ಬಿಎಸ್‌ಎನ್ಎಲ್‌ಗೆ ಮೂಗುದಾರ ಹಾಕಿದ ಜಿಯೋ: 10ರೂ.ಗೂ ಕಡಿಮೆ ಆಫರ್‌ನಲ್ಲಿ 2ಜಿಬಿ ಆಫರ್ ನೀಡಿದ ಅಂಬಾನಿ
Wednesday, November 6, 2024
ಮುಂಬೈ: ಕಳೆದ ನಾಲ್ಕೈದು ತಿಂಗಳಿನಿಂದ ವೇಗವಾಗಿ ಬೆಳೆಯುತ್ತಿರುವ ಬಿಎಸ್‌ಎನ್‌ಎಲ್‌ಗೆ ಮೂಗುದಾರ ಹಾಕಲು ರಿಲಯನ್ಸ್ ಜಿಯೋ ಎರಡು ಹೊಸ ಆಫರ್ ಪರಿಚಯಿಸಿದೆ. ಈ ಎರಡು ಆಫರ್‌ಗಳು ಬಳಕೆದಾರರ ಜೇಬಿಗೆ ಕತ್ತರಿ ಹಾಕುವುದನ್ನು ತಡೆಯಲಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. 90 ದಿನದ 899 ರೂಪಾಯಿ ಮತ್ತು 98 ದಿನದ 999 ರೂಪಾಯಿ ಎರಡು ಪ್ರಿಪೇಯ್ಡ್ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುವ ಮತ್ತು ಹೊಸಬರನ್ನು ಸೆಳೆಯಲು ಮುಕೇಶ್ ಅಂಬಾನಿ ಕಂಪನಿ ಮುಂದಾಗಿದೆ.
ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರು 899 ರೂ. ರಿಚಾರ್ಜ್ ಮಾಡಿಕೊಂಡರೆ ಯಾವುದೇ ನೆಟ್‌ವರ್ಕ್‌ಗೆ 90 ದಿನಗಳವರೆಗೆ ಅನಿಯಮಿತವಾಗಿ ಕಾಲ್ ಮಾಡಬಹುದು. ಹಾಗೆಯೇ 90ದಿನಗಳವರೆಗೆ ಪ್ರತಿದಿನ ನಿಮಗೆ 2ಜಿಬಿ ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ 20ಜಿಬಿ ಡೇಟಾವನ್ನು ಉಚಿತವಾಗಿ ರಿಲಯನ್ಸ್ ಜಿಯೋ ಕೊಡುತ್ತಿದೆ. ಉಳಿದಂತೆ ಪ್ರತಿದಿನ 100 ಉಚಿತ ಎಸ್ಎಂಎಸ್, ಜಿಯೋ ಆ್ಯಪ್, ಜಿಯೋ ಕ್ಲೌಡ್, ಜಿಯೋ ಟಿವಿಗೆ ಉಚಿತವಾಗಿ ಸಬ್‌ಸ್ಕ್ರಿಪ್ಷನ್ ಸಿಗಲಿದೆ. ನಿಯಮಿತವಾಗಿ ನೆಟ್ ಬಳಸೋ ಗ್ರಾಹಕರಿಗೆ ಇದು ಬಜೆಟ್ ಫ್ರೆಂಡ್ಲಿ ಪ್ರಿಪೇಯ್ಡ್ ಪ್ಲಾನ್ ಆಗಿದೆ.
ಇನ್ನು ಜಿಯೋದ ಮತ್ತೊಂದು ಪ್ಲಾನ್ ಬೆಲೆ 999 ರೂಪಾಯಿ ಆಗಿದೆ. ಈ ಆಫರ್‌ನಲ್ಲಿ ಪ್ರತಿದಿನ 2ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 100 ಎಸ್ಎಂಎಸ್ ಸಿಗುತ್ತದೆ. ಜಿಯೋ ಕ್ಲೌಡ್, ಜಿಯೋ ಸಿನಿಮಾ (ಸ್ಪೋರ್ಟ್ಸ್ ಮತ್ತು ಮೂವೀಸ್) ಜಿಯೋ ಟಿವಿಯ ಫ್ರೀ ಆಕ್ಸೆಸ್ ಸಿಗುತ್ತದೆ. ಜಿಯೋ ಟಿವಿಯಲ್ಲಿ 800+ ಟಿಬಿ ಚಾನೆಲ್, 100+ ಹೆಚ್‌ಡಿ ಚಾನೆಲ್ ವೀಕ್ಷಣೆ ಮಾಡಬಹುದು.
ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಬಳಕೆದಾರರಿಗಾಗಿ 1,198 ರೂಪಾಯಿಯಲ್ಲಿ 1 ವರ್ಷದ ಪ್ಲಾನ್ ನೀಡಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಗ್ರಾಹಕರಿಗೆ ಯಾವುದೇ ನೆಟ್‌ವರ್ಕ್‌ಗೆ 300 ನಿಮಿಷದವರೆಗೆ ಉಚಿತವಾಗಿ ಮಾತನಾಡಬಹುದು. ಪ್ರತಿತಿಂಗಳು 3GB ಡೇಟಾ 3G/4G ನೆಟ್‌ವರ್ಕ್ ಸಿಗಲಿದೆ. ಪ್ರತಿ ತಿಂಗಳು 300 ಉಚಿತ ಎಸ್‌ಎಂಎಸ್ ಸಿಗಲಿದೆ.
ಬಿಎಸ್ಎನ್‌ಎಲ್ ತನ್ನ ಮತ್ತೊಂದು 365 ದಿನದ ವ್ಯಾಲಿಡಿಟಿಯ ಪ್ಲಾನ್ ರೀಚಾರ್ಜ್ ಮೇಲೆ 100 ರೂಪಾಯಿ ಕಡಿಮೆ ಮಾಡಿದ್ದು, ಈ ಆಫರ್ ಕೇವಲ ನವೆಂಬರ್ 7ರವರೆಗೆ ಮಾತ್ರ ಲಭ್ಯವಿರಲಿದೆ. 1999 ರೂಪಾಯಿ ಬದಲಾಗಿ 1899 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಈ ಆಫರ್‌ನಲ್ಲಿ ಬಳಕೆದಾರರಿಗೆ ಒಟ್ಟು 600GB ಡೇಟಾ, 100 ಉಚಿತ ಎಸ್‌ಎಂಎಸ್ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