-->
JOB NEWS : ಪಿಯುಸಿ ಆದವರಿಗೆ ಗ್ರಾಮ ಲೆಕ್ಕಾಧಿಕಾರಿ ಉದ್ಯೋಗಕ್ಕೆ ಆಹ್ವಾನ- 42 ಸಾವಿರದವರೆಗೆ ಸಂಬಳ!

JOB NEWS : ಪಿಯುಸಿ ಆದವರಿಗೆ ಗ್ರಾಮ ಲೆಕ್ಕಾಧಿಕಾರಿ ಉದ್ಯೋಗಕ್ಕೆ ಆಹ್ವಾನ- 42 ಸಾವಿರದವರೆಗೆ ಸಂಬಳ!

 



ಬೆಂಗಳೂರು:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಮತ್ತೆ ಅರ್ಜಿ ಆಹ್ವಾನಿಸಿದೆ. ಪರಿಷ್ಕೃತ ಅಧಿಸೂಚನೆಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಹುದ್ದೆ: ಒಟ್ಟು 1,000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿದೆ.


ವಿದ್ಯಾರ್ಹತೆ: PUC, ಡಿಪ್ಲೋಮಾ/ಎರಡು ವರ್ಷದ ಐಟಿಐ/ಎರಡು ವರ್ಷದ ಜೆಒಸಿ, ಜೆಒಡಿಸಿ, ಜೆಎಲ್​ಡಿಸಿ ಪೂರೈಸಿದವರಿಗೆ ಅವಕಾಶ

ವೇತನ: ಮಾಸಿಕ ₹21,400 - ₹42,000

ವಯೋಮಿತಿ: ಕನಿಷ್ಠ 18. ಗರಿಷ್ಠ 38 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ. ಪರೀಕ್ಷೆ 2 ಪತ್ರಿಕೆಯನ್ನೊಳಗೊಂಡಿದ್ದು, ತಲಾ 200 ಅಂಕಗಳಿರುತ್ತದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 750 ರೂ. ಮತ್ತು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಪ್ರವರ್ಗ-1, ವಿಶೇಷಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ.

ಸೆಪ್ಟೆಂಬರ್​ 19ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್​​ 28 ಕಡೆಯ ದಿನ. ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನ ಅಕ್ಟೋಬರ್​ 29. ಈ ಕುರಿತು ವಿವರವಾದ ಮಾಹಿತಿಗೆ kea.kar.nic.in ಗೆ ಭೇಟಿ ನೀಡಿ.


ಇದನ್ನು ಓದಿ: ಟ್ರಂಪ್ ಪ್ರಚಾರದ ವೇಳೆ 26 ವರ್ಷದ ಯುವತಿಯಿಂದ ತೆರೆದ ಎದೆ ಪ್ರದರ್ಶನ

Ads on article

Advertise in articles 1

advertising articles 2

Advertise under the article