-->
ಮಾದರಿ ಗಣೇಶೋತ್ಸವ : ಮಂಜುನಾಥ ಭಂಡಾರಿ- ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ

ಮಾದರಿ ಗಣೇಶೋತ್ಸವ : ಮಂಜುನಾಥ ಭಂಡಾರಿ- ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ

ಮಂಗಳೂರು: ಬಂಟರ ಯಾನೆ ನಾಡವರ ಸಂಘ ಕಳೆದ 18 ವರ್ಷಗಳಿಂದ ತುಳುನಾಡಿನಲ್ಲೆ ಮಾದರಿ ಎಂಬ ರೀತಿಯಲ್ಲಿ ಗಣೇಶೋತ್ಸವ ಸಂಘಟಿಸುವ ಮೂಲಕ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ. ಸಮಾಜದ ಎಲ್ಲಾ ಜಾತಿ-ವರ್ಗಗಳೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆಯುವ ವಿಶಾಲ ಗುಣ ಬಂಟರಲ್ಲಿರುವುದು ಆದರ್ಶನೀಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಹೇಳಿದರು. 

ಅವರು ಬಂಟರ ಯಾನೆ ನಾಡವರ ಮಾತೃ ಸಂಘ,  ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ದ್ವಿತೀಯ ದಿನದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿದ್ದರು. 

ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ,  ಶಾಸಕ ಯಶಪಾಲ್ ಸುವರ್ಣ,  ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ ಎ ಅಶೋಕ್ ಶೆಟ್ಟಿ,  ಸಿ ಎ ಎನ್.ಬಿ. ಶೆಟ್ಟಿ,  ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನ, ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ,  ಕೆಎಸ್ ಆರ್ ಟಿಸಿ ಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ ರವೀಂದ್ರ ಶೆಟ್ಟಿ,  ಖ್ಯಾತ ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ,  ಸಾಮಾಜಿಕ, ಧಾರ್ಮಿಕ ಮುಂದಾಳು ಟಿ. ಭಾಸ್ಕರ ರೈ,  ಅಂತರಾಷ್ಟ್ರೀಯ ಈಜು ಸ್ಪರ್ಧೆಯ ವಿಜೇತ  ಈಜು ಪಟು ಚಿಂತನ್ ಎಸ್  ಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ,  ಕೋಶಾಧಿಕಾರಿ ಸಿ ಎ ರಾಮ ಮೋಹನ್ ರೈ,  ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ,  ರವಿರಾಜ್ ಶೆಟ್ಟಿ ನಿಟ್ಟೆಗುತ್ತು,  ಕೃಷ್ಣ ಪ್ರಸಾದ್ ರೈ,  ಗಣೇಶೋತ್ಸವ ಸಮಿತಿಯ ಸಂಚಾಲಕರುಗಳಾದ ದಿವಾಕರ ಸಾಮಾನಿ, ಅಶ್ವತ್ತಾಮ ಹೆಗ್ಡೆ,  ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು. 

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು ,ಸ್ವಾಗತಿಸಿದರು.  ಮಾತೃ ಸಂಘದ ಉಪಾಧ್ಯಕ್ಷ  ಹೇಮಾನಾಥ ಶೆಟ್ಟಿ ಕಾವು ವಂದಿಸಿದರು.  ಡಾ. ಮಂಜುಳಾ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article