ಬೈಕಂಪಾಡಿಯ ಸರ್ಕಾರಿ ಪ್ರೌಢಶಾಲೆಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ: "ನೈರ್ಮಲ್ಯ ಶಾಲಾ ಅಭ್ಯುದಯ" ಪ್ರಶಸ್ತಿ ಪ್ರದಾನ
ಬೈಕಂಪಾಡಿಯ ಸರ್ಕಾರಿ ಪ್ರೌಢಶಾಲೆಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ: "ನೈರ್ಮಲ್ಯ ಶಾಲಾ ಅಭ್ಯುದಯ" ಪ್ರಶಸ್ತಿ ಪ್ರದಾನ
ಬೈಕಂಪಾಡಿಯ ಮೀನಕಳಿಯದ ಸರಕಾರಿ ಪ್ರೌಢಶಾಲೆಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯೊಂದು ಲಭಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ರಾಜ್ಯ ಮಟ್ಟದ "ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ 2024 ರ ಸಾಲಿಗೆ ಬೈಕಂಪಾಡಿ ಮೀನಕಳಿಯದ ಸರಕಾರಿ ಪ್ರೌಢಶಾಲೆಗೆ ಲಭಿಸಿದೆ.
ಮುದ್ದೇನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಟ್ರಸ್ಟಿನ ಸಂಸ್ಥಾಪಕರಾದ ಶ್ರೀ ಸದ್ಗುರು ಮಧುಸೂಧನ ಸಾಯಿ ಇವರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷ್ಮೀನಾರಾಯಣ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಉತ್ತಮ ಶಾಲಾ ನೈರ್ಮಲ್ಯ, ಶಾಲಾ ಕೈತೋಟ, ಹಸಿರುವನ, ಪ್ರಯೋಗಾಲಯ,ವೈವಿಧ್ಯಮಯ ಪಠ್ಯಪೂರಕ ಚಟುವಟಿಕೆಗಳ ಆಧಾರದ ಮೇಲೆ ಟ್ರಸ್ಟ್ ಪ್ರತ್ಯಕ್ಷ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿ ಶಾಲೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.
ಪ್ರತಿಷ್ಠಿತ ಪ್ರಶಸ್ತಿಯು ರೂ. 10000/- ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ, ಶಿಕ್ಷಕರ ಡೈರಿ ಹಾಗೂ ಶಾಲಾ ವಿದ್ಯಾರ್ಥಿಗಳ ಮೌಲ್ಯಾಧಾರಿತ ಗ್ರಂಥಾಲಯ ಪುಸ್ತಕಗಳನ್ನು ಒಳಗೊಂಡಿದೆ.
ಶಾಲೆಯ ಈ ಸಾಧನೆಗೆ ಶಿಕ್ಷಕರು, ಶಾಲಾಭಿವೃದ್ಧಿ ಮಂಡಳಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.