ಇನ್ನು ಕೇಂದ್ರ ಪಿಂಚಣಿ ಅರ್ಜಿ ಸರಳ| UPS
Saturday, August 31, 2024
ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ಇತ್ತೀಚೆಗೆ 'ಏಕೀಕೃತ ಪಿಂಚಣಿ ವ್ಯವಸ್ಥೆ' ಎಂಬ ಹೊಸ ಪೆನ್ನ್ ಯೋಜನೆ ಘೋಷಿಸಿದ್ದ ಕೇಂದ್ರ ಸರಕಾರ, ಇದರ ಬೆನ್ನಲ್ಲೇ ಪಿಂಚಣಿ ಪ್ರಕ್ರಿಯೆಯನ್ನೂ ಸರಳೀಕರಣಗೊಳಿಸಿದೆ.
ಒಟ್ಟು ಒಂಬತ್ತು ಬಗೆಯ ಪಿಂಚಣಿ ಅರ್ಜಿಯನ್ನು ಒಂದುಗೂಡಿಸಿ 'ಫಾರ್ಮ್ ನಮೂನೆಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಹೊಸ ಸರಳೀಕೃತ ಪಿಂಚಣಿ ಅರ್ಜಿ ನಮೂನೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಹೊಸ ಅರ್ಜಿ ನಮೂನೆಯು 20240 ಡಿಸೆಂಬರ್ ನಂತರ ನಿವೃತ್ತಿಯಾಗಲಿರುವ ನೌಕರರಿಗೆ ಅನ್ವಯವಾಗಲಿದ್ದು, Bhavishya.nic.in ಪೋರ್ಟಲ್‌ನಲ್ಲಿ ಅರ್ಜಿ ಪಡೆಯಬಹುದು. ಜತೆಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ 'ಭವಿಷ್ಯ' ವೇದಿಕೆ ಜತೆ 'ಇ-ಎಚ್‌ಆರ್ ಎಂಎಸ್' ವಿಲೀನಗೊಳಿಸಲಾಗಿದ್ದು, ಇದರ ಮೂಲಕ ನಿವೃತ್ತಿಯಾಗುವವರಿಗೆ ಅರ್ಜಿ ಸಲ್ಲಿಕೆ ಸುಗಮವಾಗಿದೆ.
Unveiled New Single Unified Pension Form for Senior Citizens at National Media Centre via video conferencing.
— Dr Jitendra Singh (@DrJitendraSingh) August 30, 2024
“Under the visionary leadership of PM Sh @NarendraModi, Department of Pension adds another feather in the cap following a series of
1/2 pic.twitter.com/AVjEjYTjdb