ವಾರದಲ್ಲಿ ಈತ ಮಾಡುವುದು 30ಗಂಟೆ ದುಡಿಮೆ ಆದರೆ ವಾರ್ಷಿಕ ಆದಾಯ 2.15ಕೋಟಿ ರೂ.
ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡಬೇಕೆಂಬ ಜಿಜ್ಞಾಸೆ ಎಲ್ಲರಲ್ಲೂ ಇರುತ್ತದೆ. ಈ ಬಗ್ಗೆ ಕೆಲ ದಿನಗಳಿಂದ ಚರ್ಚೆಯಾಗ್ತಿದೆ. ಕೆಲಸ ಹಾಗೂ ಜೀವನ ಸಮತೋಲನದ ಬಗ್ಗೆಯೂ ಜನರು ಮಾತನಾಡುತ್ತಿದ್ದಾರೆ. ಇಡೀ ದಿನ ಕೆಲಸ ಮಾಡಿದರೂ ಸಂಪಾದನೆ ಮಾತ್ರ ಹೆಚ್ಚಿಲ್ಲ ಎಂಬ ನೋವು ಕೆಲವೊಂದಿಷ್ಟು ಮಂದಿಯಾದಾದ್ರೆ, ಕೆಲಸ ಎಷ್ಟು ಮಾಡ್ತೇವೆ ಎಂಬುದು ಮುಖ್ಯವಲ್ಲ, ಕೆಲಸ ಹೇಗೆ ಮಾಡ್ತೇವೆ ಎಂಬುದು ಮುಖ್ಯ. ನಿಮ್ಮ ಬುದ್ಧಿವಂತಿಕೆಯ ಕೆಲಸದಿಂದ ಹಣ ಸಂಪಾದನೆ ಸಾಧ್ಯ ಎಂದು ವಾದ ಮಾಡುವವರು ಕೆಲವರಿದ್ದಾರೆ. ಇದಕ್ಕೆ ಸ್ಟೀವನ್ ಗುವೊ ಉತ್ತಮ ನಿದರ್ಶನ. ಈತ ವಾರದಲ್ಲಿ ಕೇವಲ 30ಗಂಟೆಗಳ ಕಾಲ ಕೆಲಸ ಮಾಡುವುದು. ಆದರೆ ಸ್ಟೀವನ್ ಗುವೊನ ಸಂಪಾದನೆ ವಾರ್ಷಿಕವಾಗಿ 2.15 ಕೋಟಿ.
ಸ್ಟೀವನ್ ಗುವೊ 24 ವರ್ಷದ ಯುವಕ. ಜೀವನವನ್ನು ಹೇಗೆ ಸಮತೋಲನ ಮಾಡಬೇಕು ಎಂಬುದನ್ನು ಈತ ಅರಿತಿದ್ದಾನೆ. ವಾರಕ್ಕೆ 30 ಗಂಟೆ ಕೆಲಸ ಮಾಡುವ ಈ ಉದ್ಯಮಿ ವಾರ್ಷಿಕವಾಗಿ 2.15 ಕೋಟಿ ಅಂದರೆ 254,000 ಡಾಲರ್ ಗಳಿಸುತ್ತಾನೆ.
ಸ್ವೀವನ್ ಗುವೊ ಯುನೈಟೆಡ್ ಸ್ಟೇಟ್ ವಾಸಿ. ಬಾಲಿಯಲ್ಲಿ ವಾಸವಾಗಿದ್ದಾನೆ. ಜೀವನದಲ್ಲಿ ಸಮತೋಲನ ಬಯಸಿದ್ದರಿಂದ ಸ್ಟೀವನ್ ಗುವೊ, ಅಮೆರಿಕಾದಿಂದ ದೂರ ಬಂದಿರುವುದಾಗಿ ಹೇಳಿದ್ದಾರೆ. ಬಾಲಿಯಲ್ಲಿ ಜೀವನ ಎಂಜಾಯ್ ಮಾಡ್ತಿರುವ ಸ್ಟೀವನ್ ಗುವೊ, ಬಾಲಿ ನಿಜವಾಗಿಯೂ ಕೆಲಸ ಮತ್ತು ವೈಯಕ್ತಿಕ ಜೀವನ ಸಮತೋಲನಗೊಳಿಸುವ ಸ್ಥಳ ಎಂದು ಗುವೋ ಹೇಳಿದ್ದಾನೆ. ಬೆಳಗ್ಗೆ ಗುವೋ ತಮ್ಮ ಬ್ಯುಸಿನೆಸ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾನೆ. ಮಧ್ಯಾಹ್ನದ ಮೇಲೆ ಸರ್ಫಿಂಗ್ ಮಾಡುವುದು ಮತ್ತು ಬಾಲಿ ಸಂಸ್ಕೃತಿಯನ್ನು ಆನಂದಿಸುವುದರಲ್ಲಿ ಸಮಯ ಕಳೆಯುತ್ತಾರೆ.
ಜೀವನವನ್ನು ಇಷ್ಟೆಲ್ಲ ಎಂಜಾಯ್ ಮಾಡುವ ಸ್ವೀವನ್ ಗುವೊ ಯಾರು ಎನ್ನುವ ಪ್ರಶ್ನೆ ನಿಮ್ಮೆಲ್ಲರನ್ನು ಕಾಡ್ತಿರಬಹುದು. ಸ್ವೀವನ್ ಗುವೊ ಒಬ್ಬ ಬ್ಯುಸಿನೆಸ್ ಮೆನ್. ತನ್ನ 12ನೇ ವಯಸ್ಸಿಗೇ ಈತ ದುಡಿಮೆ ಶುರು ಮಾಡಿದ್ದಾನೆ. ಆಟವಾಡಲು ಸ್ವೀವನ್, Minecraft ಸರ್ವರ್‌ಗಳನ್ನು ಹೋಸ್ಟ್ ಮಾಡಿದ್ದನು. ಕೆಲ ದಿನಗಳಲ್ಲೇ ಜನರು ಇದರ ಮೂಲಕ ಆಟವಾಡಲು ಬಯಸ್ತಿದ್ದಾರೆ ಎಂಬುದು ಗುವೊಗೆ ತಿಳಿಯಿತು. ಹಾಗಾಗಿ ಆನ್ಲೈನ್‌ಗೆ ಬರುವ ನಿರ್ಧಾರ ತೆಗೆದುಕೊಂಡರು. ಮೊದಲ ಬಾರಿಗೆ ಈತನಿಗೆ 50 ಡಾಲರ್ ಸಿಕ್ಕಿತ್ತು. ಕೆಲವೇ ತಿಂಗಳುಗಳಲ್ಲಿ ಇದರಿಂದ 10,000 ಡಾಲರ್ ಗಳಿಸಿದ್ದನು.
ಇಂಟರ್ ನೆಟ್ ನಲ್ಲಿ ಇಷ್ಟೊಂದು ಹಣವಿದೆ ಎಂಬುದು ಮೊದಲು ಸ್ವೀವನ್ ಗೆ ತಿಳಿದಿರಲಿಲ್ಲ. ಗಳಿಕೆ ಶುರುವಾಗ್ತಿದ್ದಂತೆ ಗೇಮ್ ಡೆವಲಪ್‌ಮೆಂಟ್ ಕಂಪನಿಯನ್ನು ಸ್ವೀವನ್ ಗುವೊ ಪ್ರಾರಂಭಿಸಿದ್ದನು. ಆದರೆ ಅದು ಕೈ ಹಿಡಿಯಲಿಲ್ಲ. ಗುವೊ ತಮ್ಮ ಕೆಲಸದಲ್ಲಿ ವಿಫಲವಾದನು. ಬಾರೀ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡ. ಗಳಿಸಿದ ಹಣವನ್ನು ಕಳೆದುಕೊಂಡ ಗುವೋ ತಪ್ಪೆಲ್ಲಾಗಿದೆ ಎಂಬುದನ್ನು ಹುಡುಕಾಡಿದ. ಅದು ಸಿಕ್ಕ ಮೇಲೆ ಹೇಗೆ ಇರಬೇಕೆಂದು ಕಂಡುಕೊಂಎ.
ಗೇಮ್ ಡೆವಲಪ್ ಮೆಂಟ್ ಕಂಪನಿ ಶುರು ಮಾಡಿದ್ದ ಗುವೊಗೆ, ವ್ಯವಹಾರಕ್ಕೆ ಮಾರ್ಕೆಟಿಂಗ್ ಬಹಳ ಮುಖ್ಯ ಎಂಬುದು ಅರಿವಾಯಿತು. ಅದನ್ನು ಕಲಿಯಲು ನಿರ್ಧರಿಸಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಎಕಾನಮಿ ಅಧ್ಯಯನ ಮಾಡಿದ್ದಾನೆ.
ಗುವೊ ಮಾರ್ಕ್ಸ್ ಉತ್ತಮವಾಗಿರಲಿಲ್ಲ. ಆಸಕ್ತಿ ಕೆಲಸಕ್ಕಿಂತ ವ್ಯಾಪಾರದ ಮೇಲೆ ಗಮನ ಹೆಚ್ಚಿತ್ತು. ಹಾಗಾಗಿ ಗುವೊ ಬ್ಯುಸಿನೆಸ್ ಆಯ್ಕೆ ಮಾಡ್ಕೊಂಡ. ಸದ್ಯ ಯುಎಸ್, ಫಿಲಿಪೈನ್ಸ್, ಯುಕೆ ಮತ್ತು ಭಾರತದಲ್ಲಿ 19 ಉದ್ಯೋಗಿಗಳೊಂದಿಗೆ ಗುವೊ ತಮ್ಮ ಕಂಪೆನಿ ನಡೆಸುತ್ತಿದ್ದಾನೆ. ಗುವೊ ಬ್ಯುಸಿನೆಸ್ ನಲ್ಲಿ ಖರ್ಜೂರ ಮಾರಾಟ ಮಾಡುವ ಆನ್‌ಲೈನ್ ಚಿಲ್ಲರೆ ವ್ಯಾಪಾರಿ, ಕೆ-ಪಾಪ್-ಪ್ರೇರಿತ ಸರಕುಗಳ ಅಂಗಡಿ ಮತ್ತು ಐಷಾರಾಮಿ ಕಾರುಗಳಿಗಾಗಿ ಪ್ರೀಮಿಯಂ ಕಾರ್ ಕವರ್‌ಗಳನ್ನು ಮಾರಾಟ ಮಾಡುವ ಕಂಪನಿ ಸೇರಿವೆ. ಪ್ರವಾಸದ ಮೇಲೆ ಆಸಕ್ತಿ ಹೊಂದಿರುವ ಗೆವೋ ಈವರೆಗೆ 15 ದೇಶಗಳಿಗೆ ಭೇಟಿ ನೀಡಿದ್ದಾನೆ.