-->
ಅಣಬೆ ಬೆಳೆದು ಹಣ ಗಳಿಸಬೇಕೇ ಹಾಗಾದರೆ ಒಂದು ದಿನದ ತರಬೇತಿಗೆ ಹಾಜರಾಗಿ

ಅಣಬೆ ಬೆಳೆದು ಹಣ ಗಳಿಸಬೇಕೇ ಹಾಗಾದರೆ ಒಂದು ದಿನದ ತರಬೇತಿಗೆ ಹಾಜರಾಗಿ


ಬೆಂಗಳೂರು: ಇಲ್ಲಿನ ಹುಳಿಮಾವು ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರವು ನಗರವಾಸಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಕ್ಟೋಬರ್ 5 ರಂದು  'ಅಣಬೆ ಬೇಸಾಯ' (Production Technology of Mushroom) ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.


ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ರೂ. 250ಗಳನ್ನು  ಜೈವಿಕ  ಕೇಂದ್ರ, ಹುಳಿಮಾವು, ಬೆಂಗಳೂರು ರವರ ಕಚೇರಿಯಲ್ಲಿ  ತರಬೇತಿಯ  ದಿನ ಪಾವತಿಸಿ ನೊಂದಣಿಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ   ದೂರವಾಣಿ ಸಂಖ್ಯೆ : 9449833153, 9066764248, 7892618755 ಅಥವಾ ಇ-ಮೇಲ್ sadh.co23@gmail.com, jaivikakendra.hulimavu@gmail.com ಮೂಲಕ ಸಂಪರ್ಕಿಸಬಹುದು  ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೆಂಗಳೂರಿನ ನಾಗಮಂಗಲ, ದೊಡ್ಡ ಬಳ್ಳಾಪುರ, ಹೊಸಕೋಟೆ ಸೇರಿದಂತೆ ವಿವಿಧೆಡೆ ಅಣಬೆ ಬೇಸಾಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಸುಲಭವಾಗಿ ಒಂದು ಕೋಣೆಯಲ್ಲಿ ಅಣಬೆ ಬೆಳಯಲು ಬೇಕಾದ ವಾತಾವರಣ ನಿರ್ಮಿಸಿ ಸುಲಭವಾಗಿ ಅಣಬೆಗಳನ್ನು ಬೆಳೆದು ಮಾರಾಟ ಮಾಡಬಹುದು, ಮಾರುಕಟ್ಟೆಯಲ್ಲಿ ಒಂದು 500 ಗ್ರಾಂ ಅಣಬೆಗೆ 40 ರೂ.ಗಳಿಂದ 80 ರೂವರೆಗೆ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆಯಿದೆ. ಸಂಪೂರ್ಣವಾಗಿ ಬೆಳೆದ ಅಣಬೆಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟರೆ ಸುಮಾರು 7ರಿಂದ 10 ದಿನಗಳವರೆಗೆ ಸಂಗ್ರಹಿಸಿಟ್ಟು ಮಾರಾಟ ಮಾಡಬಹುದು. ಇನ್ನು ಮನೆಗೆ ಸೀಮಿತವಾಗಿ ಸಾವಯವ ಮಾದರಿಯಲ್ಲಿ ಅಣಬೆ ಬೆಳೆಯುತ್ತೇವೆ ಎನ್ನುವವರಿಗೂ ಈ ತರಬೇತಿ ಉತ್ತಮ ಸಹಕಾರಿ ಆಗಲಿದೆ.

Ads on article

Advertise in articles 1

advertising articles 2

Advertise under the article