-->
MANGALORE: ನಿನ್ನೆ ನಾನು ಟಚ್ ಮಾಡಿ ದೊಡ್ಡ ತಪ್ಪು ಮಾಡಿ ಬಿಟ್ಟೆ, ದಯವಿಟ್ಟು ಕ್ಷಮಿಸು.. ಅತ್ಯಾಚಾರ ಮಾಡಿದ ಬಳಿಕ ಬಾಲಕಿಗೆ ‌ಮೆಸೆಜ್ ಹಾಕಿದ.. ಕೊನೆಗೆ ಏನಾಯಿತು ಗೊತ್ತಾ?

MANGALORE: ನಿನ್ನೆ ನಾನು ಟಚ್ ಮಾಡಿ ದೊಡ್ಡ ತಪ್ಪು ಮಾಡಿ ಬಿಟ್ಟೆ, ದಯವಿಟ್ಟು ಕ್ಷಮಿಸು.. ಅತ್ಯಾಚಾರ ಮಾಡಿದ ಬಳಿಕ ಬಾಲಕಿಗೆ ‌ಮೆಸೆಜ್ ಹಾಕಿದ.. ಕೊನೆಗೆ ಏನಾಯಿತು ಗೊತ್ತಾ?







ಮಂಗಳೂರು: "ನಿನ್ನೆ ನಾನು ಟಚ್ ಮಾಡಿ ದೊಡ್ಡ ತಪ್ಪು ಮಾಡಿ ಬಿಟ್ಟೆ, ದಯವಿಟ್ಟು ಕ್ಷಮಿಸು, ಇನ್ನು ಮುಂದೆ ಯಾವತ್ತು ಹೀಗೆ ಮಾಡಲ್ಲ, ನೀನು ಯಾವಾಗಲೂ ಸಂತೋಷವಾಗಿರು, ನಾನು ಇನ್ನು ಮುಂದೆ ನಿನಗೆ ತೊಂದರೆ ಕೊಡಲ್ಲ, ನನ್ನಷ್ಟಕ್ಕೆ ನಾನಿರುವೆ ಎಂದು ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ  50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.



ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಸದಾಶಿವ (31) ಶಿಕ್ಷೆಗೊಳಗಾದ ಆರೋಪಿ.

 

  ಸದಾಶಿವ ತನ್ನ ದೂರದ ಸಂಬಂಧಿ ಅಪ್ರಾಪ್ತ ವಯಸ್ಸಿನ  ಬಾಲಕಿಯ  ತಾಯಿಯ ಮೊಬೈಲ್‌ಗೆ ಕರೆ ಮಾಡಿ  ಬಾಲಕಿಯೊಂದಿಗೆ ಮಾತನಾಡುತ್ತಿದ್ದನು. ಬಳಿಕ ಫೇಸ್‌ ಬುಕ್‌ನಲ್ಲಿ ಸಂಪರ್ಕವನ್ನಿರಿಸಿಕೊಂಡಿದ್ದನು. 

 2022 ಆಗಷ್ಟ್ 9 ರಂದು ಬೆಳಗ್ಗೆ 10 ಗಂಟೆಗೆ  ಯುವತಿಯ ಮನೆಗೆ ಬಂದಿದ್ದು, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ಇದ್ದುದ್ದನ್ನು ಗಮನಿಸಿ ಬಾಲಕಿಯ ಮೈಗೆ ಕೈ ಹಾಕಿ ಸವರಲು ಪ್ರಾರಂಭಿಸಿದ್ದಾನೆ. ಇದಕ್ಕೆ ಬಾಲಕಿಯು ವಿರೋಧಿಸಿದಾಗ “ನೀನು ಹೆದರಬೇಡ ನಾನು ವಿವಾಹವಾಗುತ್ತೇನೆ" ಎಂದು ತಿಳಿಸಿ  ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ.


 ಅಲ್ಲದೆ  ಬಾಲಕಿಯ ಮನೆಯಿಂದ ತೆರಳಿದ ಬಳಿಕ ಆರೋಪಿ ಬಾಲಕಿಗೆ ಫೇಸ್ ಬುಕ್‌ನಲ್ಲಿ ಅಶ್ಲೀಲ ಸಂದೇಶವನ್ನು ರವಾನಿಸಿದ್ದಾನೆ. ನಂತರ ಆರೋಪಿಯು ದಿ.10-8-2022 ರಂದು ನೊಂದ ಬಾಲಕಿಯ facebook ಗೆ ಸಂದೇಶವನ್ನು ಕಳುಹಿಸಿ "ನಿನ್ನೆ ನಾನು ಟಚ್ ಮಾಡಿ ದೊಡ್ಡ ತಪ್ಪು ಮಾಡಿ ಬಿಟ್ಟೆ, ದಯವಿಟ್ಟು ಕ್ಷಮಿಸು, ಇನ್ನು ಮುಂದೆ ಯಾವತ್ತು ಹೀಗೆ ಮಾಡಲ್ಲ, ನೀನು ಯಾವಾಗಲೂ ಸಂತೋಷವಾಗಿರು, ನಾನು ಇನ್ನು ಮುಂದೆ ನಿನಗೆ ತೊಂದರೆ ಕೊಡಲ್ಲ, ನನ್ನಷ್ಟಕ್ಕೆ ನಾನಿರುವೆ ಎಂಬಿತ್ಯಾದಿಯಾಗಿ ಹೇಳಿದ್ದಾನೆ. ಇದರಿಂದ  ಬಾಲಕಿಯು ಮನನೊಂದು ಡಿಸೇಲ್ ಸೇವನೆಯನ್ನು ಮಾಡಿದ್ದಳು. 


 ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನೊಂದ ಬಾಲಕಿಯು ನೀಡಿದ ದೂರಿನಂತೆ ಕಲಂ 354, 376 ಐಪಿಸಿ ಮತ್ತು ಕಲಂ: 4, 8 ಪೋಕೋ ಕಾಯ್ದೆ ರನ್ವಯ ಮತ್ತು ಕಲಂ 67 ಐ.ಟಿ ಕಾಯ್ದೆಯಂತೆ ಪ್ರಕರಣವು ದಾಖಲಾಗಿದ್ದು, ಆಗಿನ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ  ಶಿವಕುಮಾರ್ ಬಿ ರವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


ಈ ಪ್ರಕರಣವು  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 14 ಸಾಕ್ಷಿದಾರರನ್ನು ವಿಚಾರಿಸಲಾಗಿರುತ್ತದೆ ಮತ್ತು 33 ದಾಖಲೆಗಳನ್ನು ಗುರುತಿಸಲಾಗಿರುತ್ತದೆ. 


ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ  ಮಾನು ಕೆ. ಎಸ್. ರವರು ಆರೋಪಿ ಸದಾಶಿವನಿಗೆ ಅತ್ಯಾಚಾರ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ: 376(3) ಮತ್ತು ಕಲಂ: 4(2) ಪೊಕ್ಸೊ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿರುತ್ತದೆ.


ಭಾರತೀಯ ದಂಡ ಸಂಹಿತೆಯ ಕಲಂ: 354 ಮತ್ತು ಕಲಂ: 8 ಪೊಕ್ಸೊ ಕಾಯ್ದೆಯಂತೆ ಮೂರು ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿರುತ್ತದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ: 67 ರಂತೆ 1 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿರುತ್ತದೆ. ದಂಡದ ಹಣವಾದ 50 ಸಾವಿರ ರೂಪಾಯಿ ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ  ನ್ಯಾಯಾಲಯವು ಆದೇಶಿಸಿರುತ್ತದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆ ಅಡಿಯಲ್ಲಿ  ಬಾಲಕಿಗೆ ಹೆಚ್ಚುವರಿಯಾಗಿ ರೂಪಾಯಿ 1.5 ಲಕ್ಷ  ವನ್ನು ಪರಿಹಾರವನ್ನು ನೀಡುವಂತೆ ತೀರ್ಪಿನಲ್ಲಿ ಜಿಲ್ಲಾ ಕಾನೂನುಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.


ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್  ಕೆ ಬದರಿನಾಥ ನಾಯರಿ ರವರು  ವಾದ ಮಂಡಿಸಿದ್ದರು.



Ads on article

Advertise in articles 1

advertising articles 2

Advertise under the article