-->
ಸ್ಮಾರ್ಟ್ ಫೋನ್ ನೋಡುವ ಮಕ್ಕಳಿಗೆ ಯಾವೆಲ್ಲಾ ತೊಂದರೆ ಕಾಡುತ್ತದೆ ಗೊತ್ತೇ? - ಅಧ್ಯಯನದಿಂದ ಶಾಕಿಂಗ್ ಸಂಗತಿ ಬಯಲು

ಸ್ಮಾರ್ಟ್ ಫೋನ್ ನೋಡುವ ಮಕ್ಕಳಿಗೆ ಯಾವೆಲ್ಲಾ ತೊಂದರೆ ಕಾಡುತ್ತದೆ ಗೊತ್ತೇ? - ಅಧ್ಯಯನದಿಂದ ಶಾಕಿಂಗ್ ಸಂಗತಿ ಬಯಲು



ಇಂದಿನ ಮಕ್ಕಳಿಗೆ ಮೊಬೈಲ್ ನೋಡುವುದಕ್ಕಿಂತ ಬೇರೇನು ಬೇಕಾಗಿಲ್ಲ. ಇಡೀ ದಿನ ಕಾರ್ಟೂನ್ ವೀಡಿಯೊಗಳನ್ನು ವೀಕ್ಷಿಸುತ್ತಾ ಕಾಲ ಕಳೆಯುತ್ತಾರೆ. ಪಾಲಕರು ತಮ್ಮ ಕೆಲಸ ಮಾಡಲು ಬಾಲ್ಯದಿಂದಲೇ ಮಕ್ಕಳನ್ನು ಮೊಬೈಲ್‌ಗೆ ಒಗ್ಗಿಸಿಬಿಡ್ತಾರೆ. ಪರಿಣಾಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಚಟವಾಗಿ ಪರಿಣಮಿಸಿದೆ. ಮಕ್ಕಳು ಪದೇ ಪದೇ ಫೋನ್ ಬಳಸುವುದರಿಂದ ಭಾರೀಮಟ್ಟದ ಹಾನಿಯಾಗಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ.

ಸ್ಟ್ರೀನ್ ಟೈಮ್ ಹೆಚ್ಚಾದಂತೆ ಸ್ಕೂಲಕಾಯದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಸಂಶೋಧನೆ ಸ್ಟ್ರೀನ್ ಟೈಮ್ ಹೆಚ್ಚಾದಂತೆ ಸ್ಕೂಲಕಾಯದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಸಂಶೋಧನೆ ತೋರಿಸಿದೆ. ಯುವಕರಲ್ಲಿ ಸ್ಕೂಲಕಾಯದ ಸಮಸ್ಯೆ ತುಂಬಾ ಹೆಚ್ಚಾಗಿದೆ. ದಿನವಿಡೀ ಮೊಬೈಲ್ ಫೋನಿನತ್ತ ಕಣ್ಣು ಹಾಯಿಸುವುದು ಕ್ರೀಡೆಯಲ್ಲೂ ಹಿಂಜರಿಕೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ತಜ್ಞರ ಪ್ರಕಾರ, ಮೊಬೈಲ್ ಪರದೆಯನ್ನು ದೀರ್ಘಕಾಲ ನೋಡುವುದು ಮಕ್ಕಳಿಗೆ ಅಪಾಯಕಾರಿ. ಆಟದ ಸಮಯದಲ್ಲಿ ಫೋನ್‌ಗಳ ಚಟದಿಂದ ಮಕ್ಕಳ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ದೇಹದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಾಧ್ಯವಾಗುದಿಲ್ಲ. ಹೀಗಾಗಿ ತೂಕ ಹೆಚ್ಚಾಗುತ್ತದೆ. ಸ್ಕೂಲಕಾಯದಂತಹ ಕಾಯಿಲೆಗಳಿಂದ ಮಕ್ಕಳನ್ನು ದೂರವಿರಿಸಲು ಕನಿಷ್ಠ 60 ನಿಮಿಷಗಳ ಕಾಲ ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಬೇಕು ಎನ್ನುತ್ತಾರೆ ವೈದ್ಯರು.

ಅತಿಯಾದ ಮೊಬೈಲ್ ಬಳಕೆ ಮಕ್ಕಳ ಬೆಳವಣಿಗೆಯ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಎಎಂ ಮೆಡಿಕಲ್ ಸೆಂಟರ್‌ನ ಮಕ್ಕಳ ತಜ್ಞೆ ಜಯತಿ ಸೇನ್‌ಗುಪ್ತಾ ಹೇಳುತ್ತಾರೆ. ಮೊಬೈಲ್ ಮೂಲಕ ಸಾಕಷ್ಟು ವಿಷಯಗಳನ್ನ ಕಲಿಯಬಹುದು. ಆದಾಗ್ಯೂ, ದೀರ್ಘಾವಧಿಯ ಮೊಬೈಲ್‌ ವೀಕ್ಷಣೆಯ ಋಣಾತ್ಮಕ ಪರಿಣಾಮಗಳು ಧನಾತ್ಮಕತೆಯನ್ನು ಮೀರಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಒಂದು ದಿನದಲ್ಲಿ ನೀವು ಮೊಬೈಲ್ ಫೋನ್ ಮುಂದೆ ಕಳೆಯುವ ಸಮಯವು ನಿಮ್ಮ ಕಾರ್ಯಕ್ಷಮತೆ, ಮನಸ್ಥಿತಿ ಅಥವಾ ಕಲಿಕೆಯ ಮೇಲೆ ಪರಿಣಾಮ ಬೀರಬಹುದು. ಇದು ಮಕ್ಕಳ ಭಾಷಾ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಟಿವಿ ಅಥವಾ ಮೊಬೈಲ್ ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವ ಪೋಷಕರು ತಮ್ಮ ಮಕ್ಕಳಿಗೆ ಅದೇ ಅಭ್ಯಾಸವನ್ನ ರವಾನಿಸುತ್ತಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ, ಈ ಅಭ್ಯಾಸವು ನಂತರ ಬೊಜ್ಜು, ನಿದ್ರೆ ಸಮಸ್ಯೆಗಳು, ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ.

ಕಳೆದ 3 ದಶಕಗಳಲ್ಲಿ ಯುನೈಟೆಡ್ ಸ್ಟೇಟ್ಸ್'ನಲ್ಲಿ ಹದಿಹರೆಯದ ಮಕ್ಕಳಲ್ಲಿ ಬೊಜ್ಜು ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸಿವೆ. ಯುನೈಟೆಡ್ ಸ್ಟೇಟ್ಸ್'ನಲ್ಲಿ ಮಕ್ಕಳಲ್ಲಿ ಸ್ಕೂಲಕಾಯತೆಯ ಪ್ರಮಾಣವು ಸುಮಾರು 17 ಪ್ರತಿಶತದಷ್ಟಿದೆ. ವಿಶೇಷವಾಗಿ ಟಿವಿ ನೋಡುವುದರಿಂದ ಮಕ್ಕಳು ಅಧಿಕ ತೂಕ ಮತ್ತು ಬೊಜ್ಜು ಹೊಂದುವ ಅಪಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಮಕ್ಕಳನ್ನು ಪೋಷಕರು ಮೊಬೈಲ್, ಟಿವಿಗಳಿಂದ ದೂರವಿಡಬೇಕಾಗಿದೆ.

Ads on article

Advertise in articles 1

advertising articles 2

Advertise under the article