ಮಂಗಳೂರು: ಮಚ್ಚೆ ತೆಗೆಯಲು ಶಸ್ತ್ರಚಿಕಿತ್ಸೆಗೊಳಗಾದ ಯುವಕ ಸಾವು - ವೈದ್ಯರ ಎಡವಟ್ಟು
Wednesday, September 25, 2024
ಮಂಗಳೂರು: ಎದೆಯಲ್ಲಿದ್ದ ಮಚ್ಚೆ ತೆಗೆಯಲು ಸರ್ಜರಿಗೊಳಗಾದ ಯುವಕ ವೈದ್ಯರ ಎಡವಟ್ಟಿನಿಂದ ಮೃತಪಟ್ಟ ಘಟನೆ ನಗರದ ಬೆಂದೂರ್‌ವೆಲ್‌ನಲ್ಲಿರುವ ಕಾಸ್ಮೆಟಿಕ್ ಸರ್ಜರಿ ಕೇಂದ್ರದಲ್ಲಿ ನಡೆದಿದ
ಉಳ್ಳಾಲದ ಮಹಮ್ಮದ್ ಮಾಝೀನ್(32) ಮೃತಪಟ್ಟ ಯುವಕ.
ಎದೆಯಲ್ಲಿದ್ದ ಮಚ್ಚೆ ತೆಗೆಯಲು ಸರ್ಜರಿ ಮಾಡಲು ಮಹಮ್ಮದ್ ಮಾಝೀನ್ ತಾಯಿ ಮತ್ತು ಪತ್ನಿಯೊಂದಿಗೆ ಕ್ಲಿನಿಕ್ ಗೆ ಬಂದಿದ್ದರು. ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆಯಲಾಗುತ್ತದೆ ಎಂದು ಸಲಹೆ ನೀಡಿ ಅನಸ್ತೇಶಿಯಾ ನೀಡಿದ್ದರು. ಆದರೆ ಅರ್ಧಗಂಟೆಯಲ್ಲಿ ಮುಗಿಬೇಕಾದ ಶಸ್ತ್ರಚಿಕಿತ್ಸೆ ನಾಲ್ಕೂವರೆ ಗಂಟೆಯಾದರೂ ಮುಗಿಯಲಿಲ್ಲ.
ಅನಸ್ತೇಶಿಯಾ ಬಳಿಕ ಪ್ರಜ್ಞಾಹೀನ ಸ್ಥಿತಿಯಿಂದ ಮಹಮ್ಮದ್ ಮಾಝೀನ್ ಹೊರಬರಲೇ ಇಲ್ಲ ಎನ್ನಲಾಗುತ್ತಿದೆ. ಕ್ಲಿನಿಕ್‌ನಿಂದ ಬೇರೆ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಮಾಝೀನ್ ಸಂಬಂಧಿಕರು ದೂರು ದಾಖಲಿಸಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.