-->
HASAN: ಇನ್ಸುರೆನ್ಸ್  ಹಣ ಪಡೆಯಲು ತನ್ನಂತೆಯೇ ಇದ್ದ ವ್ಯಕ್ತಿಯ ಕೊಲೆ- ಖತರ್ನಾಕ್ ಪ್ಲ್ಯಾನ್ ಮಾಡಿದ ದಂಪತಿ!

HASAN: ಇನ್ಸುರೆನ್ಸ್ ಹಣ ಪಡೆಯಲು ತನ್ನಂತೆಯೇ ಇದ್ದ ವ್ಯಕ್ತಿಯ ಕೊಲೆ- ಖತರ್ನಾಕ್ ಪ್ಲ್ಯಾನ್ ಮಾಡಿದ ದಂಪತಿ!













ಹಾಸನ: ಅಪಘಾತದಿಂದ ಸತ್ತರೆ ಕೋಟಿ ಕೋಟಿ ಇನ್ಸುರೆನ್ಸ್ ಹಣ ಕೈಸೇರಲಿದೆ ಎಂಬ ದುರುದ್ದೇಶದಿಂದ ತನ್ನಂತೆಯೇ ಇರುವ ಅಮಾಯಕ ವ್ಯಕ್ತಿಯನ್ನು ಹತ್ಯೆ ಮಾಡಿ ಅಪಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. 


ಆರೋಪಿ ಜೊತೆಗೆ ಹಣದಾಸೆಗೆ ಈತನ ಕೃತ್ಯಕ್ಕೆ ಕೈಜೋಡಿಸಿದ ಟ್ರಕ್ ಚಾಲಕನನ್ನು ಸಹ ಬಂಧಿಸಲಾಗಿದೆ. ಮೃತ ವ್ಯಕ್ತಿ ತನ್ನ ಪತಿಯೇ ಎಂದು ಗುರುತಿಸಿ ಸಂಚಿನಲ್ಲಿ ಪಾಲ್ಗೊಂಡ ಆತನ ಪತ್ನಿ ಹಾಗೂ ಇತರ ಇಬ್ಬರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ . ಕೊಲೆ ನಡೆದು 10 ದಿನಗಳ ನಂತರ ಪ್ರಕರಣ ಬಯಲಿದೆ ಬಂದಿದೆ.


ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಸ್ವಾಮಿಗೌಡ, ಆತನ ಪತ್ನಿ ಶಿಲ್ಪಾರಾಣಿ, ಲಾರಿ ಚಾಲಕ ದೇವೇಂದ್ರ ನಾಯಕ್, ಸುರೇಶ್,​ ವಸಂತ್ ಈ ಸಂಚು ರೂಪಿಸಿದ್ದಾರೆ.  ಲಾರಿ ಚಾಲಕ ದೇವೇಂದ್ರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಘಟನೆಯ ಸತ್ಯಾಂಶ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಕೊಲೆಯಾಗಿರುವ ವ್ಯಕ್ತಿ ಓರ್ವ ಭಿಕ್ಷುಕ ಎಂಬ ಮಾಹಿತಿ ಸಿಕ್ಕಿದ್ದು, ಆತನ ಗುರುತು ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಪ್ರಕರಣದ ವಿವರ: ಆ.13 ರಂದು ಬೆಳಗಿನ ಜಾವ 3.15ರ ಸುಮಾರಿಗೆ ಗಂಡಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಹತ್ತಿರ ಕಾರಿನ ಟೈರ್ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂದು ದೂರು ಬಂದಿತ್ತು. ಹೊಸಕೋಟೆ ನಗರದ ಶಿಲ್ಪಾರಾಣಿ, ಅಪಘಾತದಲ್ಲಿ ಮೃತಪಟ್ಟಿರುವುದು ತನ್ನ ಪತಿ ಮುನಿಸ್ವಾಮಿಗೌಡ ಎಂದು ದೂರು ನೀಡಿದ್ದಳು. ಅಲ್ಲದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಕೂಡ ನೆರೆವರೆಸಿದ್ದಳು.


