ಬಹುನಿರೀಕ್ಷಿತ ನೇಮಕಾತಿ: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 10000 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
Tuesday, October 8, 2024
ಬಹುನಿರೀಕ್ಷಿತ ನೇಮಕಾತಿ: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 10000 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಈ ವರ್ಷದ ಬಹುನಿರೀಕ್ಷಿತ ನೇಮಕಾತಿ ಪ್ರಕ್ರಿಯೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಆರಂಭಿಸಿದೆ. ಈ ಬಾರಿ 10000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗುತ್ತಿದೆ.
ಡಿಜಿಟಲ್ ಸೇವೆಯನ್ನು ಬಲಪಡಿಸಿ ಗ್ರಾಹಕರಿಗೆ ನಿರಂತರ ಸೇವೆ ನೀಡುವ ಉದ್ದೇಶ ಹೊಂದಿದ್ದು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸೇವೆಯನ್ನು ಗಣನೀಯವಾಗಿ ಉತ್ತಮಪಡಿಸಲು ಈ ನೇಮಕಾತಿ ನಡೆಸಲಾಗುತ್ತಿದೆ.
ಸಾಮಾನ್ಯ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯಪಡೆಯ ಬಲವರ್ಧನೆಯನ್ನು ಈ ಹುದ್ದೆಗಳ ನೇಮಕಾತಿ ಮಾಡುವ ಮೂಲಕ ನಡೆಸಲಾಗುವುದು ಎಂದು ಎಸ್‌ಬಿಐ ಅಧ್ಯಕ್ಷ ಸಿ ಎಸ್ ಸೆಟ್ಟಿ ಅವರು ತಿಳಿಸಿದ್ದಾರೆ.
ಇತ್ತೀಚಿಗಷ್ಟೆ 1500 ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬೃಹತ್ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆ ಹೊರಬೀಳಲಿದೆ.