ಹಣ ಕೊಡ್ತೇನೆ.. ರೇಪ್ ಕೇಸ್ ಹಿಂಪಡೆಯಿರಿ: ಅಯೋಧ್ಯೆ ರೇಪ್ ಸಂತ್ರಸ್ತೆಗೆ ಆಮೀಷ | AYODHYA
Monday, August 5, 2024
ಲಖನೌ: ಅತ್ಯಾಚಾರದ ದೂರು ಹಿಂದಕ್ಕೆ ಪಡೆಯುವಂತೆ
ಸಮಾಜವಾದಿ ಪಕ್ಷದ ಮುಖಂಡರು ಹಣದ ಆಮಿಷ ಒಡ್ಡಿದ್ದಾರೆ ಎಂದು ಅಯೋಧ್ಯೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾದ ಅಪ್ರಾಪ್ತೆಯ ತಾಯಿ ರವಿವಾರ ಗಂಭೀರ ಆರೋಪ ಮಾಡಿದ್ದಾರೆ.
“ಅಯೋಧ್ಯೆ ಜಿಲ್ಲೆಯ ಭದರ್ಶ ನಗರ ಪಂಚಾಯ್ತಿ ಅಧ್ಯಕ್ಷರೆಂದು ಹೇಳಿಕೊಂಡು ಬಂದಿದ್ದ ಸಮಾಜವಾದಿ ಪಕ್ಷದ ಮುಹಮ್ಮದ್ ರಶೀದ್, ಆರೋಪಿ ಮೊಯಿದ್ ಖಾನ್ ವಿರುದ್ಧ ದಾಖಲಿಸಿರುವ ಕೇಸ್ ಹಿಂದಕ್ಕೆ ಪಡೆಯಿರಿ. ಹಣ ಪಡೆದುಕೊಂಡು ಕೇಸ್ ಇತ್ಯರ್ಥ ಮಾಡಿಕೊಳ್ಳಿ," ಎಂದು ಆಮೀಷ ಒಡ್ಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ.
ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಮೇಲೆ ಮೊಯಿದ್ ಖಾನ್, ರಾಜೂ ಖಾನ್ ಎಂಬಿಬ್ಬರು ಲೈಗಿಂಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿದೆ. ಜುಲೈ 30 ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರವಿವಾರ ಸಂತ್ರಸ್ತೆ ಮನೆಗೆ ಭೇಟಿ ನೀಡಿದ ಬಿಜೆಪಿ ಹಾಗೂ ಬಿಎಸ್‌ಪಿ ಮುಖಂಡರು ತಪ್ಪಿತಸ್ತರಿಗೆ ತಕ್ಕ ಶಿಕ್ಷೆ ಕೊಡಿಸುವ ಮೂಲಕ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ.