ನನ್ನ ಪತಿಗೆ ಮೆಹಂದಿ ವಾಸನೆ ಆಗೋಲ್ಲ ಅದಕ್ಕೆ ಮದುವೆಗೆ ಹಾಕಿಕೊಂಡಿಲ್ಲ - ಸೋನಾಕ್ಷಿ ಸಿನ್ಹಾ
ಮುಂಬೈ: ದಬಾಂಗ್ ಸಿನಿಮಾ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ದೊಡ್ಡ ಸುದ್ದಿಯಾಗಿತ್ತು. ಸೋನಾಕ್ಷಿ ಪರಜಾತಿಯ ಯುವಕನನ್ನು ಮದುವೆ ಆಗುದಕ್ಕೆ ಕುಟುಂಬದಲ್ಲಿ ಮನಸ್ಥಾಪವಿದೆ ಎನ್ನಲಾಗಿದೆ. ಅಲ್ಲದೆ ಸಿಂಪಲ್ ಆಗಿ ನಡೆದ ಮದುವೆ ಬಗ್ಗೆ ಸಾಕಷ್ಟು ಗಾಸಿಪ್ ಹಬ್ಬಿತ್ತು. ಆದರೆ ಇದಾವುದಕ್ಕೂ ಕಿವಿಗೊಡದೆ ದಂಪತಿಗಳಿಬ್ಬರೂ ಜಾಲಿಯಾಗಿ ಜೀವನ ನಡೆಸುತ್ತಿದ್ದಾರೆ. ತೀರಾ ಸಿಂಪಲ್ ಆಗಿ ಮದುವೆ ಮಾಡಿಕೊಂಡ ಸೋನಾಕ್ಷಿಯವರ ತಾಯಿ ಮದುವೆಯಲ್ಲಿ ಧರಿಸಿದ್ದ ಸೀರೆಯನ್ನು ತಮ್ಮ ಮದುವೆಯಲ್ಲಿ ಧರಿಸಿದ್ದರು. ಯಾವುದೇ ದುಬಾರಿ ಒಡವೆ ಇಲ್ಲದೆ, ಸಂಗೀತ್, ಮೆಹಂದಿ ಇಲ್ಲದೆ ಸೋನಾಕ್ಷಿ ಮದುವೆಯಾಗಿತ್ತು.
ಈ ಬಗ್ಗೆ ಸೋನಾಕ್ಷಿ ಸಿನ್ಹಾ ಮಾತನಾಡಿ, 'ಮದುವೆಯಲ್ಲಿ ತಾನು ಧರಿಸಿದ್ದು ನನ್ನ ತಾಯಿಯ ಸೀರೆ ಹಾಗೂ ಅವರದ್ದೇ ಆಭರಣಗಳು. ಕೆಂಪು ಸೀರೆಯನ್ನು ನಾನು ಖರೀದಿಸಿದ್ದು, ಬಿಳಿ ಸೀರೆ ನನ್ನ ತಾಯಿಯದ್ದು. ಕೆಂಪು ಬಣ್ಣದ ಆಲ್ಟಾ ಧರಿಸಲು ಉದ್ದೇಶ ಏನೂ ಇಲ್ಲ ಆದರೆ ನಿಜ ಹೇಳಬೇಕು ಅಂದ್ರೆ ನಾನು ತುಂಬಾ ಸೋಂಬೇರಿ ಮೂರು ನಾಲ್ಕು ಗಂಟೆಗಳ ಕಾಲ ಮೆಹೇಂದಿ ಹಾಕಿಸಿಕೊಂಡು ನಾನು ಕೂರಲು ಇಷ್ಟವಿರಲಿಲ್ಲ ಅಲ್ಲದೆ ಫೋನ್ ಮುಟ್ಟಲು ಆಗುವುದಿಲ್ಲ ಬೇರೆ ಯಾವ ಕೆಲಸನೂ ಮಾಡಲು ಆಗದು. ಮೆಹೇಂದಿ ಒಣಗಿ ಉದುರುವ ಸಮಯದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ ಅಲ್ಲದೆ ನನ್ನ ಗಂಡ ಜಹೀರ್‌ಗೆ ಮೆಹಂದಿ ವಾಸನೆ ಅಂದ್ರೆ ಆಗಲ್ಲ. ಜಹೀರ್ ಕುಟುಂಬದಲ್ಲಿ ಮೆಹೇಂದಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ, ನನಗೂ ಸ್ವಾಗತ ಮಾಡಿದ್ದರು ಅದರೆ ನಾನು ಹಾಕಿಕೊಳ್ಳುವುದಿಲ್ಲ ಬರಲ್ಲ ಅಂತ ಹೇಳಿದೆ ಅದರೂ ಒತ್ತಾಯ ಮಾಡಿದ ಕಾರಣ ನಾನು ಹೋಗಿ ಹಾಯ್ ಬಾಯ್ ಹೇಳಿ ಬಂದೆ. ನನ್ನ ಹೀರಾಮಂಡಿ ಪಾತ್ರಕ್ಕೆ ಪ್ರತಿದಿನ ಸೆಟ್‌ಗೆ ಭೇಟಿ ಕೊಟ್ಟಾಗ ಆಲ್ಟಾ ಹಾಕಿಕೊಳ್ಳುತ್ತಿದ್ದೆ...ಅಲ್ಲಿಂದ ಈ ಐಡಿಯಾ ಬಂತು. ಆಲ್ಟಾ ಹಾಕಿಕೊಳ್ಳುವುದು ತುಂಬಾ ಸುಲಭ, ಸಮಯ ಉಳಿಯುತ್ತದೆ ಹಾಗೂ ಚೆನ್ನಾಗಿ ಕಾಣಿಸುತ್ತದೆ' ಎಂದ ಗಲಾಟಾ ಕಾರ್ಯಕ್ರಮದಲ್ಲಿ ಸೋನಾಕ್ಷಿ ಮಾತನಾಡಿದ್ದಾರೆ.
ಸ್ಟಾರ್ ಫ್ಯಾಮಿಲಿ ಆಗಿರುವ ಕಾರಣ ಅದ್ಧೂರಿಯಾಗಿ ಮದುವೆ ಆಗಬೇಕು ಅನ್ನೊ ಒತ್ತಾಯ ಹೆಚ್ಚಿತ್ತು ಆದರೆ ನಾವಿಬ್ಬರೂ ತುಂಬಾ ಕ್ಲಿಯರ್ ಆಗಿದ್ವಿ ನಮಗೆ ಯಾವ ರೀತಿಯಲ್ಲಿ ಮದುವೆ ಆಗಬೇಕು ಎಂದು. ಮೂರ್ನಾಲ್ಕು ವರ್ಷಗಳ ಹಿಂದೆ ನನ್ನ ಸಹೋದರನ ಮದುವೆ ನಡೆದಾಗ ಸಣ್ಣ ಪುಟ್ಟ ಕಾರ್ಯಕ್ರಮ ಅಂದುಕೊಂಡರೂ ಐದು ಸಾವಿರ ಜನರು ಇರುತ್ತಿದ್ದರು. ಅಂದೇ ನಿರ್ಧಾರ ಮಾಡಿದೆ ನನ್ನ ಮದುವೆ ಈ ರೀತಿಯಲ್ಲಿ ನಡೆಯಬಾರದು ಎಂದು. ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿ ಆಗಿದ್ದ ಖುಷಿ ಇದೆ. ಮದುವೆಗೆ ನಾಲ್ಕೈದು ಬಟ್ಟೆಗಳನ್ನು ಡಿಸೈನ್ ಮಾಡುತ್ತೀನಿ ಎಂದು ನನ್ನ ಸ್ಟೈಲಿಸ್ಟ್ ಹೇಳುತ್ತಿದ್ದರು ಆದರೆ ನಾನು ಬದಲಾಯಿಸಿದ್ದು ಒಂದೇ ಬಟ್ಟೆ ಹೀಗಾಗಿ ಗ್ರ್ಯಾಂಡ್ ಆಗಿ ಆಗಿಲ್ಲ ಎಂದು ಅನೇಕರು ಬೇಸರ ಮಾಡಿಕೊಂಡಿದ್ದಾರೆ ಎಂದು ಸೋನಾಕ್ಷಿ ಹೇಳಿದ್ದಾರೆ.