ಈ ಸರಳ ಯೋಜನೆಯನ್ನು ನೀವು ಮಾಡಿಕೊಂಡಲ್ಲಿ ಪ್ರತೀ ತಿಂಗಳು ನಿಮ್ಮ ಖಾತೆಗೆ ಜಮೆಯಾಗುತ್ತದೆ 12,388ರೂ.
ಬೆಂಗಳೂರು: ನಿವೃತ್ತಿ ಬಳಿಕ, ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ಸುಭದ್ರವಾಗಿರಲು ಸ್ಥಿರವಾದ ಮಾಸಿಕ ಆದಾಯದ ಅವಶ್ಯಕತೆಯಿದೆ. ಅದಕ್ಕಾಗಿ ಕೆಲವರು ಷೇರು ಮಾರುಕಟ್ಟೆ ಮತ್ತು ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳುವ ಭೀತಿ ಇರುವುದರಿಂದ ಹೆಚ್ಚಿನವರು ಸರ್ಕಾರಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ನೀವು ಅಪಾಯ ಎದುರಿಸಲು ಇಷ್ಟಪಡದೆ, ಸ್ಥಿರವಾದ ಪಿಂಚಣಿ ಮೊತ್ತವನ್ನು ಪಡೆಯಲು ಯೋಚಿಸುತ್ತಿದ್ದರೆ, ಎಲ್ಐಸಿಯ ಪಿಂಚಣಿ ಯೋಜನೆಯನ್ನು ಮಾಡಿ ನಿವೃತ್ತಿ ಬಳಿಕ, ಜೀವನ ಪರ್ಯಂತ ಸ್ಥಿರವಾದ ಪಿಂಚಣಿ ಪಡೆಯಬಹುದು.
ಎಲ್ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ ಸಾಕು. ಆದರೆ, ಜೀವನ ಪರ್ಯಂತ ಪಿಂಚಣಿಯನ್ನು ಪಡೆಯಬಹುದು. ಇದು ಈ ಯೋಜನೆಯ ವಿಶೇಷ ಆಕರ್ಷಣೆಯಾಗಿದೆ. ಜನಪ್ರಿಯ ಪಿಂಚಣಿ ಯೋಜನೆಯಾಗಿರುವ ಸರಳ ಪಿಂಚಣಿ ಯೋಜನೆಯು ಪ್ರತಿ ತಿಂಗಳು 12,000 ರೂ. ಪಿಂಚಣಿ ಪಡೆಯಲು ಸಹಾಯ ಮಾಡುತ್ತದೆ.
ಒಬ್ಬ ವ್ಯಕ್ತಿಯು ಖಾಸಗಿ ವಲಯದಲ್ಲಿ ಅಥವಾ ಸರ್ಕಾರಿ ವಲಯದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದುವ ಮೊದಲು ಪಿಎಫ್ ಹಣ ಮತ್ತು ಗ್ರಾಚ್ಯುಟಿ ಮೊತ್ತವನ್ನು ಇದರಲ್ಲಿ ಹೂಡಿಕೆ ಮಾಡಿದರೆ, ಜೀವನ ಪರ್ಯಂತ ಖಚಿತವಾದ ಮಾಸಿಕ ಆದಾಯವನ್ನು ಈ ಯೋಜನೆಯ ಮೂಲಕ ಪಡೆಯಬಹುದು.
ಎಲ್ಐಸಿಯ ಈ ಯೋಜನೆಯಲ್ಲಿ 40ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೂಡಿಕೆ ಮಾಡಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, 80 ವರ್ಷದೊಳಗಿನ ಯಾರಾದರೂ ಯಾವಾಗ ಬೇಕಾದರೂ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿಯ ಅಡಿಯಲ್ಲಿ, ವಾರ್ಷಿಕವಾಗಿ ರೂ. 1000 ಮಾಸಿಕವಾಗಿ ಪಾವತಿಸಬೇಕು. ಅದೇ ಸಮಯದಲ್ಲಿ, ಕನಿಷ್ಠ 3000 ರೂ. ತ್ರೈಮಾಸಿಕ ಆಧಾರದ ಮೇಲೆ, 6000 ರೂ. ಅರ್ಧವಾರ್ಷಿಕ ಆಧಾರದ ಮೇಲೆ ಮತ್ತು 12000ರೂ. ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು.
ವರ್ಷಕ್ಕೆ ಕನಿಷ್ಠ ರೂ.12,000 ವಾರ್ಷಿಕ ಮೊತ್ತವನ್ನು ಪಡೆಯಬಹುದು. ಈ ಯೋಜನೆಯ ಅಡಿಯಲ್ಲಿ ಗರಿಷ್ಠ ಹೂಡಿಕೆ ಮಿತಿಯೇನೂ ಇಲ್ಲ. ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಎಲ್ಐಸಿಯ ಈ ಯೋಜನೆಯನ್ವಯ, 42 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ವಾರ್ಷಿಕವಾಗಿ 30ರೂ. ಲಕ್ಷ ಪಾಲಿಸಿ ತೆಗೆದುಕೊಂಡರೆ, ಅವರಿಗೆ ಪ್ರತಿ ತಿಂಗಳು 12,388 ರೂ. ಪಿಂಚಣಿ ಸಿಗುತ್ತದೆ.
ಪಾಲಿಸಿ ತೆಗೆದುಕೊಂಡ 6 ತಿಂಗಳ ಬಳಿಕ, ಅಗತ್ಯವಿದ್ದರೆ ಪಾಲಿಸಿಯನ್ನು ಸರೆಂಡರ್ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ ಸಾಲ ಪಡೆಯುವ ಸೌಲಭ್ಯವೂ ಇದೆ. ಆದರೆ, ಸಾಲದ ಮೊತ್ತವು ಪಾಲಿಸಿಯಲ್ಲಿ ಮಾಡಿದ ಹೂಡಿಕೆಯನ್ನು ಅವಲಂಬಿಸಿರುತ್ತದೆ. ಎಲ್ಐಸಿಯ ಈ ಯೋಜನೆಯಲ್ಲಿ ಸೇರಲು ಮತ್ತು ಹೆಚ್ಚಿನ ಮಾಹಿತಿಗಾಗಿ www.licindia.in ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.