ಮಂಗಳೂರು: 'ನನ್ನೊಂದಿಗೆ ಸಹಕರಿಸು, ಇಲ್ಲದಿದ್ದರೆ 24 ತುಂಡು ಮಾಡುವೆ' ಸಂದೇಶ ಕಳುಹಿಸಿ ಕಿರುಕುಳ ಆರೋಪ - ಯುವತಿ ಆತ್ಮಹತ್ಯೆಗೆ ಯತ್ನ
Friday, October 25, 2024
ಮಂಗಳೂರು: 'ನನ್ನೊಂದಿಗೆ ಸಹಕರಿಸು, ಇಲ್ಲದಿದ್ದರೆ 24 ತುಂಡು ಮಾಡುವೆ' ಎಂದು ಸಂದೇಶ ಕಳುಹಿಸಿ ಎಂದು ಯುವಕರಿಬ್ಬರ ನಿರಂತರ ಕಿರುಕುಳದಿಂದ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ನಡೆದಿದೆ.
ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಅನ್ಯಕೋಮಿನ ಯುವಕರಾದ ಶಾರಿಕ್ ಹಾಗೂ ನೂರ್‌ಜಹಾನ್ ಎಂಬಿಬ್ಬರು ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪವಿತ್ತು. ಸದ್ಯ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇವರು ಯುವತಿಯ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಿ ಆಕೆಯ ಸಹೋದರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದಲ್ಲದೆ ಬೆದರಿಕೆಯೊಡ್ಡಿದ್ದ ಆರೋಪವಿದೆ. ಅಲ್ಲದೆ ಯುವತಿಯ ಸಹೋದರನಿಗೆ ವಾಟ್ಸ್ಆ್ಯಪ್ ಮೆಸೇಜ್ ಮಾಡಿ ಧಮಕಿ ಹಾಕಿದ್ದ ಆರೋಪವೂ ಇದೆ. ಇವರ ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಯತ್ನಿಸಿದ್ದಾಳೆ.
ಈ ಹಿಂದೆಯೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕವೂ ನಿರಂತರ ಮೆಸೇಜ್ ಹಿನ್ನೆಲೆಯಲ್ಲಿ ಮನನೊಂದ ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆತ್ಮಹತ್ಯೆ ಯತ್ನಕ್ಕೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಳು.
ಪೊಲೀಸ್ ಠಾಣೆಯಲ್ಲಿ ಕಾದರೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯ್ಯಲ್ಲಿ ಅತ್ಯಾಚಾರ ಆಗಿ ಸಾಯು ಬದಲು ಈಗಲೇ ಸಾಯ್ತೇನೆ. ಆದರೆ ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನು ಬಿಡಬಾರದು ಎಂದು ಡೆತ್ ನೋಟ್ ನಲ್ಲಿ ಇಬ್ಬರ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ.