ಹರೇಕಳದಲ್ಲಿ ಸರ್ವೆ ಬಳಿಕ ಫಲಾನುಭವಿಗಳಿಗೆ ಜಮೀನು ಹಂಚಿಕೆ - ಬಂದಿದೆ 400ಅರ್ಜಿಗಳು
Thursday, August 1, 2024
ಮಂಗಳೂರು: ನಗರದ ಹೊರವಲಯದ ಮುಡಿಪು ಬಳಿಯ ಹರೇಕಳ ಗ್ರಾಮದಲ್ಲಿ 15ವರ್ಷಗಳ ಹಿಂದೆ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನು ಮೀಸಲಿಡಲಾಗಿದೆ. ಈಗ ಜಮೀನುರಹಿತರಿಗೆ ಎಂದು ಬದಲಾಯಿಸಲಾಗಿದೆ. ಈಗಾಗಲೇ 400ಅರ್ಜಿಗಳು ಬಂದಿದ್ದು, ಸರ್ವೆ ಬಳಿಕ ಫಲಾನುಭವಿಗಳಿಗೆ ಹಂಚಲಾಗುವುದು ಎಂದು ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಹೇಳಿದರು.
ಹರೇಕಳ ಜಮೀನು ರಹಿತರಿಗೆ ನೀಡಲು ಉದ್ದೇಶಿಸಿರುವ ಜಮೀನಿನ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಈ ವೇಳೆ ಹರೇಕಳ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ.ಮಾತನಾಡಿ, ಈಗಾಗಲೇ ಕೆಲವು ಸಂಘಟನೆಗಳು ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿವೆ. ನಿವೇಶನರಹಿತರಿಗೆ ಪಂಚಾಯತ್ ಈಗಾಗಲೇ 9.50 ಎಕರೆ ಮೀಸಲಿಟ್ಟಿದ್ದು, ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಶೀಘ್ರ ಈಡೇರಲಿದೆ ಎಂದು ತಿಳಿಸಿದರು.