ಬೋನಿ ಕಪೂರ್‌ರೊಂದಿಗೆ ಮದುವೆಗೂ ಮುನ್ನ ವಿವಾಹಿತ ನಟನೊಂದಿಗೆ ನಟಿ ಶ್ರೀದೇವಿಗೆ ರಹಸ್ಯವಾಗಿ ಮದುವೆ - ವಿಷಯ ತಿಳಿದು ನಟನ ಪತ್ನಿ ಆತ್ಮಹತ್ಯೆಗೆ ಯತ್ನ
Saturday, October 12, 2024
ಮುಂಬೈ: ಬಾಲಿವುಡ್‌ನಲ್ಲಿ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಆಕರ್ಷಕ ಕಥೆಗಳಿವೆ. ಈ ಕಥೆಗಳು ಸ್ಟಾರ್‌ಗಳು ಯಶಸ್ಸಿನ ಹಾದಿಯಲ್ಲಿ ಎದುರಿಸಿರುವ ಸವಾಲುಗಳನ್ನು ತೋರಿಸುತ್ತವೆ. ಬಾಲಿವುಡ್ ಮಂದಿಯ ಡೇಟಿಂಗ್, ಬ್ರೇಕಪ್ ಎಲ್ಲವೂ ಸದಾ ಸುದ್ದಿಯಲ್ಲಿರುತ್ತಾರೆ. ಈ ಕಥೆ ನಮ್ಮನ್ನು 1980ರ ದಶಕಕ್ಕೆ ಕರೆದೊಯ್ಯುತ್ತದೆ.
1980 ಮತ್ತು 1990ರ ದಶಕಗಳಲ್ಲಿ ವಿವಾಹೇತರ ಸಂಬಂಧಗಳು ಅಸಾಮಾನ್ಯವಾಗಿರಲಿಲ್ಲ. ಇವುಗಳು ಸಾರ್ವಜನಿಕರ ಆಸಕ್ತಿಗೆ ಕಾರಣವಾಗುತ್ತಿತ್ತು. ವಿವಾಹೇತರ ಸಂಬಂಧಗಳು ಕೆಲವೊಮ್ಮೆ ಗಂಭೀರ ಪರಿಣಾಮಗಳನ್ನು ಬೀರುತ್ತಿದ್ದವು. ಮಿಥುನ್ ಚಕ್ರವರ್ತಿಯವರ ವಿವಾಹೇತರ ಸಂಬಂಧವು ಒಂದು ಆಘಾತಕಾರಿ ಘಟನೆಗೆ ಕಾರಣವಾಯಿತು. ಶ್ರೀದೇವಿಯವರೊಂದಿಗಿನ ಅವರ ಸಂಬಂಧದ ಬಗ್ಗೆ ಅವರ ಪತ್ನಿ ಯೋಗಿತಾ ಬಾಲಿ ತಿಳಿದಾಗ, ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ.
