ಈ ರಾಶಿಯವರು ಕೆಂಪು ದಾರವನ್ನು ತಮ್ಮ ಕೈಗೆ ಕಟ್ಟಿಕೊಂಡರೆ ಅದೃಷ್ಟವೇ ಅದೃಷ್ಟ...!
Thursday, October 17, 2024
ಧಾರ್ಮಿಕ ನಂಬಿಕೆಯ ಪ್ರಕಾರ, ಕೈಗೆ ಕೆಂಪು ದಾರವನ್ನು ಕಟ್ಟಿಕೊಂಡ ಜನರನ್ನು ಲಕ್ಷ್ಮಿ ದೇವಿಯು ಸಂತೋಷದಿಂದಿರಿಸುತ್ತಾಳೆ. ಜೊತೆಗೆ ಆಂಜನೇಯನ ವಿಶೇಷ ಆಶೀರ್ವಾದವೂ ಇವರ ಮೇಲೆ ಇರುತ್ತದೆ. ಅಂದಹಾಗೆ ಮಂಗಳನ ಬಣ್ಣವು ಕೆಂಪು ಆಗಿರುವ ಕಾರಣ, ಕೆಂಪು ದಾರ ಕೈಗೆ ಕಟ್ಟುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಗೊಳ್ಳುತ್ತದೆ.
ಇನ್ನು ಜ್ಯೋತಿಷ್ಯದ ಪ್ರಕಾರ, ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಯ ಜನರು ಕೆಂಪು ದಾರವನ್ನು ಕಟ್ಟಬೇಕು. ಮಕರ ಮತ್ತು ಕುಂಭ ರಾಶಿ ಜನರು ಕೆಂಪುದಾರ ಕಟ್ಟಬಾರದು. ನಂಬಿಕೆಯ ಪ್ರಕಾರ, ಕೆಂಪು ದಾರವನ್ನು ಕಟ್ಟಿದರೆ ಒಳಿತಾಗುವ ರಾಶಿಗಳಿಗೆ, ಆಂಜನೇಯನ ಆಶೀರ್ವಾದವಿರುತ್ತದೆ. ಅಂತೆಯೇ ಮಂಗಳ ಮತ್ತು ಸೂರ್ಯದೇವನ ವಿಶೇಷ ಕೃಪೆ ಇರುತ್ತದೆ.
ಶನಿ ದೇವನು ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಶನಿದೇವನಿಗೆ ಕೆಂಪು ಬಣ್ಣ ಇಷ್ಟವಿಲ್ಲ. ಹೀಗಾಗಿ ಈ ಎರಡು ರಾಶಿಗಳ ಜನರು ಕೆಂಪು ದಾರ ಅಥವಾ ಕೆಂಪು ಬಣ್ಣದ ಕಲವನ್ನು ಧರಿಸಬಾರದು. ಇದಲ್ಲದೆ, ಮೀನ ರಾಶಿಯವರು ಸಹ ಕೆಂಪು ಬಣ್ಣದ ದಾರವನ್ನು ಧರಿಸಬಾರದು.
ಮಂಗಳವಾರದಂದು ಕೆಂಪು ಬಣ್ಣದ ದಾರವನ್ನು ಧರಿಸಿದರೆ ಬ್ರಹ್ಮದೇವನ ಕೃಪೆಯಿಂದ ಕೀರ್ತಿಯೂ, ವಿಷ್ಣುವಿನ ಕೃಪೆಯಿಂದ ರಕ್ಷಣಾ ಶಕ್ತಿಯೂ, ಶಿವನ ಕೃಪೆಯಿಂದ ಸಕಲ ಸಂಕಟಗಳ ಪರಿಹಾರವೂ ದೊರೆಯುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಪತ್ತು, ದುರ್ಗಾ ದೇವಿಯ ಕೃಪೆಯಿಂದ ಶಕ್ತಿ ಮತ್ತು ಸರಸ್ವತಿ ದೇವಿಯ ಕೃಪೆಯಿಂದ ಬುದ್ದಿವಂತಿಕೆ ಲಭಿಸುತ್ತದೆ ಎಂದು ಜೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.