-->
ಕೋಲಾರದ ಶಿಕ್ಷಕನ ಮೊಬೈಲ್ ನಲ್ಲಿ ಯುವತಿಯರ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು!

ಕೋಲಾರದ ಶಿಕ್ಷಕನ ಮೊಬೈಲ್ ನಲ್ಲಿ ಯುವತಿಯರ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು!




ಬೆಂಗಳೂರು :  ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5 ಸಾವಿರಕ್ಕೂ ಹೆಚ್ಚು ಪೋಟೋ ಹಾಗೂ  ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಪೋಕ್ಸೊ  ಕಾಯ್ದೆಯಡಿಯಲ್ಲಿ ಚಿತ್ರಕಲಾ ಶಿಕ್ಷಕನೊಬ್ಬನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ ಮಾಡಿದೆ.


ಪ್ರಕರಣ ಸಂಬಂಧ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ನ್ನು ರದ್ದುಪಡಿಸುವಂತೆ  ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ  ತಿರಸ್ಕರಿಸಿ, ಶಿಕ್ಷಕನ ಕೃತ್ಯವು ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ. ಇಂತಹ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ತಿಳಿಸಿದೆ. 


ಪೋಕ್ಸೊ ಕಾಯ್ದೆ ಸೆಕ್ಷನ್ 11 ಪ್ರಕಾರ, ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ಪ್ರದರ್ಶಿಸು ವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಅಪರಾಧವು ಕಾಯ್ದೆಯ ಸೆಕ್ಷನ್ 12ರಡಿ ಶಿಕ್ಷಾರ್ಹವಾಗಿದೆ.


FSL ದಾಖಲೆಗಳ ಪ್ರಕಾರ, ಅರ್ಜಿದಾರ 5 ಮೊಬೈಲ್ ಫೋನ್ ಹೊಂದಿದ್ದಾರೆ. ಪ್ರತಿ ಮೊಬೈಲ್‌ನಲ್ಲೂ ಸುಮಾರು ಒಂದು ಸಾವಿರ ಚಿತ್ರ ಮತ್ತು ಸಾವಿರಾರು ವಿಡಿಯೋಗಳಿರುವುದು ಪತ್ತೆಯಾಗಿದೆ. ಇಷ್ಟು ಮೊಬೈಲ್‌ಗಳನ್ನು ಓರ್ವ ಚಿತ್ರಕಲಾ ಶಿಕ್ಷಕ ಏಕೆ ಹೊಂದಿದ್ದ? ಆ ವಿಡಿಯೋ ಹಾಗೂ ಚಿತ್ರಗಳು ಯಾವುವು? ಎಂಬುದು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆಯಿಂದ ಬಹಿರಂಗವಾಗಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅರ್ಜಿದಾರನ ಕೃತ್ಯವು ಭಯಾನಕತೆಗಿಂತ ಹೆಚ್ಚಿನ ಛಾಯೆ ಹೊಂದಿದೆ. ಒಬ್ಬ ಶಿಕ್ಷಕನಾಗಿ ಇಂತಹ ವಿಡಿಯೋ ರೆಕಾರ್ಡ್ ಮಾಡುವುದು ನಿಜಕ್ಕೂ ಅಸಭ್ಯ. ಶಿಕ್ಷಕನ ಈ ಕೃತ್ಯ ಕ್ಷಮಿಸುವಂಥದ್ದು ಅಲ್ಲ.  ಅರ್ಜಿದಾರ ಪೂರ್ಣ ಪ್ರಮಾಣದ ವಿಚಾರಣೆಯಿಂದ ಆರೋಪಮುಕ್ತವಾಗಿ ಬರಲಿ. ಅದು ಬಿಟ್ಟು ಈ ಹಂತದಲ್ಲಿ ಪ್ರಕರಣ ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ ಎಂದು ನುಡಿದ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ. 



ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕನಾಗಿ ಮುನಿಯಪ್ಪ ನೇಮಕವಾಗಿದ್ದರು. ಈಗಲೂ ಅದೇ ಹುದ್ದೆಯಲ್ಲಿದ್ದಾರೆ. ವಸತಿ ಶಾಲೆಯಲ್ಲಿ ಬಟ್ಟೆ ಬದಲಿಸುವ ಸಮಯದಲ್ಲಿ ಬಾಲಕಿಯರ ಚಿತ್ರ ಹಾಗೂ ವಿಡಿಯೋವನ್ನು ತೆಗೆದ ಆರೋಪದ ಮೇಲೆ ಅರ್ಜಿದಾರರ ಬಗ್ಗೆ 2023ರ ಡಿ.15ರಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ್ದರು. ನಂತರ 2023ರ ಡಿ.17ರಂದು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ FIR ಮತ್ತು ಆ ಕುರಿತ ಕೋಲಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೊ ವಿಶೇಷ ಕೋರ್ಟ್)ದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮುನಿಯಪ್ಪ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

Ads on article

Advertise in articles 1

advertising articles 2

Advertise under the article