ಮಿಥುನ್ ಚಕ್ರವರ್ತಿ ಬಾಲಿವುಡ್‌ನಲ್ಲಿ ಅತ್ಯಂತ ಸುದೀರ್ಘ ಮತ್ತು ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರನ್ನು "ಡಿಸ್ಕೋ ಡ್ಯಾನ್ಸರ್" ಎಂದೇ ಕರೆಯಲಾಗುತ್ತದೆ. ಅವರ ಸಿನಿಮಾಗಳು ಅವರನ್ನು ಸದಾ ಸುದ್ದಿಯಲ್ಲಿರಿಸುತ್ತಿತ್ತು. ಅಷ್ಟೇ ಅವರ ವೈಯಕ್ತಿಕ ಜೀವನವು ಸುದ್ದಿಯಲ್ಲಿತ್ತು. ನಟಿ ಯೋಗಿತಾ ಬಾಲಿಯವರನ್ನು ಮದುವೆಯಾದಾಗ ಮಿಥುನ್ ಅವರು ನಟಿ ಶ್ರೀದೇವಿಯವರನ್ನು ಪ್ರೀತಿಸುತ್ತಿದ್ದರು. ಮಿಥುನ್ ಜೊತೆ ಮದುವೆಯಾದ ವದಂತಿಗಳು ಹರಿದಾಡಿದ್ದವು. ಈ ಜೋಡಿ 1985 ರಿಂದ 1988 ರ ಮದ್ಯದಲ್ಲಿ ಗುಪ್ತವಾಗಿ ಮದುವೆಯಾಗಿದೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಯೋಗಿತಾ ಬಾಲಿ ಈ ವೇಳೆ ಆತ್ಮಹತ್ಯೆಗೂ ಯತ್ನಿಸಿದ್ದೂ ಇದೆಯಂತೆ. ಈ ಘಟನೆಗಳ ಬಳಿಕ, ಶ್ರೀದೇವಿ ಮಿಥುನ್‌ರೊಂದಿಗಿನ ತಮ್ಮ ಮದುವೆಯನ್ನು ರದ್ದುಗೊಳಿಸಿದರು ಮತ್ತು ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ಶ್ರೀದೇವಿಯವರ ಬೋನಿ ಕಪೂರ್ ಜೊತೆಗಿನ ಮದುವೆಯೂ ವಿವಾದಗಳಿಂದ ಕೂಡಿತ್ತು. ಮಿಥುನ್ ಚಕ್ರವರ್ತಿ ಹಾಗೂ ಜೀತೇಂದ್ರ ಜೊತೆಗೂ ಶ್ರೀದೇವಿಗೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ.
ಮೊದಲಿಗೆ ಶ್ರೀದೇವಿ ಅವರ ಪ್ರೇಮ ಸಂಬಂಧ ವಿವಾಹಿತ ಮಿಥುನ್ ಚಕ್ರವರ್ತಿಯೊಂದಿಗೆ ನಡೆಯಿತು. ಆ ದಿನಗಳಲ್ಲಿ ಅವರು ಬೋನಿ ಕಪೂರ್ ಅವರನ್ನು ತಮ್ಮ ಅಣ್ಣ ಎಂದು ಕರೆಯುತ್ತಿದ್ದರು. ಬೋನಿ ಅವರ ಪತ್ನಿ ಮೋನಾ ಕೂಡ ನಟಿಯ ಆಪ್ತ ಸ್ನೇಹಿತೆಯಾಗಿದ್ದರು. ಆ ಸಮಯದಲ್ಲಿ ಶ್ರೀದೇವಿ ಮನೆ ಬದಲಾಯಿಸಬೇಕಾಗಿತ್ತು, ಈ ಕಾರಣದಿಂದಾಗಿ ಮೋನಾ ಶ್ರೀದೇವಿಗೆ ಕೆಲವು ದಿನಗಳವರೆಗೆ ತಮ್ಮ ಮನೆಯಲ್ಲಿ ಉಳಿಯಲು ಹೇಳಿದರು. ಆದರೆ, ಇದು ಮಿಥುನ್‌ಗೆ ಇಷ್ಟವಾಗಲಿಲ್ಲ, ಇದರಿಂದಾಗಿ ಅವರ ನಡುವೆ ಜಗಳಗಳು ನಡೆದವು. ಮಿಥುನ್‌ಗೆ ಶ್ರೀದೇವಿ ಮತ್ತು ಬೋನಿ ನಡುವೆ ಪ್ರೇಮ ಸಂಬಂಧವಿದೆ ಎಂದು ಅನಿಸುತ್ತಿತ್ತು. ಈ ಕಾರಣಕ್ಕಾಗಿ ಅವರು ಅಲ್ಲಿ ಉಳಿದಿದ್ದಾರೆ ಎಂದು ಭಾವಿಸಿದರು. ಹೀಗಾಗಿ ಒಮ್ಮೆ ಮಿಥುನ್‌ಗೆ ತೋರಿಸಲು ಶ್ರೀದೇವಿ ಬೋನಿಗೆ ರಾಖಿ ಕಟ್ಟಿದರು ಎಂಬ ಮಾತೂ ಕೇಳಿ ಬರುತ್ತಿದೆ.