-->
ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಮಹಾ ವಂಚನೆ: ಸಿಬ್ಬಂದಿಯಿಂದಲೇ 3.22 ಕೋಟಿ ರೂ. ಪಂಗನಾಮ- ನಾಲ್ವರ ವಿರುದ್ಧ ಎಫ್‌ಐಆರ್‌

ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಮಹಾ ವಂಚನೆ: ಸಿಬ್ಬಂದಿಯಿಂದಲೇ 3.22 ಕೋಟಿ ರೂ. ಪಂಗನಾಮ- ನಾಲ್ವರ ವಿರುದ್ಧ ಎಫ್‌ಐಆರ್‌

ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಮಹಾ ವಂಚನೆ: ಸಿಬ್ಬಂದಿಯಿಂದಲೇ 3.22 ಕೋಟಿ ರೂ. ಪಂಗನಾಮ- ನಾಲ್ವರ ವಿರುದ್ಧ ಎಫ್‌ಐಆರ್‌






ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದಿರುವ ಬೃಹತ್ ವಂಚನೆ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸೌಹಾರ್ದ ಸಹಕಾರಿ ಸಂಘದ ನಾಲ್ವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಸಂಘದ ಸುರತ್ಕಲ್‌ ಶಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿಕೊಂಡು ಚಿನ್ನಾಭರಣ ಮೇಲಿನ ಸಾಲ, ಠೇವಣಿ, ವಾಹನ ಖರೀದಿ ಸಾಲ ಹಾಗೂ ಇತರ ಸಾಲ ಯೋಜನೆಗಳ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಸೌಹಾರ್ದ ಸಹಕಾರ ಸಂಘಕ್ಕೆ 3.22 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.





ಸುರತ್ಕಲ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳೆಂದರೆ, ಕರ್ನಾಟಕ ರಾಜ್ಯ ವಿದ್ಯುತ್‌ ಸಹಕಾರಿ ಸಂಘದ ಸುರತ್ಕಲ್ ಶಾಖೆಯ ಗುಮಾಸ್ತೆಯಾದ ದೀಕ್ಷಾ ಶೆಟ್ಟಿ, ಸಂಸ್ಥೆಯ ಯೆಯ್ಯಾಡಿಯಲ್ಲಿ ಹೊಂದಿರುವ ಪ್ರಧಾನ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿ ಇ ಒ) ರಾಜೇಶ್ ಎಂ.ಬಿ., ಸುರತ್ಕಲ್ ಶಾಖೆಯ ವ್ಯವಸ್ಥಾಪಕ ರಕ್ಷಿತ್ ಎಂ. ಶೆಟ್ಟಿ ಹಾಗೂ ಕೊಡಿಯಾಲ್‌ಬೈಲ್ ಶಾಖೆಯ ಗುಮಾಸ್ತೆ ಪ್ರಿಯಾ.


ಈ ಬೃಹತ್ ಹಗರಣ ಸುರತ್ಕಲ್‌ ಶಾಖೆಯಲ್ಲಿ 2019ರಿಂದ 2023ರ ನಡುವೆ ನಡೆದಿದೆ ಎನ್ನಲಾಗಿದೆ. ಒಟ್ಟು ಅವ್ಯವಹಾರದ ಬಗ್ಗೆ ಸಹಕಾರಿ ಸಂಘದ ಪ್ರಭಾರ ಸಿಇಓ ಮಾಯಾ ಸುಧಾಕರ್ ತನಿಖೆ ನಡೆಸಿ ಆಡಳಿತ ಮಂಡಳಿಗೆ ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದರು.


ಈ ಅವಧಿಯಲ್ಲಿ ಸುರತ್ಕಲ್ ಶಾಖೆಯ ಗುಮಾಸ್ತೆ ದೀಕ್ಷಾ ಶೆಟ್ಟಿ 65 ಚಿನ್ನಾಭರಣ ಸಾಲವನ್ನು ಮಂಜೂರು ಮಾಡಿಕೊಂಡಿದ್ದರು. ಈ ಸಾಲಗಳ ಮೂಲಕ 2.11 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. 7.6 ಕಿಲೋ ಗ್ರಾಂ ಚಿನ್ನ ಅಡಮಾಡನ ಇಟ್ಟಿರುವ ದಾಖಲೆ ಸೃಷ್ಟಿಸಿ ಸಾಲ ನೀಡಿದ್ದು, ಎಲ್ಲ ಹಣವನ್ನು ತಾವೇ ಪಡೆದು ದುರುಪಯೋಗ ಮಾಡಿಕೊಂಡಿದ್ದಾರೆ.

