-->
ಹೈಸ್ಕೂಲ್‌ಗೆ ಪಾಠ ಮಾಡಲು ಪದವೀಧರ ಶಿಕ್ಷಕರಿಗೆ ಮಾತ್ರ ಬಡ್ತಿ

ಹೈಸ್ಕೂಲ್‌ಗೆ ಪಾಠ ಮಾಡಲು ಪದವೀಧರ ಶಿಕ್ಷಕರಿಗೆ ಮಾತ್ರ ಬಡ್ತಿ


ಬೆಂಗಳೂರು: 6ರಿಂದ 8ನೇ ತರಗತಿಗೆ ಪಾಠ ಮಾಡಲು ನಿಯೋಜಿತರಾಗಿರುವ ಪದವೀಧರ ಶಿಕ್ಷಕ (ಜಿಪಿಟಿ)ರನ್ನು ಮಾತ್ರ 'ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ -2' ಹುದ್ದೆಗೆ ಬಡ್ತಿ ನೀಡಬಹುದು ಎಂದು ಕೆಎಸ್ಎಟಿ ಹೇಳಿದೆ. ರಾಜ್ಯಾದ್ಯಂತ 2016ರ ಬಳಿಕ ನೇಮಕಗೊಂಡ ಪದವೀಧರ ಶಿಕ್ಷಕರಿಗೆ ಇದು ಅನ್ವಯವಾಗುತ್ತದೆ. ಇದೇ ವೇಳೆ, 1ರಿಂದ 5ನೇ ತರಗತಿಗೆ ಬೋಧನೆ ಮಾಡುತ್ತಿದ್ದು ಹೈಸ್ಕೂಲ್‌ಗೆ ಬಡ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿಎಸ್‌ಟಿ) ತಕ್ಷಣ ಹಿಂಬಡ್ತಿ ನೀಡಬೇಕು ಎಂದೂ ಕೆಎಸ್‌ಎಟಿ ಸೂಚಿಸಿದೆ. ಈ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಸುತ್ತಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಳ ಮತ್ತು ಕೇಂದ್ರ ಸರಕಾರದಿಂದ ಅನುದಾನ ಪಡೆಯುವ ಸಲುವಾಗಿ ಎನ್‌ಸಿಇಆರ್‌ಟಿಯನ್ವಯ 6ರಿಂದ 8ನೇ ತರಗತಿ ಬೋಧನೆ ಮಾಡಲು 20160 ಪದವೀಧರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದುವರೆಗೆ 11 ಸಾವಿರ ಶಿಕ್ಷಕರ ನೇಮಕವಾಗಿದೆ.

2016-17ಕ್ಕೂ ಹಿಂದೆ ರಾಜ್ಯ ಸರಕಾರ 1ರಿಂದ 7ನೇ ತರಗತಿವರೆಗೆ ಪಾಠ ಮಾಡಲು 1.62 ಲಕ್ಷ ಶಿಕ್ಷಕರನ್ನು ನೇಮಿಸಿತ್ತು. ಇವರಲ್ಲಿ ಬಿ.ಇಡಿ., ಪದವಿ ಹೊಂದಿರುವ ಶಿಕ್ಷಕರನ್ನು ಸೇವಾ ಜೇಷ್ಠತೆಯ ಆಧಾರದಲ್ಲಿ

ಪ್ರೌಢಶಾಲೆಗಳಿಗೆ ಸಹ ಶಿಕ್ಷಕ ಗ್ರೇಡ್ -2 ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ. ಪ್ರೌಢಶಾಲಾ ಶಿಕ್ಷಕರ ಪ್ರತಿ ನೇಮಕಾತಿ ವೇಳೆ ಶೇ.75ರಷ್ಟು ಶಿಕ್ಷಕರನ್ನು ನೇರ ನೇಮಕಾತಿ ಮತ್ತು ಶೇ.25ರಷ್ಟು ಶಿಕ್ಷಕರನ್ನು ಪ್ರಾಥಮಿಕ ಶಾಲೆಗಳಿಂದ ಬಡ್ತಿ ನೀಡಲಾಗುತ್ತಿದೆ.

