ತಿಂಗಳ ಸಂಬಳ 20ಸಾವಿರವಿದ್ದರೂ ನೀವಾಗಬಹುದು ಕೋಟ್ಯಾಧಿಪತಿ: ಇದಕ್ಕೆ ಮಾಡಬೇಕಾದದ್ದು ನೀವಿಷ್ಟೇ ಅದುವೇ ಬುಲ್ ರನ್ ತಂತ್ರ
ಬೆಂಗಳೂರು: ನಿಮ್ಮ ಪ್ರತಿ ತಿಂಗಳ ಸಂಬಳ ಕೇವಲ 20 ಸಾವಿರ ರೂ. ಇದ್ದರೂ, ನೀವು ಕೋಟ್ಯಧಿಪತಿ ಆಗಬಹುದು. 1 ಕೋಟಿ ರೂ.ಗಳ ನಿಧಿಯನ್ನು ರಚಿಸಲು ನಿರ್ಧಾರ ಮಾಡಿದರೆ, ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ? ಅದುವೇ ಬುಲ್ ರನ್ ತಂತ್ರ. ಇದಕ್ಕಾಗಿ ನೀವು ದೀರ್ಘಾವಧಿಯ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಅದ್ಭುತ ಆದಾಯ ಕೂಡ ನಿಮಗೆ ಸಿಗುತ್ತದೆ. ಈ ಸಂಪೂರ್ಣ ಅವಧಿಯಲ್ಲಿ ನೀವು ಬಡ್ಡಿಯ ಮೇಲೆ ಬಡ್ಡಿಯನ್ನು ಪಡೆಯುತ್ತೀರಿ. ನೀವು ಎಷ್ಟು ಬೇಗ ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ಪ್ರಯೋಜನವನ್ನು ಪಡೆಯುತ್ತೀರಿ. 'ಕಂಪೌಂಡಿಂಗ್' ಲಾಭ ಪಡೆಯಲು, ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಮಾಡಬೇಕು.
ನಿಮ್ಮ ಪ್ರತಿ ತಿಂಗಳ ಸ್ಯಾಲರಿ 20 ಸಾವಿರವಾಗಿದ್ದರೆ, ಅದರ ಶೇ.15ರಷ್ಟು ಅಂದರೆ, 3 ಸಾವಿರ ರೂ.ವನ್ನು ನೀವು ಹೂಡಿಕೆ ಮಾಡುವ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು.
ನಿಮ್ಮ ಸ್ಯಾಲರಿಯಿಂದ ತೆಗೆದ ಈ 3 ಸಾವಿರ ರೂ.ವನ್ನು ಪ್ರತಿ ತಿಂಗಳು ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ ಅಂದರೆ SIP ಮಾಡಬೇಕು. ಯಾವುದೇ ಕಷ್ಟ, ಏನೇ ಅಡೆತಡೆ ಇದ್ದರೂ ಇದನ್ನು ಬಿಡಬಾರದು.
ಕೇವಲ ಒಂದು-ಎರಡು ವರ್ಷಗಳ ಹೂಡಿಕೆಯಲ್ಲಿ, ಬರೋಬ್ಬರಿ 30 ವರ್ಷಗಳ ದೀರ್ಘಾವಧಿಯ ಕಾಲ ಹೂಡಿಕೆ ಮಾಡಬೇಕಾಗಿರುತ್ತದೆ.
ನೀವು ಮಾಡುವ ಹೂಡಿಕೆಗೆ ವಾರ್ಷಿಕವಾಗಿ ಶೇ. 12ರಷ್ಟು ಬಡ್ಡಿ ಬರುತ್ತಿರಬೇಕು. ಸಾಮಾನ್ಯವಾಗಿ ಮ್ಯೂಚ್ಯುವಲ್ ಫಂಡ್ನ ಬ್ಲ್ಯೂಚಿಪ್ ಫಂಡ್ಗಳು ವಾರ್ಷಿಕ ಶೇ. 12ರಷ್ಟು ರಿಟರ್ನ್ಸ್ ನೀಡುತ್ತವೆ.
30 ವರ್ಷಗಳ ಅವಧಿಗೆ ನೀವು ಮಾಡುವ ಒಟ್ಟು ಹೂಡಿಕೆ ಮೊತ್ತ 10 ಲಕ್ಷದ 80 ಸಾವಿರ ರೂಪಾಯಿ ಆಗುತ್ತದೆ.
ಪ್ರತಿ ತಿಂಗಳ ನಿಮ್ಮ ಹೂಡಿಕೆ ಮೊತ್ತ ಹಾಗೂ ವಾರ್ಷಿಕ ಶೇ. 12ರಷ್ಟು ರಿಟರ್ನ್ಸ್ ಎಂದರೆ, 30 ವರ್ಷಗಳ ಬಳಿಕ ನಿಮಗೆ ಬರುವ ರಿಟರ್ನ್ಸ್ ಮೊತ್ತ 95,09,741 ರೂಪಾಯಿ ಆಗಿರುತ್ತದೆ.
ನಿಮ್ಮ ಸಂಬಳದ ರೂ.20,000 ಅಂದರೆ ರೂ.3,000ದ ಶೇ.15ರಷ್ಟು ಹಣವನ್ನು ಹೂಡಿಕೆ ಮಾಡುವುದರಿಂದ 30 ವರ್ಷಗಳ ಅವಧಿಯಲ್ಲಿ ನೀವು SIP ಮೂಲಕ 1 ಕೋಟಿ 5 ಲಕ್ಷದ 89 ಸಾವಿರದ 741 ರೂಪಾಯಿ ಹಣ ಪಡೆಯುತ್ತೀರಿ. ಅದರ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ.