-->
25ನೇ ವಯಸ್ಸಿಗೆ ವಿವಾಹ, 12ವರ್ಷ ಚಿಕ್ಕವನೊಂದಿಗೆ ಲವ್, ಈಗ ಮತ್ಯಾರದ್ದೋ ಜೊತೆಗೆ ಡೇಟಿಂಗ್: ಇದು ನಟಿ ಮಲೈಕಾ ಅರೋರಾ ಜೀವನ

25ನೇ ವಯಸ್ಸಿಗೆ ವಿವಾಹ, 12ವರ್ಷ ಚಿಕ್ಕವನೊಂದಿಗೆ ಲವ್, ಈಗ ಮತ್ಯಾರದ್ದೋ ಜೊತೆಗೆ ಡೇಟಿಂಗ್: ಇದು ನಟಿ ಮಲೈಕಾ ಅರೋರಾ ಜೀವನ



ಬಾಲಿವುಡ್‌ ನೆಲದಲ್ಲಿ ತಮ್ಮ ರಿಲೇಶನ್‌ಶಿಪ್‌ನಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದ ನಟಿಯಂದ್ರೆ ಅದು ಮಲೈಕಾ ಅರೋರ. ಇತ್ತೀಚೆಗಷ್ಟೇ ಅರೋರಾ ಅರ್ಜುನ್ ಕಪೂರ್‌ನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದ ನಟಿಯ ಲವ್ ಲೈಫ್ ತುಂಬಾನೆ ಕಾಂಪ್ಲೆಕ್ಸ್ ಆಗಿದೆ ಅಂದ್ರೆ ತಪ್ಪಾಗಲ್ಲ. 
 
ನಟಿ ಮಲೈಕಾ ಅರೋರಾ ಸದಾ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಿಂದ ಗಾಸಿಪ್ ಟೌನ್‌ವರೆಗೆ, ನಟಿಯ ಬಗ್ಗೆ ಆಗಾಗ್ಗೆ ಕೆಲವು ಚರ್ಚೆಗಳು ನಡೆಯುತ್ತವೆ. ಮಲೈಕಾ ಮದುವೆ, ಡಿವೋರ್ಸ್, ಲವ್ ಬ್ರೇಕಪ್ ಎಲ್ಲವೂ ಚರ್ಚೆಯಾಗಿದ್ದ ವಿಚಾರಗಳೇ. 


ನಟಿ, ಮಾಡೆಲ್, ಡ್ಯಾನ್ಸರ್ ಹಾಗೂ ವಿಜೆಯಾಗಿದ್ದ ಮಲೈಕಾ ಅರೋರ ವಿವಾಹವಾಗಿದ್ದು ಅರ್ಬಾಜ್ ಖಾನ್‌ರನ್ನು. ತಮ್ಮ 25ನೇ ವಯಸ್ಸಿನಲ್ಲಿ 1998ರಲ್ಲಿ ಈ ಜೋಡಿ ಮದುವೆಯಾಗಿತ್ತು. 2002ರಲ್ಲಿ ಇವರಿಗೆ ಅರ್ಹಾನ್ ಖಾನ್ ಜನಿಸಿದ್ದ. ಆದರೆ 19ವರ್ಷಗಳ ವೈವಾಹಿಕ ಜೀವನದ ಬಳಿಕ ಹೊಂದಾಣಿಕೆ ವಿಷಯದಿಂದಾಗಿ ಈ ಜೋಡಿ ಬೇರ್ಪಟ್ಟಿತ್ತು. 
 

ಇಬ್ಬರು ಡಿವೋರ್ಸ್ ಪಡೆದ ಅದೇ ವರ್ಷದಲ್ಲಿ ಅಂದರೆ 2016ರಲ್ಲಿ ಮಲೈಕಾ ಅರೋರಾ ತಮಗಿಂತ 12 ವರ್ಷ ಸಣ್ಣವರಾಗಿರುವ ಅರ್ಜುನ್ ಕಪೂರ್ ಅವರ ಲವ್ವಲ್ಲಿ ಬಿದ್ದಿದ್ದರು ಮಲೈಕಾ. ಇವರಿಬ್ಬರು ಅತೀ ಹೆಚ್ಚು ಚರ್ಚಿತ ಬಾಲಿವುಡ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. 


 

ಆರಂಭದಲ್ಲಿ ಸಂಬಂಧವನ್ನು ಸೀಕ್ರೆಟ್ ಆಗಿಟ್ಟ ಈ ಜೋಡಿ, ಬಳಿಕ ಸಾರ್ವಜನಿಕವಾಗಿ ಕೈ ಕೈ ಹಿಡಿದು, ತಿರುಗಾಡುವುದಕ್ಕೆ ಆರಂಭಿಸಿದ್ದರು. ಮಲೈಕಾ ಹೆಚ್ಚಾಗಿ ಅರ್ಜುನ್ ಕಪೂರ್‌ರೊಂದಿಗಿನ ಫೋಟೊಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಅರ್ಜುನ್ ಕಪೂರ್ ಹುಟ್ಟುಹಬ್ಬಕ್ಕೆ ವಿಶೇಷ ಫೊಟೊಗಳ ಮೂಲಕ ವಿಶ್ ಮಾಡಿದ್ದು ಇದೆ. 
 

ಕಳೆದ ಎಂಟು ವರ್ಷಗಳಿಂದ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಈ ಜೋಡಿ ಇದೀಗ ಬ್ರೇಕಪ್ ಮಾಡಿಕೊಂಡಿದೆ. ಇಬ್ಬರ ಬ್ರೇಕಪ್‌ಗೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ. ಆದರೆ ಇಬ್ಬರೂ ಬ್ರೇಕಪ್ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಿಲೇಶನ್‌ಶಿಪ್ ಗೆ ಸಂಬಂಧಿಸಿದ ಪೋಸ್ಟ್ ಮಾಡ್ತಾನೆ ಇರ್ತಾರೆ. 


ಇದೀಗ ಮಲೈಕಾ ಅರೋರಾ ಜೀವನದಲ್ಲಿ ಹೊಸ ವ್ಯಕ್ತಿ ಎಂಟ್ರಿ ಕೊಟ್ಟಂತೆ ಕಾಣುತ್ತಿದೆ. ಯಾಕಂದ್ರೆ ಕಳೆದ ಕೆಲವು ಸಮಯದಿಂದ ಮಲೈಕಾ ಅರೋರಾ, ಮಿಸ್ಟ್ರಿ ಮ್ಯಾನ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಲೈಕಾ ಅರೋರಾ ಮುಂಬೈನಲ್ಲಿ ನಿಗೂಢ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಕೈ ಕೈ ಹಿಡಿದಿದ್ದರು. ಇದು ಸಹ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಈ ಇಬ್ಬರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಯಾರಿದು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ. 


Ads on article

Advertise in articles 1

advertising articles 2

Advertise under the article