ಚಿನ್ನವನ್ನು ಲಾಕರ್‌ನಿಂದ ಪಡೆದು ಸ್ವಂತಕ್ಕೆ ದುರುಪಯೋಗ ಮಾಡಿಕೊಂಡಿದ್ಧಾರೆ.


2024ರ ಎಪ್ರಿಲ್ 20ರಿಂದ ನೀಡಲಾದ ಚಿನ್ನಾಭರಣ ಸಾಲದ ಬಡ್ಡಿಯಲ್ಲಿ 26.59 ಲಕ್ಷ ರೂ.ಗಳನ್ನು ವಂಚಿಸಿ ದಾಖಲೆಯನ್ನು ನಾಶಪಡಿಸಿದ್ದಾರೆ.

2023ರ ಮಾರ್ಚ್‌ 30ರಂದು ವಾರ್ಷಿಕ ಲೆಕ್ಕ ಪರಿಶೋಧನೆ ವೇಳೆ ಪ್ರಿಯಾ ಹಾಗೂ ದೀಕ್ಷಾ ಚಿನ್ನಾಭರಣಗಳನ್ನು ಪರಿಶೀಲನೆಗಾಗಿ ಹಾಜರುಪಡಿಸಿದ್ದರು. ಬಳಿಕ ಅವುಗಳನ್ನು ಲಾಕರ್‌ಗಳಲ್ಲಿ ಜಮೆ ಮಾಡಿಲ್ಲ.


2021ರಲ್ಲಿ ಆರೋಪಿ ರಕ್ಷಿತ್ ಶೆಟ್ಟಿ ಸುರತ್ಕಲ್ ಶಾಖೆಯ ವ್ಯವಸ್ಥಾಪಕರಾಗಿದ್ದಾಗ ದೀಕ್ಷಾ ಶೆಟ್ಟಿ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅಗತ್ಯ ದಾಖಲೆ ಸಲ್ಲಿಸದೆ ಏಳು ಲಕ್ಷ ಸಾಲ ಪಡೆದು, ವಾಹನ ಖರೀದಿಸಿ ಅದನ್ನು ಬೇರೆಯವರ ಹೆಸರಿಗೆ ನೋಂದಾಯಿಸಿ ವಂಚನೆ ಮಾಡಿದ್ದರು.


ಈ ವಂಚನೆಯ ಬಗ್ಗೆ ಪ್ರಿಯಾ ಮತ್ತು ರಾಜೇಶ್ ಅವರಿಗೆ ಗೊತ್ತಿದ್ದರೂ ಅವರು ವಂಚನೆಯ ವಿಚಾರವನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಿಲ್ಲ.


ದೀಕ್ಷಾ ಎಸ್‌. ಶೆಟ್ಟಿ ಅವರು ಲಾಕರ್ ಕೀಯನ್ನು ದುರುಪಯೋಗಪಡಿಸಿ ಚಿನ್ನಾಭರಣಗಳನ್ನು ದುರ್ಬಳಕೆ ಮಾಡಿದ್ದಾರೆ. ಸುರತ್ಕಲ್ ಶಾಖೆಯಲ್ಲಿ ಠೇವಣಿದಾರರ ವಿಶ್ವಾಶ ಗಳಿಸಿ ಠೇವಣಿ ಪಡೆದು ಬ್ಯಾಂಕಿನ ತಂತ್ರಾಂಶದಲ್ಲಿ ನಮೂದು ಮಾಡದೆ ನಕಲಿ ಬಾಂಡ್‌ಗಳನ್ನು ನೀಡಿ 95.29 ಲಕ್ಷ ರೂ. ವಂಚಿಸಿದ್ದಾರೆ ಎಂದು ಸುರತ್ಕಲ್ ಪೊಲೀಸರು ಮಾಹಿತಿ ನೀಡಿದ್ದಾರೆ.





Ads on article

Advertise in articles 1

advertising articles 2

Advertise under the article