-->
"ಕಲ್ಜಿಗ" ಸಿನಿಮಾ ನೋಡಿ ಮೆಚ್ಚಿದ ರಿಷಬ್ ಶೆಟ್ಟಿ

"ಕಲ್ಜಿಗ" ಸಿನಿಮಾ ನೋಡಿ ಮೆಚ್ಚಿದ ರಿಷಬ್ ಶೆಟ್ಟಿ


ಮಂಗಳೂರು: ಕಾಂತಾರ ಸಿನಿಮಾ  ಖ್ಯಾತಿಯ ನಟ ರಿಷಬ್ ಶೆಟ್ಟಿ ಅರ್ಜುನ್ ಕಾಪಿಕಾಡ್ ಅಭಿನಯದ ಕಲ್ಜಿಗ  ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಲ್ಜಿಗ ಸಿನಿಮಾವನ್ನು ವೀಕ್ಷಿಸಿದರು.  ಕಲ್ಜಿಗ ಸಿನಿಮಾದಲ್ಲಿ ಬಡ ಕುಟುಂಬವೊಂದು ಕೊರಗಜ್ಜನನ್ನು ಆರಾಧಿಸಿಕೊಂಡು ಬರುವ ಕತೆ, ಮತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಕುಟುಂಬದ ಬೆನ್ನಿಗೆ ನಿಲ್ಲುವ ಕೊರಗಜ್ಜ, ಅಧರ್ಮದಲ್ಲಿ ನಡೆಯುವವರನ್ನು ಶಿಕ್ಷಿಸುವ ಕತೆ ರಿಷಬ್ ಶೆಟ್ಟಿ ಅವರಿಗೆ ತುಂಬಾ ಇಷ್ಟವಾಯಿತು. ಸಿನಿಮಾದ ಕ್ಯಾಮರಾ ವಕ್೯, ಹಿನ್ನಲೆ ಸಂಗೀತವನ್ನು ರಿಷಬ್ ಮೆಚ್ಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಗತಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ,  ಶನಿಲ್ ಗುರು, ನಟ ಅರ್ಜುನ್ ಕಾಪಿಕಾಡ್,    ನಿರ್ಮಾಪಕ ಶರತ್ ಕುಮಾರ್ , ನಿರ್ದೇಶಕ ಸುಮನ್ ಸುವರ್ಣ, ಸಿನಿಮಾ ವಿತರಕ ಸಚಿನ್ ಉಪ್ಪಿನಂಗಡಿ, ಶ್ಲಾಘ ಸಾಲಿಗ್ರಾಮ ಉಪಸ್ಥಿತರಿದ್ದರು.


ಸುಚಿತ್ರ ಥಿಯೇಟರ್ ನಲ್ಲಿ“ ಕಲ್ಜಿಗ“ ಬಿಡುಗಡೆ 

ಮಂಗಳೂರು: ಮಲ್ಟಿಫ್ಲೆಕ್ಸ್ ನಲ್ಲಿ ಬಿಡುಗಡೆಗೊಂಡು ಜನಮೆಚ್ಚುಗೆ ಪಡೆಯುತ್ತಿರುವ ”ಕಲ್ಜಿಗ“ ಸಿನಿಮಾ ನಗರದ
ಸುಚಿತ್ರ ಥಿಯೇಟರ್ ನಲ್ಲಿ ಶುಕ್ರವಾರ ಮುಂಜಾನೆ ಬಿಡುಗಡೆಗೊಂಡಿತು. 
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಬಹಳ ಸಮಯದ ಬಳಿಕ ಸುಚಿತ್ರ ಥಿಯೇಟರ್ ನಲ್ಲಿ ತುಳುನಾಡ ಕಲಾವಿದರ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಮುಂದೆಯೂ ಇಲ್ಲಿ ತುಳು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಮಾಲಕರು ಹೇಳಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು. 
ಡಾ.ದೇವದಾಸ್ ಕಾಪಿಕಾಡ್ ಮಾತಾಡಿ, “ತುಳು ಸಿನಿಮಾಗಳಿಗೆ ಸುಚಿತ್ರ ಥಿಯೇಟರ್ ನಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಬೇಸರ ಇತ್ತು. ಅದು ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಇಲ್ಲಿಗೆ ಬಂದು ಸಿನಿಮಾ ವೀಕ್ಷಿಸಿ ಕಲ್ಜಿಗ ಸಿನಿಮಾವನ್ನು ಗೆಲ್ಲಿಸಿ” ಎಂದರು.
ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ಕಲ್ಜಿಗ ಸಿನಿಮಾ ನಾನು ನೋಡಿದ್ದೇನೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು. 
ವೇದಿಕೆಯಲ್ಲಿ ನಟ ಅರ್ಜುನ್ ಕಾಪಿಕಾಡ್, ಥಿಯೇಟರ್ ಮಾಲಕ ಪ್ರಶಾಂತ್, ನಿರ್ಮಾಪಕ ಶರತ್ ಕುಮಾರ್ ಎ.ಕೆ. ,ಶರ್ಮಿಳಾ ಕಾಪಿಕಾಡ್, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜ್ಯೋತಿಷ್ ಶೆಟ್ಟಿ,  ಭೋಜರಾಜ್ ವಾಮಂಜೂರ್,  ಅನೂಪ್ ಸಾಗರ್, ಕಾವ್ಯ ಅರ್ಜುನ್ ಕಾಪಿಕಾಡ್, ಸದಾಶಿವ ಅಮೀನ್, ರಂಜನ್ ಬೋಳೂರು, ನಿರ್ದೇಶಕ ಸುಮನ್ ಸುವರ್ಣ, ಮಾಧವ ಶೆಟ್ಟಿ ಬಾಳ ಉದಯ ಆಚಾರ್ಯ, ಆನಂದ ಬಂಗೇರ, ಶನಿಲ್ ಗುರು, ಶಾಂತಾರಾಮ್ ಮತ್ತಿತರರು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article