-->
ನಿಧಾನ ಹೋಗು ಎಂದದ್ದೇ ತಪ್ಪಾಯ್ತೇ? ವೃದ್ಧನನ್ನು ಒಂದೇ ಏಟಿಗೆ ಹೊಡೆದು ಕೊಂದು ಹಾಕಿದ ಬೈಕ್ ಸವಾರ

ನಿಧಾನ ಹೋಗು ಎಂದದ್ದೇ ತಪ್ಪಾಯ್ತೇ? ವೃದ್ಧನನ್ನು ಒಂದೇ ಏಟಿಗೆ ಹೊಡೆದು ಕೊಂದು ಹಾಕಿದ ಬೈಕ್ ಸವಾರ



ಹೈದರಾಬಾದ್‌: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ರಸ್ತೆಯಲ್ಲಿ ಜಗಳ, ಹೊಡೆದಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಯುವಕನೊಬ್ಬನನ್ನು ಆತನ ಹೆತ್ತವರ ಮುಂದೆಯೇ ಸುಖಾಸುಮ್ಮನೆ ಥಳಿಸಿ ಕೊಲ್ಲಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಸದ್ದು ಮಾಡಿತ್ತು. ಇದೀಗ ಈ ಪ್ರಕರಣ ಮಾಸುವ ಮುನ್ನವೇ ಹೈದರಾಬಾದ್‌ನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೈದರಾಬಾದ್‌ನ ಅಲ್ವಾಲ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ದಾಟುತ್ತಿದ್ದ ಹಿರಿಯರೊಬ್ಬರು ಬೈಕ್ ಸವಾರನಿಗೆ ನಿಧಾನಕ್ಕೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಬೈಕ್ ಸವಾರ ಆ ವೃದ್ಧನನ್ನು ತಳ್ಳಿ ಒಂದೇ ಏಟಿಗೆ ಕೊಂದು ಹಾಕಿದ್ದಾನೆ‌‌. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಲ್ವಾಲ್ ಪೊಲೀಸ್‌ ಠಾಣಾ ವ್ಯಾಪ್ತಿಯ ಜನನಿಬಿಡ ಪ್ರದೇಶದಲ್ಲಿ ಆ ವೃದ್ಧ ರಸ್ತೆ ದಾಟಲು ಪರದಾಡುತ್ತಿರುತ್ತಾರೆ. ಬಳಿಕ ವೃದ್ಧ ಹೇಗೋ ಕಷ್ಟಪಟ್ಟು ರಸ್ತೆ ದಾಟಿದ್ದಾರೆ. ಆಗ ವೇಗವಾಗಿ ಬಂದ ಬೈಕ್‌ ಸವಾರನೋರ್ವ ಅವರಿಗೆ ಡಿಕ್ಕಿ ಹೊಡೆಯುವುದರಿಂದ ತಪ್ಪಿಸುತ್ತಾನೆ. ಈ ವೇಳೆ ವೃದ್ಧ ಆತನಿಗೆ ನಿಧಾನಕ್ಕೆ ಬೈಕ್‌ ಚಲಾಯಿಸುವಂತೆ ಹೇಳುತ್ತಾರೆ. ಇದರಿಂದ ಸಿಟ್ಟಿಗೆದ್ದ ಬೈಕ್‌ ಸವಾರ ಗಾಡಿಯನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬಂದು ವೃದ್ಧನನ್ನು ತಳ್ಳಿ ಒಂದೇಟು ಹೊಡೆದಿದ್ದಾನೆ. ಸವಾರನ ಏಟಿಗೆ ವೃದ್ಧ ಸ್ಥಳದಲ್ಲೇ ಕುಸಿದು ಬಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ಮೃತರನ್ನು ಆಂಜನೇಯುಲು ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಬೈಕ್‌ ಸವಾರನನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article