೊಟ್ಟು ಪದವು, ಮುಂಡ್ಕೂರು, ಮುಲ್ಲಡ್ಕ, ಕೊಡಿಮಾರ್ , ನಾನಿಲ್ ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಸೂಡ ಗರಡಿ, ಪಡುಬೆಟ್ಟು, ಸೂಡ ದೇವಸ್ಥಾನ, ಹೆಬ್ರಿ ತಾಲೂಕಿನ ಹೆಬ್ರಿ, ಮುದ್ರಾಡಿ, ಮುನಿಯಾಲು, ಬಚ್ಚಪ್ಪು, ಕಬ್ಬಿನಾಲೆ, ಮಂಡಾಡಿಜೆಡ್ಡು, ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಬೆಳೆಂಜೆ, ಮಡಾಮಕ್ಕಿ, ಕಾಸನಮಕ್ಕಿ, ಶಿವಪುರ, ಕಾನ್ಬೆಟ್ಟು, ಕನ್ಯಾನ, ಚಾರ, ಹೊಸೂರು, ಹುತ್ತುರ್ಕೆ ವಾಟರ್ ಸಪ್ಲೈ, ಕಲ್ಲಿಲ್ಲು ವಾಟರ್ ಸಪ್ಲೈ, ಸೀತಾನದಿ, ಸೋಮೇಶ್ವರ, ನಾಡ್ಪಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

 

ಉಡುಪಿ: ಆ. 6 ರಂದು ವಿದ್ಯುತ್‌ ನಿಲುಗಡೆ

 

ನಿಟ್ಟೂರು  110/33/11 ಕೆ.ವಿ.  ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕೊಡವೂರು ಮತ್ತು ಮಲ್ಪೆ ಫೀಡರ್ ವ್ಯಾಪ್ತಿಗಳಲ್ಲಿ ಆ. 6ರಂದು ವಿದ್ಯುತ್‌ ಪೂರೈಕೆ ವ್ಯತ್ಯಯವಾಗಲಿದೆ.

 

ಅಂದು ಈ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಬೆಳಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ  ಕೊಡವೂರು, ಕಾನಂಗಿ, ಮೂಡಬೆಟ್ಟು, ಸಾಲ್ಮರ, ಮಲ್ಪೆ ಮಧ್ವರಾಜ ರಸ್ತೆ, ಫಿಶ್ ಕ್ಯೂರಿಂಗ್ ಯಾರ್ಡ್, ಸಿಟಿಜನ್ ಸರ್ಕಲ್, ಮಧ್ವನಗರ, ಹೆಬ್ಬಾರ್ ರಸ್ತೆ, ಆದಿ ಉಡುಪಿ

ಮಾರ್ಕೆಟ್ ಹಿಂದೆ, ಕಂಗನಬೆಟ್ಟು, ಪುತ್ತೂರು, ಲಕ್ಷ್ಮೀನಗರ, ಗರಡೆ ಲಕ್ಷ್ಮೀನಗರ, ಸುಬ್ರಹ್ಮಣ್ಯನಗರ, ಶ್ರೀನಗರ, ಮಲ್ಪೆ, ಕೊಳ, ತೊಟ್ಟಂ, ಬಡಾನಿಡಿಯೂರು, ತೆಂಕನಿಡಿಯೂರು, ಉದ್ದಿನಹಿತ್ಲು, ಬೈಲಕೆರೆ, ಮಲ್ಪೆ ಬೀಚ್, ವಡಭಾಂಡೇಶ್ವರ ಮತ್ತು ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

ಕುಂದಾಪುರ ತಾಲೂಕು: ಆ. 6ರಂದು ವಿವಿದೆಡೆ ವಿದ್ಯುತ್‌ ನಿಲುಗಡೆ

 

ಹಾಲಾಡಿ 110/11ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬೆಳ್ವೆ ಮತ್ತು ಹೈಕಾಡಿ ಮಾರ್ಗಗಳ ವ್ಯಾಪ್ತಿಗಳಲ್ಲಿ ಆ. 6ರಂದು  ವಿದ್ಯುತ್ ಪೂರೈಕೆ‌ ವ್ಯತ್ಯಯಗೊಳ್ಳಲಿದೆ. ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅದುದರಿಂದ ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಮಡಾಮಕ್ಕಿ, ಶೇಡಿಮನೆ, ಹೈಕಾಡಿ ಮತ್ತು ಗೋಳಿಯಂಗಡಿ ಗ್ರಾಮಗಳು‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ   ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಕುಂದಾಪುರ-ನಾವುಂದ

