ಕೊನೆಗೂ ಮಂಗಳೂರು ಯಶವಂತಪುರ ರೈಲು ಸಮಯ ಬದಲಾಯಿತು- ರೈಲಿನ ವೇಳಾಪಟ್ಟಿ ಇಂತಿದೆ- TRAIN
ಮಂಗಳೂರು: ಮಂಗಳೂರು ಜಂಕ್ಷನ್ - ಯಶವಂತಪುರ
ನಡುವೆ ವಾರದಲ್ಲಿ 3 ದಿನ ಸಂಚರಿಸುವ ರೈಲಿನ (ಸಂಖ್ಯೆ 16576) ವೇಳಾಪಟ್ಟಿ ಮಾರ್ಪಾಡು
ಮಾಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಈ ರೈಲು
ಬೆಳಿಗ್ಗೆ 7 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ
ನಿಲ್ದಾಣವನ್ನು ತಲುಪಲಿದೆ. ಈ ರೈಲು ಈ ಹಿಂದೆ ಮಂಗಳೂರಿನಿಂದ ಬೆಳಿಗ್ಗೆ 11.30ಕ್ಕೆ ಹೊರಟು
ರಾತ್ರಿ 8.45ಕ್ಕೆ ಯಶವಂತಪುರವನ್ನು ತಲುಪುತ್ತಿತ್ತು. ಹೊಸ ವೇಳಾ ಪಟ್ಟಿ ಪ್ರಕಾರ ರೈಲು ಮಂಗಳೂರು
ಜಂಕ್ಷನ್ ನಿಂದ ಬೆಳಿಗ್ಗೆ 7ಕ್ಕೆ, ಬಂಟ್ವಾಳದಿಂದ 7.35ಕ್ಕೆ, ಕಬಕ ಪುತ್ತೂರಿನಿಂದ 8.22,
ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ 9.10, ಸಕಲೇಶಪುರದಿಂದ 11.40ಕ್ಕೆ, ಆಲೂರಿನಿಂದ ಮಧ್ಯಾಹ್ನ
12.15ಕ್ಕೆ, ಹಾಸನದಿಂದ1.10ಕ್ಕೆ ಚನ್ನರಾಯಪಟ್ಟಣದಿಂದ 1.22ಕ್ಕೆ, ಶ್ರವಣಬೆಳಗೊಳದಿಂದ
1.32ಕ್ಕೆ, ಬಾಲಗಂಗಾಧರನಾಥ ನಗರ ನಿಲ್ದಾಣದಿಂದ 1.59ಕ್ಕೆ, ಯಡಿಯೂರಿನಿಂದ 2.12ಕ್ಕೆ, ಕುಣಿಗಲ್‌ನಿಂದ
2.25ಕ್ಕೆ, ನೆಲಮಂಗಲದಿಂದ 3ಕ್ಕೆ, ಚಿಕ್ಕಬಾಣಾವರದಿಂದ 3.45ಕ್ಕೆ ಹೊರಡಲಿದೆ. ಈ ರೈಲು ಸೋಮವಾರ,
ಬುಧವಾರ ಹಾಗೂ ಶುಕ್ರವಾರ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. ಈ ವೇಳಾಪಟ್ಟಿ 2024ರ ನ.1ರಿಂದ
ಜಾರಿಗೊಳಿಸಲು ತಯಾರಿ ನಡೆಸಿದೆ.