''ಇದು ಗೊತ್ತಿರುವ ಕಾರ್ ಆಗಿದ್ದು, ನಿಂತಿರುವಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿರುವುದು ತನ್ನ ಪತಿಯೇ ಎಂದು ಮುನಿಸ್ವಾಮಿಗೌಡ ಪತ್ನಿ ಶಿಲ್ಪಾರಾಣಿ ಗುರುತಿಸಿ ದೂರು ಕೊಟ್ಟಿದ್ದರು'' ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುಜೀತಾ ತಿಳಿಸಿದ್ದಾರೆ.



ಆದರೆ, ತನಿಖೆ ವೇಳೆ ಮೃತಪಟ್ಟಿರುವುದು ಅಪಘಾತದಿಂದ ಅಲ್ಲ ಎಂಬ ಸ್ಪಷ್ಟತೆಯೂ ವೈದ್ಯರ ವರದಿಯಿಂದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಆಗ ಲಾರಿ ಚಾಲಕನ ದೇವೇಂದ್ರ ನಾಯಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಈ ವೇಳೆ ಮೃತಪಟ್ಟಿರುವು ಮುನಿಸ್ವಾಮಿಗೌಡ ಅಲ್ಲ, ಮತ್ತು ಇದು ಆ್ಯಕ್ಸಿಡೆಂಟ್ ಅಲ್ಲ ಎಂಬ ವಿಷಯ ಬೆಳಕಿಗೆ ಬಂದಿತು. ಮುನಿಸ್ವಾಮಿಗೌಡ ಮೃತಪಟ್ಟಿಲ್ಲ, ಊರಲ್ಲಿದ್ದಾರೆಂದು ದೇವೆಂದ್ರ ನೀಡಿದ ಮಾಹಿತಿ ಮೇರೆಗೆ ಆತನನ್ನು ಬೀರೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಸುಜೀತಾ ತಿಳಿಸಿದ್ದಾರೆ.


ಮುನಿಸ್ವಾಮಿಗೌಡ, ದೇವೇಂದ್ರ, ಸುರೇಶ್ ಮತ್ತು ವಸಂತ್ ಎಂಬ ನಾಲ್ವರು ಸೇರಿ ಈ ಸಂಚನ್ನು ಮಾಡಿರುತ್ತಾರೆ. ಮುನಿಸ್ವಾಮಿಗೌಡ ಹಲವಾರು ಇನ್ಸೂರೆನ್ಸ್ ಮಾಡಿಸಿರುತ್ತಾರೆ. ಅಲ್ಲದೇ ಅಫಘಾತ ವಿಮೆಯಿಂದ ಹಣ ಹೆಚ್ಚು ಬರಬಹುದೆಂದು ಯೋಜನೆ ಮಾಡಿ ಬೇರೆಯವರನ್ನು ಮೃತಪಟ್ಟಂತೆ ತೊರಿಸಿ ಈ ಸಂಚು ಮಾಡಿರುತ್ತಾರೆ. ಮೃತದೇಹದೊಂದಿಗೆ ಮುನಿಸ್ವಾಮಿ ಆಧಾರ್ ಕಾರ್ಡ್ ಮತ್ತು ಗುರುತಿನ ಪತ್ರಗಳನ್ನು ಇಡಲಾಗಿತ್ತು. ಅಲ್ಲದೇ ಪತ್ನಿ ಶಿಲ್ಪಾರಾಣಿ ಕೂಡ ಮೃತದೇಹ ತನ್ನ ಪತಿಯದೇ ಎಂದು ಗುರುತಿಸಿ ಸಂಚಿನಲ್ಲಿ ಮುಖ್ಯಪಾತ್ರಧಾರಿಯಾಗಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.



ಮುನಿಸ್ವಾಮಿಗೌಡ ಮತ್ತು ಮೃತಪಟ್ಟ ವ್ಯಕ್ತಿ ನೋಡಲು ಹೋಲಿಕೆಯಿಂದ ಕೂಡಿದ್ದರು. ಬೇರೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ಸ್ಥಳದಲ್ಲಿ ಇಟ್ಟು ಅಪಘಾತದಂತೆ ಬಿಂಬಿಸಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. 


Ads on article

Advertise in articles 1

advertising articles 2

Advertise under the article