-->
ಆಯುಷ್ಮಾನ್‌ ಭಾರತ ಹೊಸ ಯೋಜನೆಯನ್ವಯ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ಪ್ರತ್ಯೇಕ ಆರೋಗ್ಯ ವಿಮೆ

ಆಯುಷ್ಮಾನ್‌ ಭಾರತ ಹೊಸ ಯೋಜನೆಯನ್ವಯ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ಪ್ರತ್ಯೇಕ ಆರೋಗ್ಯ ವಿಮೆ



ನವದೆಹಲಿ: ಇತ್ತೀಚೆಗೆ ಆಯುಷ್ಮಾನ್‌ ಭಾರತ ಯೋಜನೆ ಪರಿಷ್ಕರಣೆಗೊಂಡಿದೆ. ಇದರನ್ವಯ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ವಯಸ್ಕರಿಗೆ ‘ಸಮೂಹ ವಿಮೆ’ಗೆ (ಗ್ರೂಪ್‌ ಇನ್ಶೂರನ್ಸ್‌) ಹೊರತಾದ 5 ಲಕ್ಷ ರೂ. ಪ್ರತ್ಯೇಕ ವಿಮಾ ಸೌಲಭ್ಯ ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಅರ್ಹರನ್ನು ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಿ ಎಂದು ರಾಜ್ಯಗಳಿಗೆ ಸೂಚಿಸಿದೆ.


ಇದಕ್ಕೆ ಸಂಬಂಧಿಸಿದಂತೆ ಆಯುಷ್ಮಾನ್ ಆ್ಯಪ್‌ ಹಾಗೂ beneficiary.nha.gov.in ವೆಬ್‌ ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿ 70 ವರ್ಷ ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತ್ಯೇಕ ಮಾಡ್ಯೂಲ್‌ ನೀಡಲಾಗಿದೆ. ಅದರಲ್ಲಿ ಈ ವಯೋಮಾನದ ವೃದ್ಧರನ್ನು ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ. ಅಲ್ಲದೆ, ಇವರಿಗೆ ಪ್ರತ್ಯೇಕ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ.


ಈಗಿನ ಕಾರ್ಡ್‌ನಲ್ಲಿ ಸಮೂಹ ವಿಮಾ ಸೌಲಭ್ಯ ಇದ್ದು, ಇಡೀ ಕುಟುಂಬಕ್ಕೆ 5 ಲಕ್ಷ ರು. ಲಭಿಸುತ್ತದೆ. ಈಗ ಇಡೀ ಕುಟುಂಬ ಪೂರ್ತಿ 5 ಲಕ್ಷ ರು. ವಿಮಾ ಹಣ ಖರ್ಚು ಮಾಡಿದ್ದರೂ ಹಿರಿಯರಿಗೆ ಪ್ರತ್ಯೇಕವಾಗಿ 5 ಲಕ್ಷ ರು. ವಿಮೆ ಲಭಿಸುತ್ತದೆ. ಈಗಾಗಲೇ ಈ ಹಿರಿಯರು ಪ್ರತ್ಯೇಕ ರಾಜ್ಯ ಸರ್ಕಾರಿ ವಿಮೆ ಹೊಂದಿದ್ದರೆ ಅವರು ಆಯುಷ್ಮಾನ್‌ ಅಥವಾ ರಾಜ್ಯ ಸರ್ಕಾರಿ ವಿಮೆ ಆಯ್ಕೆ ಮಾಡಿಕೊಳ್ಳಬೇಕು.


 ಎರಡನ್ನೂ ಹೊಂದಲು ಅವಕಾಶವಿಲ್ಲ. ಆದರೆ ಖಾಸಗಿ ಆರೋಗ್ಯ ವಿಮೆ ಹೊಂದಿದ್ದರೆ ಅವರಿಗೆ ಈ ಷರತ್ತು ಇಲ್ಲ. ಆಯುಷ್ಮಾನ್‌ ಕಾರ್ಡನ್ನೂ ಪಡೆಯಬಹುದು.


Ads on article

Advertise in articles 1

advertising articles 2

Advertise under the article