-->
ಸಿಂಹ ರಾಶಿಯಲ್ಲಿ ಬುಧ ಅಸ್ತ- ಯಾವೆಲ್ಲಾ ರಾಶಿಗಳಿಗೆ ಕಷ್ಟದ ದಿನಗಳು ಆರಂಭ ಗೊತ್ತಾ?

ಸಿಂಹ ರಾಶಿಯಲ್ಲಿ ಬುಧ ಅಸ್ತ- ಯಾವೆಲ್ಲಾ ರಾಶಿಗಳಿಗೆ ಕಷ್ಟದ ದಿನಗಳು ಆರಂಭ ಗೊತ್ತಾ?

 ಮೇಷ ರಾಶಿ
ಈ ಸಮಯ ಅನ್ನೋದು ಮೇಷ ರಾಶಿಯವರಿಗೆ ಅಷ್ಟೊಂದು ಲಾಭದಾಯಕವಾಗಿರುವುದಿಲ್ಲ. ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ಬಾಸ್ ಜೊತೆಗೆ ನಿಮ್ಮ ಸಮಸ್ಯೆಗಳು ಹೆಚ್ಚಾಗಿ ಕೆಲಸ ಕೈತಪ್ಪಿ ಹೋದರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಹೀಗಾಗಿ ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿ. ಇಲ್ಲವಾದಲ್ಲಿ ಕೆಲಸದ ಕೈ ತಪ್ಪಿ ಹೋಗುವಿಕೆಯಿಂದಾಗಿ ಆದಾಯದ ಮೂಲವನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೃಷಭ ರಾಶಿ

ಶೈಕ್ಷಣಿಕ ಕ್ಷೇತ್ರದಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ  ತಾಪತ್ರಯಗಳನ್ನು ಎದುರಿಸಬೇಕಾಗಿರುತ್ತದೆ. ಪರಿವಾರದ ಸಮಸ್ಯೆಗಳನ್ನು ಪರಿಹಾರ ಮಾಡುವ ಕಾರಣಕ್ಕಾಗಿ ನೀವು ಸಾಕಷ್ಟು ಹಣವನ್ನು ಈ ಸಂದರ್ಭದಲ್ಲಿ ಖರ್ಚು ಮಾಡಬೇಕಾಗಿ ಬರಬಹುದು ಆದರೆ ಇದೇ ಖರ್ಚಿನಿಂದ ನೀವು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಬಹುದಾಗಿದ್ದು, ಸಾಲ ಮಾಡಬೇಕಾದಂತಹ ಪರಿಸ್ಥಿತಿ ಕೂಡ ಬರುತ್ತದೆ. 

ಕನ್ಯಾ ರಾಶಿ

ಉತ್ತಮ ರೀತಿಯಲ್ಲಿ ಲಾಭಗಳಿಸುತ್ತಿದ್ದ ವ್ಯಾಪಾರದಲ್ಲಿ ಅನಿರೀಕ್ಷಿತವಾಗಿ ಲಾಭಾಂಶ ಕಡಿಮೆಯಾಗಲಿದೆ ಹಾಗೂ ಇದರಿಂದಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಕೂಡ ಏರುಪೇರು ಉಂಟಾಗಲಿದೆ. ಕೆಲವೊಂದು ಕೆಟ್ಟ ಜನರ ಸಹವಾಸದಿಂದಾಗಿ ಈ ಸಮಯದಲ್ಲಿ ಅದು ಕೂಡ ನಿಮಗೆ ವಿರುದ್ಧವಾಗಿ ಕೆಲಸ ಮಾಡಬಹುದಾಗಿದೆ. ಹಣವನ್ನು ಸಂಪಾದನೆ ಮಾಡುವುದಕ್ಕೆ ಸಾಕಷ್ಟು ಕಷ್ಟಪಡಬೇಕಾಗಿ ಬರಬಹುದು ಆದರೆ ಈ ಸಂದರ್ಭದಲ್ಲಿ ಕೂಡ ಖರ್ಚು ಹೆಚ್ಚಾಗಲಿದೆ. 

ಧನು ರಾಶಿ
ಸಿಂಹ ರಾಶಿಯಲ್ಲಿ ಬುಧ ಅಸ್ತನಾಗುವುದು ಧನು ರಾಶಿಯ ವ್ಯಾಪಾರಿ ವರ್ಗದ ಜನರಿಗೆ ಸಾಕಷ್ಟು ನಷ್ಟವನ್ನು ತಮ್ಮ ವ್ಯಾಪಾರದಲ್ಲಿ ಕಾಣುವ ಹಾಗೆ ಮಾಡುತ್ತದೆ. ಈ ಸಂದರ್ಭದಲ್ಲಿ ಖರ್ಚನ್ನು ನಿಯಂತ್ರಿಸದೆ ಹೋದಲ್ಲಿ ಇದು ನಿಮಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆರ್ಥಿಕ ಸಂಕಷ್ಟವನ್ನು ತರಲಿದೆ. ಪ್ರತಿಯೊಂದು ಖರ್ಚಿನ ಹಿಂದೆ ಕೂಡ ಸಾಕಷ್ಟು ಬಾರಿ ಯೋಚಿಸಿ ಆ ಕರ್ಚನ್ನು ಮಾಡಬೇಕ ಎನ್ನುವುದನ್ನ ನಿರ್ಧರಿಸಿ ಖರ್ಚು ಮಾಡಿ. ಇಲ್ಲವಾದಲ್ಲಿ ನೀವು ಹಣಕಾಸಿನ ವಿಚಾರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈ ಸಮಯದಲ್ಲಿ ಕುಸಿಯಬೇಕಾಗುತ್ತದೆ. ಕುಟುಂಬದ ಸಮಸ್ಯೆಗಳು ಕೂಡ ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವಂತಹ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಲಿವೆ.

ಮಕರ ರಾಶಿ
ವ್ಯಾಪಾರದ ಮೇಲೆ ಈ ಸಂದರ್ಭದಲ್ಲಿ ಬುಧ ತನ ವಕ್ರ ದೃಷ್ಟಿಯನ್ನು ಬೀರುವುದರಿಂದಾಗಿ ಮಕರ ರಾಶಿಯವರ ವ್ಯಾಪಾರದ ಆದಾಯ ಮಂದವಾಗಲಿದೆ. ಇನ್ನು ಬುಧ ಬುದ್ದಿದಾತ ಆಗಿರುವುದರಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕೂಡ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳುವುದಕ್ಕೆ ವಿಫಲರಾಗಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಇದರ ನೆಗೆಟಿವ್ ಪರಿಣಾಮ ಬೀರಲಿದೆ. C

Ads on article

Advertise in articles 1

advertising articles 2

Advertise under the article