-->
ಆರು ತಿಂಗಳಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯದ ತಕರಾರು ಪ್ರಕರಣಗಳ ಇತ್ಯರ್ಥ: ಕಂದಾಯ ಇಲಾಖೆ ಡೆಡ್‌ಲೈನ್

ಆರು ತಿಂಗಳಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯದ ತಕರಾರು ಪ್ರಕರಣಗಳ ಇತ್ಯರ್ಥ: ಕಂದಾಯ ಇಲಾಖೆ ಡೆಡ್‌ಲೈನ್

ಆರು ತಿಂಗಳಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯದ ತಕರಾರು ಪ್ರಕರಣಗಳ ಇತ್ಯರ್ಥ: ಕಂದಾಯ ಇಲಾಖೆ ಡೆಡ್‌ಲೈನ್





ರಾಜ್ಯದಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯದ ತಕರಾರು ಪ್ರಕರಣಗಳ ವಿಲೇವಾರಿ ಸಮರೋಪಾದಿಯಲ್ಲಿ ನಡೆದಿದೆ. ಮುಂದಿನ ಆರು ತಿಂಗಳಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿಗಳಿಗೆ ಡೆಡ್‌ಲೈನ್ ನೀಡಿದೆ.


ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಉಳಿದ ತಕರಾರು ಪ್ರಕರಣಗಳನ್ನು ಮುಂದಿನ ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.


ಒಂದು ವರ್ಷದ ಹಿಂದೆ ರಾಜ್ಯದ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ 73,682 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 33207 ಪ್ರಕರಣಗಳನ್ನು ಕಳೆದ ಒಂದು ವರ್ಷದಿಂದ ಇತ್ಯರ್ಥ ಮಾಡಲಾಗಿದೆ.


ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಪ್ರಕರಣಗಳ ಶೀಘ್ರ ಇತ್ಯರ್ಥದಿಂದಾಗಿ ರೈತರು, ಸಾರ್ವಜನಿಕರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸಬೇಕಾಗಿದೆ. ರೈತರಿಗೆ ನ್ಯಾಯ ಒದಗಿಸಿನೆಮ್ಮದಿ ನೀಡಿರುವುದು ಒಂದು ಸಾರ್ಥಕದ ಕೆಲಸ ಎಂದು ಸಚಿವರು ಉಪ ವಿಭಾಗಾಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಇರುವ ತಕಾರು ಪ್ರಕರಣಗಳನ್ನು ಆರು ತಿಂಗಳ ಒಳಗೆ ವಿಲೇವಾರಿ ಮಾಡಬೇಕು ಎಂಬುದು ಕಾನೂನು. ಇನ್ನೂ 40 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾಗಿದೆ. ಈ ಕೆಲಸವನ್ನು ಆರು ತಿಂಗಳಲ್ಲಿ ಮಾಡಬೇಕಾಗಿದೆ ಎಂದು ಕಂದಾಯ ಸಚಿವರು ನುಡಿದರು.


ರಾಜ್ಯದ ಬಹುತೇಕ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಅಧಿಕಾರಿಗಳು ಮನಸ್ಸು ಮಾಡಿ ಈ ಕಾರ್ಯದಲ್ಲಿ ಕೈಜೋಡಿಸಿದರೆ ರೈತರಿಗೆ ನ್ಯಾಯ ಒದಗಿಸುವುದು ಕಷ್ಟಸಾಧ್ಯವಲ್ಲ ಎಂದು ಸಚಿವರು ನುಡಿದರು.


Ads on article

Advertise in articles 1

advertising articles 2

Advertise under the article