-->
Viral Video:‌ ಪುತ್ರಿಯ ತಲೆಗೆ CCTV ಅಳವಡಿಸಿದ ತಂದೆ: ಪಾಕಿಸ್ತಾನದಲ್ಲಿ ಹೀಗೂ ಆಗುತ್ತೆ!

Viral Video:‌ ಪುತ್ರಿಯ ತಲೆಗೆ CCTV ಅಳವಡಿಸಿದ ತಂದೆ: ಪಾಕಿಸ್ತಾನದಲ್ಲಿ ಹೀಗೂ ಆಗುತ್ತೆ!


ತನ್ನ ಮಗಳ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು ವ್ಯಕ್ತಿಯೊಬ್ಬರು ಅಳವಡಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
, ಸದ್ಯ ಘಟನೆಗೆ ಸಂಬಂಧಿಸಿದ VIDEO ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಮಗಳು ಎಲ್ಲೆಲ್ಲಿ ಹೋಗ್ತಾಳೆ? ಏನು ಮಾಡುತ್ತಾಳೆ ಎಂಬುದನ್ನು ತಿಳಿಯಲು ಈತ ತನ್ನ ಪುತ್ರಿ ತಲೆ ಮೇಲೆ ಸಿಸಿಟಿವಿ ಅಳವಡಿಸಿರುವುದಾಗಿ ವರದಿಯಾಗಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ತನ್ನ ತಂದೆ 24×7 ತನ್ನ ಮೇಲೆ ನಿಗಾ ವಹಿಸಲು CCTV ಫಿಕ್ಸ್​​ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಇದಲ್ಲದೇ ತಂದೆಯ ಈ ನಿರ್ಧಾರದಿಂದ ನಾನು  ಖುಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

@gharkekalesh ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಸೆ. 6ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ  ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋಗೆ ಸಾಕಷ್ಟು ಜನರು ಬಗೆ ಬಗೆಯಾಗಿ ಕಾಮೆಂಟ್​​ ಗಳನ್ನು ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article