-->
ಕೆಪಿಟಿಸಿಎಲ್‌, ಎಸ್ಕಾಂಗಳಲ್ಲಿ 2984 ಹುದ್ದೆಗಳಿಗೆ ನೇಮಕಾತಿ: SSLC ಆದವರಿಗೆ ಮಾತ್ರ ಅವಕಾಶ

ಕೆಪಿಟಿಸಿಎಲ್‌, ಎಸ್ಕಾಂಗಳಲ್ಲಿ 2984 ಹುದ್ದೆಗಳಿಗೆ ನೇಮಕಾತಿ: SSLC ಆದವರಿಗೆ ಮಾತ್ರ ಅವಕಾಶ

ಕೆಪಿಟಿಸಿಎಲ್‌, ಎಸ್ಕಾಂಗಳಲ್ಲಿ 2984 ಹುದ್ದೆಗಳಿಗೆ ನೇಮಕಾತಿ: SSLC ಆದವರಿಗೆ ಮಾತ್ರ ಅವಕಾಶ





ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ- ಕೆ ಪಿ ಟಿ ಸಿ ಎಲ್ ಮತ್ತು ರಾಜ್ಯ ವಿವಿಧ ವಿದ್ಯುತ್ ಸರಬರಾಜ್ ಕಂಪೆನಿಗಳಲ್ಲಿ ಖಾಲಿ ಇರುವ ಕೆಳ ಹಂತದ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.


ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ರಾಜ್ಯ ವಿವಿಧ ವಿದ್ಯುತ್ ಸರಬರಾಜ್ ಕಂಪೆನಿಗಳ ಬ್ಯಾಕ್‌ಲಾಗ್‌‌ ಹುದ್ದೆಗಳೂ ಸೇರಿ ಕಿರಿಯ ಸ್ಟೇಷನ್ ಪರಿಚಾರಕ-ಜೆಎಸ್‌ಎ, ಜ್ಯೂನಿಯರ್ ಪವರ್ ಮ್ಯಾನ್- ಜೆಪಿಎಂ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ 224 ಹುದ್ದೆಗಳೂ ಸೇರಿವೆ.


ಒಟ್ಟು 2984 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಕರ್ನಾಟಕದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಥವಾ ಅದಕ್ಕೆ ಸರಿಸಮನಾದ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿದವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


ಸಿ.ಬಿ.ಎಸ್.ಸಿ. ಅಥವಾ ಇತರೆ ಬೋರ್ಡ್‌ ಪರೀಕ್ಷೆಗಳಿಂದ 10ನೇ ಕ್ಲಾಸ್ ಪಾಸ್ ಆದವರು ಅರ್ಜಿ ಸಲ್ಲಿಸುವ ಹಾಗಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುವವರೂ ಈ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹರಲ್ಲ.


ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷ ಪೂರೈಸಿರಬೇಕು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 20, 2024


ಒಂದು ಹುದ್ದೆಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದು.


ಕೆಪಿಟಿಸಿಎಲ್ ಅಥವಾ ಯಾವುದೇ ಎಸ್ಕಾಂಗೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸಬೇಕು. 


ಜಿಎಸ್‌ಎ ಹುದ್ದೆಗಳು ಕೆಪಿಟಿಸಿಎಲ್‌ನಲ್ಲಿ ಮಾತ್ರ ಲಭ್ಯ ಇದೆ.


ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


https://kptcl.karnataka.gov.in/

Ads on article

Advertise in articles 1

advertising articles 2

Advertise under the article