-->
ಬೆಳ್ತಂಗಡಿ: ಕಾರು ರಿವರ್ಸ್ ತೆಗೆಯುತ್ತಿದ್ದಾಗ ಮನೆಯಂಗಳದಲ್ಲಿಯೇ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು

ಬೆಳ್ತಂಗಡಿ: ಕಾರು ರಿವರ್ಸ್ ತೆಗೆಯುತ್ತಿದ್ದಾಗ ಮನೆಯಂಗಳದಲ್ಲಿಯೇ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು


ಬೆಳ್ತಂಗಡಿ: ಕಾರು ರಿವರ್ಸ್ ತೆಗೆಯುತ್ತಿದ್ದ ವೇಳೆ ಮನೆಯಂಗಳದಲ್ಲಿಯೇ ಆಕಸ್ಮಿಕವಾಗಿ ಕಾರಿನಡಿಗೆ ಬಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ 4ನೇ ತರಗತಿಯ ವಿದ್ಯಾರ್ಥಿ ನವಾಫ್ ಇಸ್ಮಾಯಿಲ್ (10) ಮೃತ ಬಾಲಕ.

ಮನೆಯ ಅಂಗಳದಲ್ಲಿ ಕಾರನ್ನು ತೆಗೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬಾಲಕ ಕಾರಿನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



Ads on article

Advertise in articles 1

advertising articles 2

Advertise under the article