ಕೇಂದ್ರದ ಆದೇಶದನ್ವಯ 2016-17ನೇ ಸಾಲಿನಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು (ಸಿ ಆ್ಯಂಡ್ ಆರ್ ರೂಲ್) ಬದಲಾವಣೆ ಮಾಡಿದ ಸರಕಾರ 1 ರಿಂದ 7ನೇ ತರಗತಿಗೆ ಬೋಧನೆ ಮಾಡಲು ನೇಮಕಗೊಂಡಿದ್ದ ಶಿಕ್ಷಕರನ್ನು ಕೇವಲ 1ರಿಂದ 5ನೇ ತರಗತಿವರೆಗೆ ಪಾಠ ಮಾಡಲು ನಿಯೋಜಿಸಿತು. ಈ ನಡುವೆ, 2016-17ರಿಂದ ಇದುವರೆಗೆ 2 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ (1ರಿಂದ 5ನೇ ತರಗತಿ) ಪ್ರೌಢಶಾಲಾ ಸಹ ಶಿಕ್ಷಕರ

ಹುದ್ದೆಗೆ ಬಡ್ತಿ ನೀಡಲಾಗಿದೆ. ಅಲ್ಲದೆ, 6ರಿಂದ 8ನೇ ತರಗತಿ ಬೋಧನೆ ಮಾಡುವ ಶಿಕ್ಷಕರಿಗೆ ಪ್ರತ್ಯೇಕ ವೃಂದ ಮತ್ತು

ಉತ್ತರಾಧಿಕಾರ ಯಾರಿಗೆ?

ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ -2 ಹುದ್ದೆಗೆ 6ರಿಂದ 8ನೇ ತರಗತಿಗೆ ಬೋಧನೆ ಮಾಡುವ ಪದವೀಧರ ಶಿಕ್ಷಕ ವೃಂದವೇ ಉತ್ತರಾಧಿಕಾರಿ ವೃಂದವಾಗಿದೆ. ಈ ಹುದ್ದೆಗೆ 1ರಿಂದ 5ನೇ ತರಗತಿಗೆ ಬೋಧಿ ಸುವ ಶಿಕ್ಷಕರು ಅರ್ಹರಲ್ಲ,'' ಎಂದು ಇದು ಇದೀಗ ಕೆಎಸ್ಎಟಿ 4. 3, 2016-17 ಸಾಲಿನಿಂದ ಪ್ರಾಥಮಿಕ ಶಾಲಾ ಶಿಕ್ಷಕರ (1-5) ಹುದ್ದೆಯಿಂದ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ -2 ಹುದ್ದೆಗೆ ನೀಡಲಾದ ಎಲ್ಲಾ ಪದೋನ್ನತಿಗಳ ರದ್ದತಿಗೆ ಸೂಚಿಸಿದೆ.

ನೇಮಕಾತಿ ನಿಯಮಗಳನ್ನು ರಚಿಸಿ, ನೇಮ ಕಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಈ ಶಿಕ್ಷಕರಿಗೆ ಇನ್ನೂ ಸೇವಾ ಜೇಷ್ಠತೆ ಇಲ್ಲದೇ ಇರುವ ಕಾರಣ, ಇವರನ್ನು ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ನಿಯಮಗಳನ್ನು ಶಿಕ್ಷಣ ಇಲಾಖೆ ರೂಪಿಸಿಲ್ಲ. ಹಾಗಾಗಿ, ಇದುವರೆಗೆ ಪದವೀಧರ ಶಿಕ್ಷಕರನ್ನು ಮುಂಬಡ್ತಿಗೆ ಪರಿಗಣಿಸಿಲ್ಲ.

ಕೆಎಸ್‌ಎಟಿ ಮೊರೆ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ 1ರಿಂದ 5ನೇ ತರಗತಿಗೆ ಬೋಧನೆ ಮಾಡುವ ಪ್ರಾಥಮಿಕ ನೀಡುತ್ತಿರುವ ಶಿಕ್ಷಕರಿಗೆ ಬಡ್ತಿ ರಾಜ್ಯ ಸರಕಾರ, ಪದವೀಧರ ಶಿಕ್ಷಕರನ್ನು ಪರಿಗಣಿಸಿಲ್ಲ ಎಂದು ಬೆಂಗಳೂರು, ಬೆಳಗಾವಿ ಇತರೆಡೆ ನೂರಾರು ಶಿಕ್ಷಕರು ಕೆಎಸ್ಎಟಿ ಮೊರೆ ಹೋಗಿದ್ದಾರೆ.

Ads on article

Advertise in articles 1

advertising articles 2

Advertise under the article