ರೈಲ್ವೆ ನೇಮಕಾತಿ ಆರಂಭ : 7,386 ಇಂಜಿನಿಯರ್ ಹುದ್ದೆಗಳ ಭರ್ತಿಗೆ ನಿಶಾನೆ
Friday, August 2, 2024
ರೈಲ್ವೆ ಸಚಿವಾಲಯ ಮತ್ತೊಂದು ದೊಡ್ಡ ನೇಮಕಾತಿಗೆ ಚಾಲನೆ ದೊರಕಿದ್ದು, ಜನವರಿಯಲ್ಲಿ ಪ್ರಾರಂಭಿಸಲಾಗಿದ್ದ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ.
ಇದೀಗ ಎಲ್ಲ 'ರೈಲ್ವೆ ನೇಮಕಾತಿ ಮಂಡಳಿ'ಗಳ (KRHs) ವ್ಯಾಪ್ತಿಯಲ್ಲಿ 7,386 ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಸಚಿವಾಲಯ ಹಸಿರು ನಿಶಾನೆ ತೋರಿಸಿದ್ದು, ಜುಲೈ 30ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಆಗಸ್ಟ್ 30 ಕಡೆಯ ದಿನವಾಗಿದೆ.
ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿ 500 ರೂ. ಮಾಜಿ ಸೈನಿಕ, ಎಸ್‌ಸಿ/ ಎಸ್ಟಿ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ವಿಧಿಸಲಾಗಿದೆ.
18 ರಿಂದ 36 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು ಎಸ್‌ಸಿ, ಎಸ್‌ಟಿ, ಒಬಿಸಿ, ಇತರೆ ಅಭ್ಯರ್ಥಿಗಳಿಗೆ ವಯೋಮಾನದಲ್ಲಿ ಸಡಿಲಿಕೆಯಿದೆ. ಮೂರು ವರ್ಷದ ತಾಂತ್ರಿಕ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿಯನ್ನು ನಿಗದಿತ ವಿಷಯಗಳಲ್ಲಿ (ಅಧಿಸೂಚನೆ ಪರಿಶೀಲಿಸಿ) ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.
ದೇಶದಲ್ಲಿರುವ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಒಟ್ಟಾರೆ ಹುದ್ದೆಗಳಲ್ಲಿನ ತಮ್ಮ ವ್ಯಾಪ್ತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಅಭ್ಯರ್ಥಿಗಳು ತಮ್ಮ ಇಷ್ಟದ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಒಬ್ಬ ಅಭ್ಯರ್ಥಿ ಒಂದು ಕಡೆಗೆ ಮತ್ತು ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಇದಕ್ಕಾಗಿ ಎಲ್ಲ ಮಂಡಳಿಗಳಿಗೂ ಅನ್ವಯವಾಗುವಂತೆ ಏಕೀಕೃತ ವಿವರಾಣಾತ್ಮಕ ಅಧಿಸೂಚನೆ ಹೊರಡಿಸಲಾಗಿದೆ.
21 ರೈಲ್ವೆ ನೇಮಕಾತಿ ಮಂಡಳಿಗಳು
ಭಾರತೀಯ 17 ವಲಯಗಳಲ್ಲಿ ಒಟ್ಟು 21 ವೈದ್ಯಕೀಯ ನೇಮಕಾತಿ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು, ಅಶ್ಮೀರ್, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಬಿಲಾಸ್‌ಪುರ, ಚಂಡೀಗಢ, ಚೆನ್ನೈ, ಗೋರಖಪುರ, ಗುವಾಹಟಿ, ಬೆಲೆ, ಶ್ರೀನಗರ, ಕೋಲ್ಕತ್ತ, ಮಾಲ್ವಾ, ಮುಂಬೈ, ಮುಜಾಫರ್‌ಪುರ, ಪಟ್ನಾ, ಪ್ರಯಾಗರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ, ತಿರುವನಂತಪುರ.
ನೇಮಕಾತಿ ಪ್ರಕ್ರಿಯೆ ಹೇಗಿದೆ?
CRT-1: ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ-1 ನಡೆಯಲಿದೆ. ಇದರಲ್ಲಿ 100 ಪ್ರಶ್ನೆಗಳಿಗೆ 100 ಅಂಕಗಳ 90 ನಿಮಿಷ ಅವಧಿಯ ಒಂದೇ ಪತ್ರಿಕೆ ಇರುತ್ತದೆ. ಇದು ಸಾಮಾನ್ಯ ಜ್ಞಾನದ ಪತ್ರಿಕೆಯಾಗಿರುತ್ತದೆ. ತಲಾ 4 ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಇದರಲ್ಲಿ ಕನಿಷ್ಠ (ಶೇ. 40) ಅಂಕಗಳನ್ನು ಪಡೆಯಲೇಬೇಕು. 1:15 ಅನುಪಾತದಂತೆ ಮುಂದಿನ ಹಂತಕ್ಕೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಹೊಂದಿರುತ್ತದೆ.
CBT-2: 1500 150 150 6 120 5 ಒಂದೇ ಪತ್ರಿಕೆ ಇರುತ್ತದೆ. ಇದು ವಿಷಯಾಧಾರಿತ ಪತ್ರಿಕೆಯಾಗಿರುತ್ತದೆ. ತಲಾ 4 ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಹೊಂದಿರುತ್ತದೆ.
3 ಮತ್ತು 4ನೇ ಹಂತ: ಸಿಬಿಟಿ ಎರಡರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮೂರನೇ ಹಂತದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಾಲ್ಕನೇ ಹಂತದಲ್ಲಿ ವಿವರವಾದ ವೈದ್ಯಕೀಯ ಪರೀಕ್ಷೆ ಇರಲಿದೆ. ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ರೈಲ್ವೆ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ವರ್ಗೀಕರಣ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ವಿವರವಾದ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬೇಕು.