-->
ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋದಿಂದ ಧಮಾಕಾ ಕೊಡುಗೆ, ಇದು ಸಂಪೂರ್ಣ ಫ್ರೀ ಆಫರ್

ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋದಿಂದ ಧಮಾಕಾ ಕೊಡುಗೆ, ಇದು ಸಂಪೂರ್ಣ ಫ್ರೀ ಆಫರ್


ಮುಂಬೈ: ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ. ಮನೆಮನಗಳಲ್ಲಿ ದೀಪ ಬೆಳಗಲು ಜನತೆ ಸಜ್ಜಾಗುತ್ತಿದೆ. ಈ ಹಬ್ಬದ ಸಂಭ್ರಮ ಹೆಚ್ಚಿಸಲು ರಿಲಯನ್ಸ್ ಜಿಯೋ ಇದೀಗ ಡಬಲ್ ಧಮಾಕಾ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರಿಗೆ ಒಂದು ವರ್ಷ ಉಚಿತವಾಗಿ ಜಿಯೋಏರ್ ಫೈಬರ್ ಸೇವೆ ಸಿಗಲಿದೆ. ದೇಶಾದ್ಯಂತ ಎಲ್ಲಾ ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಆಫರ್ ಲಭ್ಯವಿದೆ. ಇದು ಲಿಮಿಟೆಡ್ ಪೀರಿಯೆಡ್ ಆಫರ್. ಹೀಗಾಗಿ ಸೆಪ್ಟೆಂಬರ್ 18 ರಿಂದ ನವೆಂಬರ್ 3ರವರೆಗೆ ಈ ಆಫರ್ ಜಾರಿಯಲ್ಲಿದೆ.


ಉಚಿತ ಜಿಯೋಫೈಬರ್ ಸೇವೆ ಪಡೆಯಲು ಗ್ರಾಹಕರು ಹೆಚ್ಚೇನು ಕಷ್ಟಪಡಬೇಕಿಲ್ಲ. ಯಾವೆಲ್ಲ ಗ್ರಾಹಕರು 20 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡುತ್ತಾರೋ ಅವರು ಈ ಆಫರ್ ಪಡೆಯಲು ಅರ್ಹರಾಗಿದ್ದಾರೆ. 1ವರ್ಷದ ಉಚಿತ ಆಫರ್‌‌ನಿಂದ ಮನೆಯಲ್ಲಿ ಅತ್ಯಂತ ವೇಗದ ಇಂಟರ್ನೆಟ್ ಸಂಪರ್ಕ ದೊರಕದೆ. ಅಡೆತಡೆ ಇಲ್ಲದ ಸ್ಪೀಡ್ ನೆಟ್‌ವರ್ಕ್ ಈ ಕೊಡುಗೆಯಲ್ಲಿ ಪಡೆಯಬಹುದು. ಈ ಕೊಡುಗೆಯು ಜಿಯೋಫೈಬರ್ ಹಾಗೂ ಜಿಯೋಏರ್ ಫೈಬರ್‌ನ ಹೊಸ ಗ್ರಾಹಕರು ಮತ್ತು ಈಗಾಗಲೇ ಗ್ರಾಹಕರಾದವರಿಗೆ ದೊರೆಯುತ್ತದೆ. ಈ ಕೊಡುಗೆಯು ಜಿಯೋದ ವಿಶ್ವಾಸಾರ್ಹ ಗ್ರಾಹಕರಿಗೆಲ್ಲ ದೊರೆಯಬೇಕು ಎಂಬುದು ಕಂಪನಿ ಉದ್ದೇಶವಾಗಿದೆ.


ಉಚಿತ ಜಿಯೋಏರ್‌ಫೈಬರ್ ಕೊಡುಗೆ ಪಡೆಯಲು ಬೇಕಾದ ಮಾನದಂಡಗಳೇನು?
ಹೊಸ ಗ್ರಾಹಕರಾಗಿದ್ದಲ್ಲಿ ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡಬೇಕು. ಅಥವಾ ಜಿಯೋಏರ್ ಫೈಬರ್ ಸಂಪರ್ಕವನ್ನು ಪಡೆದುಕೊಳ್ಳುವಾಗ 2,222 ರೂಪಾಯಿಗೆ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ಚಂದಾದಾರರಾಗಬೇಕು. ಇನ್ನು ಈಗಾಗಲೇ ಗ್ರಾಹಕರಾಗಿರುವವರು 2,222 ರೂಪಾಯಿಗೆ ಮುಂಗಡವಾಗಿ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ರೀಚಾರ್ಜ್ ಮಾಡಿಸಬೇಕಾಗುತ್ತದೆ.


ಅರ್ಹ ಗ್ರಾಹಕರು ಹನ್ನೆರಡು ಕೂಪನ್ ಗಳನ್ನು ಪಡೆಯುತ್ತಾರೆ. ಅವರು 2024ರ ನವೆಂಬರ್ ನಿಂದ 2025ರ ಅಕ್ಟೋಬರ್ ತನಕ ಪ್ರತಿ ತಿಂಗಳು ರಿಡೀಮ್ ಮಾಡಿಕೊಳ್ಳಬಹುದು. ಆ ಕೂಪನ್ ಮೌಲ್ಯವು ಆಯಾ ಗ್ರಾಹಕರು ಸಕ್ರಿಯ ಜೊಯೋಏರ್ ಫೈಬರ್ ಪ್ಲಾನ್ ಗೆ ಸಮನಾಗಿರುತ್ತದೆ. ಅದನ್ನು  30 ದಿನದೊಳಗೆ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಜಿಯೋಪಾಯಿಂಟ್, ಜಿಯೋಮಾರ್ಟ್ ಎಕ್ಸ್ ಕ್ಲೂಸಿವ್ ಮಳಿಗೆಯಲ್ಲಿ ತಮ್ಮ ಮುಂದಿನ ಎಲೆಕ್ಟ್ರಾನಿಕ್ಸ್ ಖರೀದಿ ಹದಿನೈದು ಸಾವಿರ ರೂಪಾಯಿ ಮೇಲ್ಪಟ್ಟು ಮಾಡಿದಾಗ ರಿಡೀಮ್ ಮಾಡಬಹುದು ಈ ಆಫರ್ ಇರುವುದು ನವೆಂಬರ್ ಮೂರನೇ ದಿನಾಂಕದವರೆಗೆ ಮಾತ್ರ. 


Ads on article

Advertise in articles 1

advertising articles 2

Advertise under the article