ನವದೆಹಲಿ: ಜೀವ ವಿಮಾ ಕಂತಿನ ಮೇಲೂ ಜಿಎಸ್‌ಟಿ: 'ಇಂಡಿಯಾ' ಕಿಡಿ
Friday, August 9, 2024
ನವದೆಹಲಿ: ಆರೋಗ್ಯ ಮತ್ತು ಜೀವ ವಿಮಾ ಕಂತಿನ ಮೇಲೆ ವಿಧಿಸಲಾಗಿರುವ ಶೇ.18 ಜಿಎಸ್‌ಟಿ ಹಿಂಪಡೆಯುಂತೆ ಆಗ್ರಹಿಸಿ 'ಇಂಡಿಯಾ' ಒಕ್ಕೂಟದ ಪಕ್ಷಗಳು ಸಂಸತ್ತಿನ ಅವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.
ಸಂಸತ್ತಿನ ಮಕರ ದ್ವಾರದ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಅಮ್ ಆದ್ಮಿ(ಎಎಪಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಸೇರಿ ಹಲವು ಪಕ್ಷಗಳ ಸಂಸದರು, 'ತೆರಿಗೆ ಭಯೋತ್ಪಾದನೆ' ಎಂಬ ಫಲಕಗಳನ್ನು ಹಿಡಿದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಳಿಕ 'ಎಕ್ಸ್'ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, 'ಮೋದಿ ಸರ್ಕಾರದ ತೆರಿಗೆ ನೀತಿಯಿಂದಾಗಿ ಜನರು ಈಗಾಗಲೇ ಪರಿತಪಿಸುತ್ತಿದ್ದಾರೆ. ಈ ಎಲ್ಲಾ ದುರಂತಗಳಲ್ಲಿಯೂ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಹುಡುಕುವ ನಡೆಯುವ, ಬಿಜೆಪಿಯ ಸಂವೇದನಾರಹಿತ ಚಿಂತನೆಗೆ ಸಾಕ್ಷಿಯಾಗಿದೆ ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ ತೆರಿಗೆ ನೀತಿಯು ವಿಪತ್ತಿನ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳುವ ಬಿಜೆಪಿಯ ತುಚ್ಯ ನೀತಿಗೆ ಒಂದು ಉದಾಹರಣೆಯಾಗಿದೆ' ಎಂದು ಟೀಕಿಸಿದರು.
'ಆರೋಗ್ಯ ವಿಮಾ ಕಂತನ್ನು ಪಾವತಿಸುವ ಜನಸಾಮಾನ್ಯರಿಂದ ಮೋದಿ ಸರ್ಕಾರ 24 ಸಾವಿರ ಕೋಟಿ ಸಂಗ್ರಹಿಸುತ್ತಿದೆ. ಆರೋಗ್ಯ ಮತ್ತು ಜೀವ ವಿಮಾ ವಲಯವನ್ನು ಜಿಎಸ್‌ಟಿಯಿಂದ ಹೊರಗಿಡಬೇಕು' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.