ಕುಂದಾಪುರ- ನಾವುಂದ 110 ಕೆ.ವಿ. ವಿದ್ಯುತ್‌ ಮಾರ್ಗದ ಗೋಪುರ ಸಂಖ್ಯೆ 19ರಿಂದ 28 ರವರೆಗೆ ಆ. 6 ರಂದು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಘಾಇ ಅಂದು  ಬೆಳಗ್ಗೆ 10 ರಿಂದ ಮಧ್ಯಾಹ್ನ 2  ಗಂಟೆಯವರೆಗೆ 110/11 ಕೆ.ವಿ. ನಾವುಂದ ವಿದ್ಯುತ್‌ ಉಪಕೇಂದ್ರ ಹಾಗೂ 33/11 ಕೆ.ವಿ. ಬೈಂದೂರು ಮತ್ತು ಕೊಲ್ಲೂರು ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಾದ ಹೇರೂರು,ಮರವಂತೆ, ಕಂಬದಕೋಣೆ, ಕಿರಿಮಂಜೇಶ್ವರ, ಆಲೂರು, ಬಡಾಕೆರೆ ಶಿರೂರು, ಉಪ್ಪುಂದ, ಗಂಗನಾಡು, ಬೈಂದೂರು, ತೂದಳ್ಳಿ, ತಗ್ಗರ್ಸೆ, ಯಳಜಿತ್‌, ಮುದೂರು ಹಾಗೂ ಕೊಲ್ಲೂರು ಫೀಡರ್ ವದಯಾಪ್ತಿಗಳಲ್ಲಿ

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

 

ವಿದ್ಯುತ್‌ ವ್ಯತ್ಯಯ ಉಂಟಾಗುವ ಪ್ರದೇಶಗಳು:

ಹೇರಂಜಾಲು, ಕಂಬದಕೋಣೆ, ಹೇರೂರು, ಕಾಲ್ತೋಡು, ಉಳ್ಳೂರು-11, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು, ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಅರೆಶಿರೂರು, ಎಲ್ಲೂರು, ಬಾಳ್‌ಕೊಡ್ಲು, ಹಾಲ್ಕಲ್‌, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್‌ ಬೀಸಿನಪಾರೆ, ಸೆಳ್‌ಕೊಡು, ಕಾನ್ಕಿ, ಮೆಕ್ಕೆ,

ಮುದೂರು, ಅರೆಹೊಳೆ, ನಾಗೂರು ಬೈಂದೂರು, ಶಿರೂರು, ಯಡ್ತರೆ, ತಗ್ಗರ್ಸೆ, ಬಿಜೂರು, ಉಪ್ಪುಂದ, ಪಡುವರಿ, ನಂದನವನ, ಕೆರ್ಗಾಲ್‌, ಕಂಬದಕೋಣೆ, ಯಳಜಿತ್‌, ಗೋಳಿಹೊಳೆ ಹಾಗೂ ಕೊಲ್ಲೂರು ಗ್ರಾಮಗಳು ಹಾಗೂ

ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

 

ತಲ್ಲೂರು/ಗಂಗೊಳ್ಳಿ

 

ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ  ಆ. 6 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 33/11 ಕೆ.ವಿ. ಮಾರ್ಗದಲ್ಲಿ 33 ಕೆ.ವಿ.  ಕುಂದಾಪುರ- ತಲ್ಲೂರು- ಗಂಗೊಳ್ಳಿ ಮುಖ್ಯ ಮಾರ್ಗ ಹಾಗೂ 33/11 ಕೆ.ವಿ. ತಲ್ಲೂರು ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ ಹಾಗೂ 33/11 ಕೆ.ವಿ. ಗಂಗೊಳ್ಳಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಫೀಡರುಗಳ ವಂಡ್ಸೆ, ಚಿತ್ತೂರು, ಬೆಳ್ಳಾಲ,ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ,ಕಾವ್ರಾಡಿ, ಅಂಪಾರು, ಬೆಳ್ಲಾಲ, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು,ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್‌ಬೆಲ್ತೂರು ಮತ್ತು ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article