ಸೆಕ್ಸ್ ವಿಡಿಯೋ ಇಟ್ಟುಕೊಂಡು ಉದ್ಯಮಿ ಮುಮ್ತಾಜ್ ಆಲಿ ಹನಿಟ್ರ್ಯಾಪ್: ಆರೋಪಿಗಳು ನಾಪತ್ತೆ: ಪೊಲೀಸ್ ಕಮೀಷನರ್ ( VIDEO)
ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮತ್ತು ಉದ್ಯಮಿ ಮುಮ್ತಾಜ್ ಅಲಿ ವಿರುದ್ಧ ನಡೆದ ಹನಿಟ್ರ್ಯಾಪ್ ಕೇಸ್ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ತಂಡ ತಲೆಮರೆಸಿಕೊಂಡಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಆರೋಪದ ಪ್ರಕಾರ, ರೆಹಮತ್ ಎಂಬ ಮಹಿಳೆ ಮತ್ತು ಆಕೆಯ ಸಹಚರರಾದ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್, ಮತ್ತು ಸಿರಾಜ್ ಇವರುಗಳು ಮುಮ್ತಾಜ್ ಅವರ ಸೆಕ್ಸ್ ವಿಡಿಯೋ ಬಳಸಿಕೊಂಡು ಬ್ಲಾಕ್ ಮೇಲ್ ನಡೆಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಮುಮ್ತಾಜ್ ಅಲಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡ ವಾಯ್ಸ್ ಮೆಸೇಜ್‌ನಲ್ಲಿ ಕೆಲ ಆರೋಪಿಗಳ ಹೆಸರನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಮುಮ್ತಾಜ್ ಅಲಿ ಅವರ ಸಹೋದರ ಹೈದರ್ ಆಲಿ,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆರೋಪಿಗಳ ತಂಡವು 50 ಲಕ್ಷಕ್ಕೂ ಹೆಚ್ಚು ಹಣ ದೋಚಿದ ಆರೋಪ ಎದುರಿಸುತ್ತಿದ್ದಾರೆ. ಈ ಮೊತ್ತದಲ್ಲಿ 25 ಲಕ್ಷವನ್ನು ಚೆಕ್ ಮೂಲಕ ಪಡೆದಿದ್ದಾರೆ ಎನ್ನಲಾಗಿದೆ.
ಆರೋಪಿಗಳ ತಲೆಮರೆಸಿಕೊಳ್ಳುವ ಪ್ರಯತ್ನದ ಬೆನ್ನಲ್ಲೆ, ಅವರನ್ನು ವಿದೇಶಕ್ಕೆ ಹೋಗದಂತೆ ಲುಕ್‌ಔಟ್ ನೋಟಿಸ್ (ಎಲ್ಓಸಿ) ಜಾರಿಗೊಳಿಸಲಾಗಿದೆ ಎಂದು ಕಮೀಷನರ್ ಹೇಳಿದ್ದಾರೆ.