-->
ಖಾಸಗಿ ಟೆಲಿಕಾಂ ಸಂಸ್ಥೆಗಳು ಬೆಲೆ ಏರಿಸಿದ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ಗೆ 20ಲಕ್ಷ ಹೊಸ ಗ್ರಾಹಕರು

ಖಾಸಗಿ ಟೆಲಿಕಾಂ ಸಂಸ್ಥೆಗಳು ಬೆಲೆ ಏರಿಸಿದ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ಗೆ 20ಲಕ್ಷ ಹೊಸ ಗ್ರಾಹಕರು


ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳು ಇತ್ತೀಚೆಗೆ ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿರುವ ಪರಿಣಾಮ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಟೆಲಿಕಾಂ ಕಂಪೆನಿಗಳು ಹೊಸ ಪ್ಲಾನ್‌ಗಳ ಆಫರ್‌ಗಳನ್ನು ನೀಡಿದರೂ ಇವೆಲ್ಲವೂ ಮೊದಲಿಗಿಂತ ಅಧಿಕ ಎಂಬುವುದು ಗಮನಾರ್ಹವಾಗಿದೆ. ಬೆಲೆಗಳನ್ನು ಹೆಚ್ಚಿಸಿಕೊಂಡಿರುವ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಗ್ರಾಹಕರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್‌ಎನ್‌ಎಲ್ ಸಹ ಅನ್‌ಲಿಮಿಟೆಡ್ ಕಾಲ್ ಹಾಗೂ 100 ಎಸ್ಎಂಎಸ್ ಆಫರ್ ನೀಡುತ್ತಿದೆ. ಇದರೊಂದಿಗೆ ಆಫರ್‌ಗಳಿಗೆ ತಕ್ಕಂತೆ ಡೇಟಾ ಸಹ ನೀಡಲಾಗುತ್ತಿದೆ. ಪ್ರತಿದಿನ ವಾಟ್ಸಪ್, ಎರಡರ ಮೂರು ಸೋಶಿಯಲ್ ಮೀಡಿಯಾ ಖಾತೆ ಹಾಗೂ ನಾಲ್ಕೈದು ಕಾಲ್ ಮಾಡುವ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಬಿಎಸ್‌ಎನ್‌ಎಲ್ ಹೆಚ್ಚು ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಕಡಿಮೆ ಬೆಲೆಗೆ ಬಿಎಸ್‌ಎನ್‌ಎಲ್ ನೀಡುತ್ತಿದೆ.


ಗ್ರಾಮೀಣ ಭಾಗದಲ್ಲಿಯ ಕೆಳ ಹಾಗೂ ಮಧ್ಯಮ ವರ್ಗದ ಜನರನ್ನು ಬಿಎಸ್‌ಎನ್‌ಎಲ್ ಸೆಳೆಯುವಲ್ಲಿ ಹಂತ ಹಂತವಾಗಿ ಯಶಸ್ವಿಯಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ. ದರ ಏರಿಕೆಯ ನಂತರ ರಿಲಯನ್ಸ್ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಕ್ಷ ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ. ಮೂರು ಕಂಪನಿಗಳಲ್ಲಿ ಏರ್‌ಟೆಲ್ ಅತ್ಯಧಿಕ ಬಳಕೆದರಾರನ್ನು ಕಳೆದುಕೊಂಡಿದೆ. 


ಜುಲೈನಲ್ಲಿ ಬೆಲೆ ಏರಿಕೆ ಬಳಿಕ ಜಿಯೋ ಜಿಯೋ 7.5 ಲಕ್ಷ, ಏರ್‌ಟೆಲ್ 10.6 ಲಕ್ಷ ಮತ್ತು ವೊಡಾಫೋನ್ ಐಡಿಯಾ (Vi) 10.4 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇದೇ ವೇಳೆ ಬಿಎಸ್‌ಎನ್‌ಎಲ್ ಮಾತ್ರ 20.9 ಲಕ್ಷ ಹೊಸ ಗ್ರಾಹಕರನ್ನು ಆಕರ್ಷಿಸಿದೆ.ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಅತಿ ಹೆಚ್ಚು ಕ್ರಮವಾಗಿ ಶೇಕಡಾ 33.23 ರಿಂದ 33.12 ಕ್ಕೆ ಮತ್ತು ಶೇಕಡಾ 18.56 ರಿಂದ ಶೇಕಡಾ 18.46ಕ್ಕೆ ಕುಸಿದಿದೆ.


ಇನ್ನೂ ಬೆಲೆ ಏರಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿಯೂ ಬಿಎಸ್‌ಎನ್ಎಲ್ ಪೋರ್ಟ್ ಬಗ್ಗೆ ಸಾರ್ವಜನಿಕರೇ ಪ್ರಚಾರ ನಡೆಸಲು ಆರಂಭಿಸಿದರು. ಸಾರ್ವಜನಿಕರಿಂದಲೇ ಬಿಎಸ್‌ಎನ್ಎಲ್ ನೀಡುತ್ತಿರುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಲಾರಂಭಿಸಿದರು. ಮತ್ತೊಂದೆಡೆ ಬಿಎಸ್‌ಎನ್ಎಲ್ ತನ್ನ ನೆಟ್‌ವರ್ಕ್‌ಗೆ ಬರುವ ಗ್ರಾಹಕರಿಗಾಗಿ ಹೊಸ ಆಫರ್ ಘೋಷಣೆ ಮಾಡಿತು. ಇತ್ತ ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ಅಳವಡಿಕೆ ಕಾರ್ಯವನ್ನು ವೇಗಗೊಳಿಸಿದೆ.


ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಜುಲೈ ಆರಂಭದಿಂದ ಶೇ.10-25ರಷ್ಟು ದುಬಾರಿಯಾಗಿವೆ. ಏರ್‌ಟೆಲ್ ಮತ್ತು ಜಿಯೋ ದಿನಕ್ಕೆ 2GB ಡೇಟಾವನ್ನು ನೀಡುವ ಯೋಜನೆಗಳಿಗೆ ಅನಿಯಮಿತ 5G ಸಂಪರ್ಕವನ್ನು ನಿರ್ಬಂಧಿಸಿವೆ. 5ಜಿ ಪ್ಲಾನ್ ಬೆಲೆಯನ್ನು ಶೇ.46ರಷ್ಟು ಹೆಚ್ಚಿಸಲಾಗಿದೆ. ಏರ್‌ಟೆಲ್ ಶೇ.11ರಷ್ಟು ಬೆಲೆಗಳನ್ನು ಏರಿಕೆ ಮಾಡಿಕೊಂಡಿವೆ. ವೊಡಾಫೋನ್ ಐಡಿಯಾ ಸಹ ಶೇ.10-21ರಷ್ಟು ಬೆಲೆ ಹೆಚ್ಚಿಸಿಕೊಂಡಿವೆ.


Ads on article

Advertise in articles 1

advertising articles 2

Advertise under the article