-->
ಕೇವಲ 10 ಲಕ್ಷ ರೂ.ಗೆ ಇಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ ಸ್ಕೋಡಾ

ಕೇವಲ 10 ಲಕ್ಷ ರೂ.ಗೆ ಇಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ ಸ್ಕೋಡಾ


ಇಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಗ್ರಾಹಕರ ಕೈಗೆಟುಕುವ ದರದಲ್ಲಿ ಇಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಸ್ಕೋಡಾ ಕಂಪೆನಿ ಅಧಿಕೃತವಾಗಿ ಘೋಷಿಸಿದೆ. ಹೊಸ ಇಲೆಕ್ಟ್ರಿಕ್ ಕಾರ್ ಕುಶಾಕ್ SUV ಶೈಲಿಯಲ್ಲೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಕೋಡಾ ಕಂಪೆನಿಯ ಔರಂಗಾಬಾದ್ ಕಾರ್ಖಾನೆಯಲ್ಲಿ ಇಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಗುರಿ ಇಟ್ಟುಕೊಂಡಿದೆ.

ಸ್ಕೋಡಾ ಕಂಪೆನಿಯ ನೀತಿ ನವೀಕರಣಗಳನ್ನು, CAFE 3 ನಿಯಮಗಳು ಮತ್ತು EV ಮತ್ತು ಹೈಬ್ರಿಡ್ ತೆರಿಗೆಯ ಬಗ್ಗೆ ಸರ್ಕಾರದ ನಿಲುವನ್ನು ಮತ್ತು ಉತ್ಪಾದನೆಗೆ ಅನುಮತಿ ನೀಡುವ ಬಗ್ಗೆ ನಿಗಾ ವಹಿಸುತ್ತಿದೆ. EV ಇಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲೇ ಉತ್ಪಾದಿಸಲು ಕಾನೂನು ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದಕ್ಕೆ ಭಾರತ ಸರ್ಕಾರದ ಅನುಮತಿ ಸೇರಿದಂತೆ ಹಲವು ವಿಚಾರಗಳ ಕುರಿತು ಸ್ಕೋಡಾ ಚರ್ಚಿಸುತ್ತಿದೆ. 

ಸ್ಕೋಡಾ ಕೈಗೆಟುಕುವ ದರದಲ್ಲಿ ಇಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಕಾರು ಲಭ್ಯವಾಗುವ ಕಾರಣ ವಹಿವಾಟು ವಿಸ್ತರಿಸಲು ಸಾಧ್ಯವಾಗುತ್ತದೆ. ಸ್ಥಳೀಕರಣದ ಮೇಲೆ ಕೇಂದ್ರೀಕರಿಸುವ ಮೂಲಕ, ಸ್ಕೋಡಾ ಇದರ ವೆಚ್ಚವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಇದು EVಯನ್ನು ವಿಶಾಲ ಮಾರುಕಟ್ಟೆಗೆ ಕೈಗೆಟುಕುವಂತೆ ಮಾಡುತ್ತದೆ.

ಭಾರತವು ಸ್ಕೋಡಾಗೆ ಜಾಗತಿಕವಾಗಿ ಉತ್ತಮ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕಂಪೆನಿಯು ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧವಿಲ್ಲ. ಅಳೆದು ತೂಗಿ ತನ್ನ ಬ್ರ್ಯಾಂಡ್ ವ್ಯಾಲ್ಯೂ ಉಳಿಸಿಕೊಂಡು ಕಾರುಗಳನ್ನು ನೀಡಲು ಸಜ್ಜಾಗಿದೆ. ಸ್ಕೋಡಾದ ಕೈಗೆಟುಕುವ ಬೆಲೆಯ EV 2027 ರ ನಂತರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು EV ವಿಭಾಗದಲ್ಲಿ ಎರಡು ಪ್ರೀಮಿಯಂ ಕಾರುಗಳನ್ನು - Enyaq EV ಮತ್ತು Elroq SUV ಗಳನ್ನು ಪರಿಚಯಿಸಲಿದೆ.

ನಿರೀಕ್ಷಿತ ಕುಶಾಕ್ ಗಾತ್ರದ EV ಮಾರುಕಟ್ಟೆ ಪ್ರವೃತ್ತಿಗಳಿಗೆ ಹೊಂದಿಕೆಯಾಗುತ್ತದೆ. ಏಕೆಂದರೆ ಭಾರತೀಯರು ದೊಡ್ಡ ಕಾರುಗಳನ್ನು ಖರೀದಿಸುವತ್ತ ಒಲವು ತೋರುತ್ತಿದ್ದಾರೆ. ಸ್ಕೋಡಾದ ಕೈಗೆಟುಕುವ ಬೆಲೆಯ EV ಬಿಡುಗಡೆಯಾಗುವ ಹೊತ್ತಿಗೆ, ಕುಶಾಕ್ 2-3 ಸಾಲು ಸೀಟು ಆಯ್ಕೆ ಕಾರನ್ನು ಬಿಡುಗಡೆ ಮಾಡಲಿದೆ. ಇದು ವಿಶಾಲ ಮಾರುಕಟ್ಟೆಯನ್ನು ಆಕರ್ಷಿಸತ್ತದೆ. ಜೊತೆಗೆ ಎಲೆಕ್ಟ್ರಿಕ್ SUV ಯನ್ನು ತಯಾರಿಸಲು ಸ್ಕೋಡಾಗೆ ಉತ್ತಮ ವೇದಿಕೆ ಕಲ್ಪಿಸಲಿದೆ. 

ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ, ಟೊಯೋಟಾ, MG, ಹೋಂಡಾ, ಹ್ಯುಂಡೈ ಮತ್ತು ಕಿಯಾ ಮುಂತಾದ ಸ್ಥಾಪಿತ ಕಂಪನಿಗಳೊಂದಿಗೆ ಸ್ಕೋಡಾ ಸ್ಪರ್ಧಿಸುತ್ತದೆ. ಮಧ್ಯಮ ಗಾತ್ರದ EV ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.


Ads on article

Advertise in articles 1

advertising articles 2

Advertise under the article