ಮಂಗಳೂರು: ಯುವತಿಗೆ ನಡುರಾತ್ರಿಯಲ್ಲಿ ವೀಡಿಯೋ ಕರೆ - ಯುವಕನಿಗೆ ಮಹಿಳೆಯರಿಂದ ಬಿತ್ತು ಗೂಸಾ
Sunday, October 6, 2024
ಮಂಗಳೂರು: ನಡುರಾತ್ರಿ ಯುವತಿಯೊಬ್ಬಳಿಗೆ ವೀಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ಸೇರಿ ಯುವಕನಿಗೆ ಯರ್ರಾಬಿರ್ರಿ ಕಪಾಳಮೋಕ್ಷ ಮಾಡಿದ ಘಟನ ನಗರದ ಕೂಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಇದರ ವೀಡಿಯೋ ವೈರಲ್ ಆಗಿದೆ.
ಕೂಳೂರಿನ ಜನರಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ಮುಸ್ಲಿಂ ಯುವಕ ತಡರಾತ್ರಿ ಯುವತಿಯೊಬ್ಬಳಿಗೆ ಕರೆ ಮಾಡಿ ಅಸಭ್ಯ ರೀತಿಯಲ್ಲಿ ವರ್ತಿಸಿದ್ದನೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಬ್ಬರು ಅಂಗಡಿಗೆ ನುಗ್ಗಿ ಈ ಬಗ್ಗೆ ಯುವಕನನ್ನು ಪ್ರಶ್ನಿಸಿ ಯರ್ರಾಬಿರ್ರಿ ಗೂಸಾ ಕೊಟ್ಟಿದ್ದಾರೆ. ಅಲ್ಲದೆ ಮಹಿಳೆಯರೊಂದಿಗೆ ಬಂದಿದ್ದವರು ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಹೋಗುವ ದೃಶ್ಯವೂ ವೀಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಮಹಿಳೆಯರು ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.